ಬೆಲೆ ಕೇವಲ 55,999 ರೂ., 3-ವರ್ಷ ವಾರಂಟಿ: ಹೊಸ iVOOMi ಸ್ಕೂಟರ್ ಬಿಡುಗಡೆ
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತೈಯಾರಕ ಕಂಪನಿಯಾದ iVOOMi, ತನ್ನ ಹೊಸ S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್‌ಗೆ ಗ್ರ್ಯಾಫೀನ್ ಅಯಾನ್ ಮತ್ತು ಲಿಥಿಯಂ ಅಯಾನ್ ಎಂಬ ಎರಡು ಬ್ಯಾಟರಿ ಆಯ್ಕೆಗಳಿದ್ದು, ಗ್ರ್ಯಾಫೀನ್ ಅಯಾನ್ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 75+ ಕಿ.ಮೀ ಬಲಿಸಬಲ್ಲದು, ಇದರ ಬೆಲೆಯು ರೂ. 54,999 ಇದೆ. ಹಾಗೆಯೇ ಇನ್ನೊಂದು ಬ್ಯಾಟರಿ ಪ್ಯಾಕ್ ಆದ ಲಿಥಿಯಂ ಅಯಾನ್ ಸಿಂಗಲ್ ಚಾರ್ಜ್‌ನಲ್ಲಿ 85+ ಕಿ.ಮೀ ಓಡಬಲ್ಲದು, ಇದರ ಬೆಲೆಯು ರೂ. 64,999 ಇದೆ. ಕಂಪನಿಯು ಸ್ಕೂಟರ್ ಮೇಲೆ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತಿದೆ.
iVOOMi ಕಂಪನಿಯು ತನ್ನ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ ರೂ. 1,499 ರಿಂದ ಪ್ರಾರಂಭವಾಗುವ ಅನುಕೂಲಕರ EMI ಆಯ್ಕೆಗಳನ್ನು ಒದಗಿಸುತ್ತಿದೆ. ಈ ಹೊಸ ಇ-ಸ್ಕೂಟರ್ ಖರೀದಿಗೆ ಮುಂದಾಗುವ ಗ್ರಾಹಕರಿಗೆ ತೊಂದರೆಯಿಲ್ಲದಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. S1 ಲೈಟ್ ಸ್ಕೂಟರ್‌ಗಾಗಿ ಬುಕಿಂಗ್‌ಗಳು ಈಗಾಗಲೇ ಆರಂಭವಾಗಿವೆ ಎಂದು ಕಂಪನಿ ತಿಳಿಸಿದೆ.

ರೇಂಜ್ ಮತ್ತು ಚಾರ್ಜಿಂಗ್: iVOOMi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಪರ್ಫಾಮೆನ್ಸ್ ಮತ್ತು ವಿಶ್ವಾಸಾರ್ಹತೆಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿದೆ. ಇದು ಭಾರತದ ಹಗುರವಾದ ಚಾರ್ಜರ್ ಮತ್ತು ಜಲ-ನಿರೋಧಕ (Water-resistant) IP67 ಬ್ಯಾಟರಿಯೊಂದಿಗೆ ಬರುತ್ತದೆ. ಇದರ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಬಳಕೆದಾರರಿಗೆ ತೆಗೆಯುವಿಕೆ ಮತ್ತು ಮರುಹೊಂದಿಸಲು ಅನುಕೂಲವಾಗಲಿದೆ.
ಗ್ರ್ಯಾಫೀನ್ ಬ್ಯಾಟರಿ ಹೊಂದಿರುವ ರೂಪಾಂತರವು 45 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದ್ದರೇ, ಲಿಥಿಯಂ ರೂಪಾಂತರವು 55 ಕಿ.ಮೀ ಗರಿಷ್ಟ ವೇಗದಲ್ಲಿ ಚಲಿಸಬಲ್ಲದು. ಗ್ರ್ಯಾಫೀನ್ ರೂಪಾಂತರವು 3 ಗಂಟೆಗಳಲ್ಲಿ ಶೇ50 ರಷ್ಟು ಚಾರ್ಜ್ ಆಗುತ್ತದೆ, ಲಿಥಿಯಂ ರೂಪಾಂತರವು ಕೇವಲ 1.5 ಗಂಟೆಗಳಲ್ಲಿ ಶೇ50 ರಷ್ಟು ಮತ್ತು ಕೇವಲ 3 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗಬಲ್ಲದು ಎಂದು ಕಂಪನಿ ತಿಳಿಸಿದೆ.

ವೈಶಿಷ್ಟ್ಯಗಳು: ERW 1 ದರ್ಜೆಯ ಚಾಸಿಸ್‌ನೊಂದಿಗೆ ನಿರ್ಮಿಸಲಾದ ಈ ಸ್ಕೂಟರ್, 170mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. S1 Lite 18 ಲೀಟರ್‌ಗಳ ಅಂಡರ್ ಸೀಟ್ ಸ್ಟೋರೇಜ್, 12 ಮತ್ತು 10 ಇಂಚಿನ ವೀಲ್‌ಗಳು ಲಭ್ಯವಿದೆ. ಮೊಬೈಲ್ ಚಾರ್ಜಿಂಗ್‌ಗಾಗಿ USB ಪೋರ್ಟ್ (5V, 1A) ಮತ್ತು LED ಡಿಸ್‌ಪ್ಲೇ ಸ್ಪೀಡೋಮೀಟರ್‌ನಂತಹ ಅಗತ್ಯ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಬಣ್ಣಗಳು: ಹೊಸ S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಪರ್ಲ್ ವೈಟ್, ಮೂನ್ ಗ್ರೇ, ಸ್ಕಾರ್ಲೆಟ್ ರೆಡ್, ಮಿಡ್‌ನೈಟ್ ಬ್ಲೂ, ಟ್ರೂ ರೆಡ್ ಮತ್ತು ಪೀಕಾಕ್ ಬ್ಲೂ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರಲ್ಲಿ ಸುರಕ್ಷತೆ ಮತ್ತು ಭರವಸೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

iVOOMi ಕಂಪನಿಯು S1 ಸರಣಿಯಲ್ಲಿ, ಈಗಾಗಲೇ S1 ಮತ್ತು S1 2.0 ಎಂಬ ಎರಡು ರೂಪಾಂತರಗಳನ್ನು ಸಹ ನೀಡುತ್ತಿದೆ. ಇವುಗಳ ಬೆಲೆಯು ರೂ 74,999 ನಿಂದ ಆರಂಭವಾಗುತ್ತದೆ. ಇವು ಹೆಚ್ಚಿನ ಸಾಮರ್ಥ್ಯದ Li-ion ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿವೆ. ಈ ರೂಪಾಂತರಗಳು ಒಂದೇ ಚಾರ್ಜ್‌ನಲ್ಲಿ 120 ಕಿ.ಮೀಗಿಂತ ಹೆಚ್ಚು ಮೈಲೇಜ್ ಹಾಗೂ 58 ಕಿ.ಮೀ ಗಂ ಗರಿಷ್ಠ ವೇಗದಲ್ಲಿ ಚಲಿಸಬಲ್ಲವು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








