ಲಾಂಗ್ ರೈಡ್ ಹೋಗುವವರ ಗಮನಕ್ಕೆ: ಕವಾಸಕಿಯ ಈ ಬೈಕ್ ಇದ್ದರೆ ಬೇರೇನೂ ಬೇಡ, ಸದ್ಯದಲ್ಲೇ ಮಾರುಕಟ್ಟೆಗೆ!
ಭಾರತದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಬೈಕ್ ರೈಡರ್‌ಗಳು ಜಾಸ್ತಿಯಾಗಿದ್ದಾರೆ. ಬೈಕ್‌ನಲ್ಲಿ ಲಾಂಗ್ ಡ್ರೈವ್‌ಗಳು ಹೋಗುವುದು ಹೆಚ್ಚಾಗುತ್ತಿದೆ. ಇದಕ್ಕಾಗಿ ಹಲವರು ಹಲವು ಬಗೆಯ ಬೈಕ್‌ಗಳಿಗೆ ಮೊರೆ ಹೋಗುತ್ತಾರೆ. ಬಹುತೇಕ ಎಲ್ಲ ಬೈಕರ್‌ಗಳೂ ಸಹ ಅತೀ ಹೆಚ್ಚು ಉತ್ಸುಕತೆಯಿದ ನೋಡುವ ಬೈಕ್‌ಗಳಲ್ಲು ಅಡ್ವೆಂಚರ್ ಟೂರರ್ ಸೆಗ್ಮೆಂಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಈ ರೀತಿಯ ಬೈಕ್ ನಿರ್ಮಾಣದಲ್ಲಿ ಭಾರತದಲ್ಲಿ ಸದ್ಯಕ್ಕೆ ಹಲವಾರು ಬೈಕ್‌ಗಳಿದ್ದರೂ, ಕವಾಸಕಿ ವರ್ಸಿಸ್ ಬೈಕ್‌ಗಳು ಒಂದು ಹಜ್ಜೆ ಮುಂದೆ ಎನ್ನಬಹುದು. ಈಗಾಗಲೇ ಭಾರತದಲ್ಲಿ ವರ್ಸಿಸ್ 650 ಬೈಕ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಇದೇ ಬೈಕ್ ಅನ್ನು ಇಟ್ಟುಕೊಂಡು ಈ ಬೈಕ್ ಆಧಾರದ ಮೇಲೆ ಮತ್ತೊಂದು ಬೈಕ್ ಅನ್ನು ಕವಾಸಕಿ ಅಭಿವೃದ್ದಿಪಡಿಸುತ್ತಿದೆ.

ಹೌದು, ಕವಾಸಕಿ ಭಾರತದಲ್ಲಿ ಹೊಸ ಬೈಕ್ ಒಂದ್ನು ನಿರ್ಮಿಸುತ್ತಿದ್ದು ಮಾಹಿತಿಗಳ ಪ್ರಕಾರ ಇದು ವರ್ಸಿಸ್ X 300 ಆಗಿರಲಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಭಾರತದಲ್ಲಿರುವ ನಿಂಜಾ 300 ಬೈಕ್‌ನ ಅದೇ ಎಂಜಿನ್ ಅನ್ನು ಬಳಸಿಕೊಂಡು ಈ ಬೈಕ್ ಅನ್ನು ಕಂಪನಿ ಸಿದ್ದಪಡಿಸಲಿದ್ದು, ನಿಂಜಾ 300 ಬೈಕ್‌ನ ಬೆಲೆಯ ಆಸು ಪಾಸಿನಲ್ಲೇ ಇರಲಿದೆ ಎಂದು ತಿಳಿದು ಬಂದಿದೆ.
ಈ ಮೂಲಕ ಕಡಿಮೆ ಬೆಲೆಗೆ ಕವಾಸಕಿ ಭಾರತದಲ್ಲಿ ಅಡ್ವೆಂಚರ್ ಟೂರರ್ ಬೈಕ್ ಅನ್ನು ಮಾರುಕಟ್ಟೆಗೆ ತರಲಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಪ್ಲಾನ್ ಮಾಡಿದೆ. ಕವಾಸಕಿ ಬೈಕ್‌ಗಳು ಉತ್ತಮ ಪರ್ಫಾಮೆನ್ಸ್ ಮತ್ತು ಆಕರ್ಷಕ ಡಿಸೈನ್ ಇರುವುದರಿಂದ ಹೆಚ್ಚಿನ ಎಂಟ್ರಿ ಲೆವೆಲ್ ಬೈಕರ್‌ಗಳು ಈ ಬೈಕ್ ಅನ್ನು ಇಷ್ಟಪಡಲಿದ್ದಾರೆ ಎಂದು ಆಟೋಮೊಬೈಲ್ ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಭಾರತದಲ್ಲಿ ಈಗಾಗಲೇ ಆಕಷ್ಟು ಪ್ರಸಿದ್ದಿ ಪಡೆದಿರುವ ಕವಾಸಕಿ ವರ್ಸಿಸ್ 650 ಬಗ್ಗೆ ನೊಡುವುದಾದರೆ, ಈ ಹೊಸ ಕವಾಸಕಿ ಬೈಕ್ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಡಾರ್ಕ್ ಗ್ರೇ ಎಂಬ ಎರಡೂ ಹೊಸ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ಗಳನ್ನು ಒಳಗೊಂಡಿದೆ. ಈ ಬಣ್ಣಗಳೊಂದಿಗೆ ಈ ಬೈಕ್ ಆಕರ್ಷಕವಾಗಿ ಕಾಣುತ್ತಿದೆ.
2024ರ ಕವಾಸಕಿ ವರ್ಸಿಸ್ 650 ಬೈಕ್ ಅದೇ 649cc ಪ್ಯಾರೆಲಲ್ ಟ್ವಿನ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 65.7 bhp ಪವರ್ ಮತ್ತು 61 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಸ್ಲಿಪ್ಪರ್ ಕ್ಲಚ್‌ನೊಂದಿಗೆ ಸುಸಜ್ಜಿತವಾಗಿದ್ದು ಇದು ನಯವಾದ ಮತ್ತು ಸ್ಪಂದಿಸುವ ಗೇರ್ ಶಿಫ್ಟ್‌ಗಳನ್ನು ಅಳವಡಿಸಲಾಗಿದೆ.

ಹೊಸ 2024ರ ಕವಾಸಕಿ ವರ್ಸಿಸ್ 650 ಬೈಕ್ ಫಿಚರ್ಸ್ ಬಗ್ಗೆ ಹೇಳುವುದಾದರರೆ, ಈ ಬೈಕಿನಲ್ಲಿ ಎಲ್‌ಇಡಿ ಇಲ್ಯುಮಿನೇಷನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಟಿಎಫ್‌ಟಿ ಡಿಸ್ ಪ್ಲೇ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಸೇರಿದಂತೆ ವೈಶಿಷ್ಟ್ಯಗಳ ಸೂಟ್ ಅನ್ನು ನೀಡುವುದನ್ನು ಮುಂದುವರೆಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








