180 Km ರೇಂಜ್, 3 ವರ್ಷಗಳ ವಾರಂಟಿ: ಹಣದ ಖರ್ಚಿಲ್ಲದೇ ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಓಡಾಡಬಹುದು!

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಓಲಾ ಆಗಮನವು ಬಿರುಗಾಳಿಯನ್ನು ಸೃಷ್ಟಿಸಿದೆ, ಆದರೆ ಸಣ್ಣ ಸ್ಟಾರ್ಟ್-ಅಪ್ ಬ್ರ್ಯಾಂಡ್‌ಗಳು ಸಹ ಭರ್ಜರಿಯಾಗಿ ಮಾರಾಟ ಮಾಡುತ್ತೀವೆ. ಇನ್ನು ಕೆಲವು ದ್ವಿಚಕ್ರ ವಾಹನಗಳ ಪ್ರಮುಖ ಬ್ರ್ಯಾಂಡ್‌ಗಳನ್ನು ಪ್ರೇಕ್ಷಕರಾಗಿ ಬಿಟ್ಟಿವೆ. ಓಲಾ, ಎಥರ್ ಮತ್ತು ಓಕಿನಾವಾ ಬ್ರ್ಯಾಂಡ್ ಗಳು ಎಲೆಕ್ಟ್ರಿಕ್ ದ್ವಿಚಕ್ರ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಇನ್ನು ಈ ವಿಭಾಗದಲ್ಲಿ ಮರಿ ಬ್ರಾಂಡ್‌ಗಳು ಕೂಡ ಹೊಸ ಮಾದರಿಗಳನ್ನು ಪರಿಚಯಿಸಿ ಸಂಚಲನವನ್ನು ಸೃಷ್ಟಿಸುತ್ತಿದೆ. ಅದರಲ್ಲಿ ಒಂದು iVoomi ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ತರುವ ಬ್ರ್ಯಾಂಡ್ ಎಂದು ಹೆಸರು ಮಾಡಿದ್ದಾರೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ iVoomi ಕಂಪನಿಯು ಕೈಗೆಟುಕುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಹುಡುಕುತ್ತಿರುವವರಿಗೆ ಹೊಸ ಇವಿಯನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಗೆ ಹೊಸದಾಗಿ ಬಂದಿರುವುದು ಈ iVoomi ಎಸ್1 ಲೈಟ್ ರೂಪಾಂತರವಾಗಿದೆ. ಕೇವಲ ರೂ 84,999 ಎಕ್ಸ್ ಶೋರೂಂ ಬೆಲೆಯ ಈ ವಾಹನವು ಓಲಾನ ಪ್ರವೇಶ ಮಟ್ಟದ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲು ಬಂದಿದೆ

iVoomi S1 Lite E-scooter

iVoomi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಚಾರ್ಜ್‌ನಲ್ಲಿ 180 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ ಮತ್ತು ರಾಜಸ್ಥಾನ ಸೇರಿದಂತೆ ಭಾರತದಾದ್ಯಂತ iVoomi ಡೀಲರ್‌ಶಿಪ್‌ಗಳಲ್ಲಿ ಬ್ರ್ಯಾಂಡ್ ಇತ್ತೀಚಿನ ಇವಿಗಾಗಿ ಬುಕಿಂಗ್ ಅನ್ನು ತೆರೆದಿದೆ. ಇನ್ನು 84,999 ರೂ. ಬೆಲೆಗಳಲ್ಲಿ ಒಂದೇ ಬಾರಿ ಪಾವತಿಸಲು ಸಾಧ್ಯವಾಗಲ್ಲವೆಂದರೆ, ಕಂಪನಿಯು EMI ಆಯ್ಕೆಯನ್ನು ಸಹ ನೀಡುತ್ತಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿವಿಧ ಪ್ರಯಾಣ ಅಗತ್ಯಗಳಿಗೆ ಸರಿಹೊಂದುವಂತೆ ನಿರ್ಮಿಸಲಾಗಿದೆ. iVoomi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದೇ ಸೂರಿನಡಿ ಬಾಳಿಕೆ, ಸೌಕರ್ಯ ಮತ್ತು ಸುಧಾರಿತ ತಂತ್ರಜ್ಞಾನವನ್ನು ತರಲು ವಿನ್ಯಾಸಗೊಳಿಸಲಾಗಿದೆ. ERW 1 ದರ್ಜೆಯ ಚಾಸಿಸ್‌ನೊಂದಿಗೆ ನಿರ್ಮಿಸಲಾಗಿದೆ, ವಾಹನವು ಸ್ಥಿರತೆ ಮತ್ತು ಬಾಳಿಕೆಯನ್ನು ಖಾತ್ರಿಗೊಳಿಸುತ್ತದೆ.

iVoomi S1 Lite E-scooter

ಈ ಹೊಸ iVoomiS1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ 170 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು ಅದು ವಿವಿಧ ಭೂಪ್ರದೇಶಗಳನ್ನು ಸುಲಭವಾಗಿ ನಿಭಾಯಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿ ಅನುಕೂಲಕ್ಕಾಗಿ ಸ್ಕೂಟರ್ 18 ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ನೀಡುತ್ತದೆ. ಇದು ದೈನಂದಿನ ಅಗತ್ಯ ವಸ್ತುಗಳನ್ನು ಸಾಗಿಸಲು ಸೂಕ್ತವಾಗಿದೆ. ವಿವಿಧ ಆದ್ಯತೆಗಳಿಗೆ ಅನುಗುಣವಾಗಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 12-ಇಂಚಿನ ಅಥವಾ 10-ಇಂಚಿನ ವ್ಹೀಲ್ ಗಳ ಆಯ್ಕೆ ಮಾಡಬಹುದು.

ಈ ಹೊಸ iVoomi S1 ಲೈಟ್ ಸ್ಕೂಟರ್ ನಲ್ಲಿ USB ಚಾರ್ಜಿಂಗ್ ಪೋರ್ಟ್ (5V, 1A) ಮತ್ತು ಸುಲಭವಾದ ವೇಗದ ಟ್ರ್ಯಾಕಿಂಗ್‌ಗಾಗಿ LED ಡಿಸ್ ಪ್ಲೇ ಸ್ಪೀಡೋಮೀಟರ್‌ನಂತಹ ಉಪಯುಕ್ತ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. iVoomi ಎಲೆಕ್ಟ್ರಿಕ್ ಸ್ಕೂಟರ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಇದು ಸವಾರ ಮತ್ತು ವಾಹನವನ್ನು ರಕ್ಷಿಸಲು 7 ಹಂತದ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

iVoomi S1 Lite E-scooter

ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸುವವರು ರೂ 4,999 ಗೆ ಸ್ಮಾರ್ಟ್ ವೈಶಿಷ್ಟ್ಯಗಳ ಅಪ್‌ಗ್ರೇಡ್ ಅನ್ನು ಸಹ ಪಡೆಯಬಹುದು. ಅವುಗಳಲ್ಲಿ, iVoomi MT (DTE) ಇಂಡಿಕೆಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಳ್ ಮತ್ತು SMS ಅಲರ್ಟ್ ಗಳನ್ನು ಹೊಂದಿದೆ. ಈ ನವೀಕರಣಗಳು ಸವಾರಿ ಅನುಭವವನ್ನು ಹೆಚ್ಚಿಸುತ್ತವೆ ಮತ್ತು ದೈನಂದಿನ ಪ್ರಯಾಣಿಕರಿಗೆ ಸೌಕರ್ಯ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ.

ಹೊಸ Voomi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಸ್ಮಾರ್ಟ್-ಕನೆಕ್ಟೆಡ್ ಸ್ಕೂಟರ್ ಆಗಿದ್ದು, ನ್ಯಾವಿಗೇಶನ್, ಅಲರ್ಟ್ ಗಳು ಮತ್ತು ಸರ್ವಿಸ್ ರೈಮೆಂಡರ್ ಗಳಿಗಾಗಿ ಕನೆಕ್ಟ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಹೊಸ ಎಲೆಕ್ಟ್ರಿಕ್ ವಾಹನದಲ್ಲಿ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಬ್ಯಾಟರಿ ತಂತ್ರಜ್ಞಾನವನ್ನು ಭಾರತೀಯ ಬ್ರ್ಯಾಂಡ್ ಬಳಸಿದೆ.

More from DriveSpark

Article Published On: Tuesday, October 1, 2024, 11:52 [IST]
English summary
Ivoomi s1 lite e scooter launched prcie range three year warranty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+