ಹೊಸ ಜಾವಾ ಮೋಟಾರ್‌ಸೈಕಲ್ ಬಿಡುಗಡೆ: ಯುವಕರ ಹಾಟ್‌ ಫೆವರೆಟ್ ಆಗಿಲಿದ್ಯಾ?

ಕ್ಲಾಸಿಕ್ ಮೋಟಾರ್‌ಸೈಕಲ್‌ಗಳಿಗೆ ಜನಪ್ರಿಯತೆ ಪಡೆದಿರುವ ಜಾವಾ ಯೆಜ್ಡಿ, ಇಂದು ಮುಂಬೈನಲ್ಲಿ ತನ್ನ ಹೊಸ ಜಾವಾ 42 ಬಾಬರ್ ರೆಡ್ ಶೀನ್ ಅನ್ನು ಬಿಡುಗಡೆ ಮಾಡಿದೆ. ಈ ಮೋಟಾರ್‌ಸೈಕಲ್ ಅದ್ಬುತ ಪರ್ಫಾಮೆನ್ಸ್, ಆಕರ್ಷಕ ಡಿಸೈನ್ ಸೇರಿದಂತೆ ಹಲವು ವಿಶೆಷತೆಗಳನ್ನು ಒಳಗೊಂಡಿರುವುದಾಗಿ ಕಂಪನಿ ತಿಳಿಸಿದೆ.

ಜಾವಾ 42 ಬಾಬರ್‌ನ ಯಶಸ್ಸಿನ ನಂತರ, ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಬಾಬರ್ ವಿಭಾಗದ ನಾಯಕತ್ವವನ್ನು ರೆಡ್ ಶೀನ್‌ನೊಂದಿಗೆ ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಹೊರಬಂದಿರುವ ಜಾವಾ 42 ಬಾಬರ್ ರೆಡ್ ಶೀನ್ ರೂ. 2.29 ಲಕ್ಷ ಬೆಲೆಯ (ಎಕ್ಸ್ ಶೋ ರೂಂ ದೆಹಲಿ)ಲ್ಲಿ ಖರೀದಿಗೆ ಲಭ್ಯವಿದೆ.

jawa-yezdi-motorcycles-launches-new-42-bobber-red-sheen

ಇದರಲ್ಲಿ ಎರಡು ವೇರಿಯೆಂಟ್‌ಗಳಿದ್ದು, ಒಂದು ಟಾಪ್-ಆಫ್-ಲೈನ್ ವೇರಿಯೆಂಟ್ ಜಾವಾ 42 ಬಾಬರ್ ರೆಡ್ ಶೀನ್ ಆಗಿದ್ದರೇ, ಮತ್ತೊಂದು ಬೇಸ್‌ ವೇರಿಯೆಂಟ್ ಆದ ರೆಡ್ ಶೀನ್ ಜನಪ್ರಿಯ ಬ್ಲ್ಯಾಕ್ ಮಿರರ್ ಆಗಿದೆ. ಗಮನಾರ್ಹವಾದ ರೆಡ್ ಫ್ಯೂಯಲ್ ಟ್ಯಾಂಕ್ ಪಟ್ಟಿಯನ್ನು ಒಳಗೊಂಡಿರುವ ಈ ಹೊಸ ರೂಪಾಂತರವು ವಿಶಿಷ್ಟವಾದ ಸವಾರಿಯನ್ನು ಬಯಸುವ ಯುವಕರಿಗಾಗಿ ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ರೆಡ್ ಶೀನ್ ಟ್ಯಾಂಕ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳಲ್ಲಿ ಬೆರಗುಗೊಳಿಸುವ ಕ್ರೋಮ್ ಫಿನಿಶ್ ಅನ್ನು ಹೊಂದಿದೆ. ಟ್ಯೂಬ್‌ಲೆಸ್ ಟೈರ್‌ಗಳ ಅನುಕೂಲಕ್ಕಾಗಿ ಇದನ್ನು ವರ್ಧಿಸಲಾಗಿದೆ. ಪವರ್‌ಫುಲ್ 334cc ಲಿಕ್ವಿಡ್ - ಕೂಲ್ಡ್ ಎಂಜಿನ್ 29.9PS ಪವರ್ ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ನಯವಾದ ಮತ್ತು ನಿಖರವಾದ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

jawa-yezdi-motorcycles-launches-new-42-bobber-red-sheen

ಅಸಿಸ್ಟ್ ಮತ್ತು ಸ್ಲಿಪ್ ಕ್ಲಚ್, ಏಳು ಹಂತದ ಪ್ರೀ ಲೋಡ್ ಹೊಂದಾಣಿಕೆಯ ಹಿಂಭಾಗದ ಮೊನೊ-ಶಾಕ್ (seven-step pre-load adjustable rear mono-shock), ಎರಡು - ಹಂತದ ಹೊಂದಾಣಿಕೆಯ ಸೀಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಕನ್ಸೋಲ್ ಮತ್ತು ಪೂರ್ಣ ಎಲ್ಇಡಿ ಲೈಟಿಂಗ್ ಮೂಲಕ ರೈಡರ್ ಸೌಕರ್ಯವನ್ನು ಖಾತ್ರಿಪಡಿಸಲಾಗಿದೆ.

ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಸಿಇಒ ಆಶಿಶ್ ಸಿಂಗ್ ಮಾತನಾಡಿ, ಜಾವಾ 42 ಬಾಬರ್ ಅದ್ಭುತ ಯಶಸ್ಸನ್ನು ಕಂಡಿದೆ. ರೆಡ್ ಶೀನ್ ಪರಿಚಯದೊಂದಿಗೆ ಕುಟುಂಬವನ್ನು ವಿಸ್ತರಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಅದ್ಬುತ ಬಾಬರ್ ಹೊಸ ತಲೆಮಾರಿನ ಸವಾರರಿಗೆ ತಮ್ಮ ಪ್ರತ್ಯೇಕತೆಯನ್ನು ಪ್ರತಿಬಿಂಬಿಸುವ ಮೋಟರ್‌ಸೈಕಲ್‌ ಆಗಿ ಮಿಂಚಲಿದೆ ಎಂದರು.

jawa-yezdi-motorcycles-launches-new-42-bobber-red-sheen

42 ಬಾಬ್ಬರ್ ರೆಡ್ ಶೀನ್ ಬಿಡುಗಡೆ ಮೂಲಕ, ಕಂಪನಿಯು ಅತ್ಯಾಧುನಿಕ ಡಿಸೈನ್‌ನೊಂದಿಗೆ ಮೋಟಾರ್‌ಸೈಕಲ್ ಅನ್ನು ಮೌಲ್ಯೀಕರಿಸುವ Gen-Z ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದೆ. ಹೊಸ ರೆಡ್ ಶೀನ್ ಮೋಟಾರ್‌ಸೈಕಲ್ ಬೀದಿಗಳಿದರೆ ಖಂಡಿತ ಎಲ್ಲರ ಗಮನ ಸೆಳೆಯಲಿದೆ ಎಂದು ಯೆಜ್ಡಿ ಮೋಟಾರ್‌ಸೈಕಲ್ಸ್ ಭರವಸೆ ನೀಡಿದೆ.

ಜಾವಾ 42 ಬಾಬರ್ ಜೊತೆಗೆ ಇತ್ತೀಚೆಗೆ ರಿಫ್ರೆಶ್ ಮಾಡಿದ ಜಾವಾ ಪೆರಾಕ್, ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ಗಳಿಗೆ ಪ್ರಸ್ತುತ 'ಫ್ಯಾಕ್ಟರಿ ಕಸ್ಟಮ್' ಪೋರ್ಟ್‌ಫೋಲಿಯೊವನ್ನು ರೂಪಿಸುತ್ತದೆ. ಇದು ಜಾವಾ 350, ಜಾವಾ 42, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಅನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ ಶ್ರೇಣಿಯನ್ನು ಪೂರೈಸುತ್ತದೆ ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Friday, May 24, 2024, 19:13 [IST]
English summary
Jawa yezdi motorcycles launches new 42 bobber red sheen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+