ಗುಡ್ಡಗಾಡಿನಲ್ಲೂ ನುಗ್ಗುವ ಕಲ್ಲುಬಂಡೆಯಂತಹ ಹೊಸ ಕವಾಸಕಿ KLX230 ಬಿಡುಗಡೆಗೆ ಸಜ್ಜು!
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ಭಾರತೀಯ ಮಾರುಕಟ್ಟೆಯಲ್ಲಿ ತನ್ನ 2024ರ ಕವಾಸಕಿ KLX230 s (Kawasaki KLX230 s) ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕವಾಸಕಿ ಈ ಬೈಕ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಿದರೆ ಈ ಮುಂಬರುವ ಮಾದರಿಯು ಹೀರೋ ಎಕ್ಸ್‌ಪಲ್ಸ್ ಬೈಕಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಲಿದೆ. ಈ ಕವಾಸಕಿ KLX230 S ಭರ್ಜರಿ ಪರ್ಫಾಮೆನ್ಸ್ ನೀಡುವ ಆಫ್-ರೋಡ್ ಬೈಕ್ ಆಗಿದೆ. ಈ ಕವಾಸಕಿ ಬೈಕ್ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾದರೆ ಹೆಚ್ಚು ಯುವ ಗ್ರಾಹಕರನ್ನು ಸೆಳೆಯಬಹುದು.
ಕವಾಸಕಿ KLX230 S ಬೈಕ್ 233cc, 2-ವಾಲ್ವ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಕವಾಸಕಿಯ ಅಂತರಾಷ್ಟ್ರೀಯ ವೆಬ್‌ಸೈಟ್‌ಗಳು ಈ ಮಾದರಿಯ ಅಧಿಕೃತ ಪವರ್ ಮತ್ತು ಟಾರ್ಕ್ ಅಂಕಿಅಂಶಗಳನ್ನು ಪಟ್ಟಿ ಮಾಡದಿದ್ದರೂ, ಭಾರತದಲ್ಲಿ ಮಾರಾಟವಾದ ಆಫ್-ರೋಡ್-ಮಾತ್ರ KLX 230R S 8,000rpm ನಲ್ಲಿ 20hp ಮತ್ತು 6,000rpm ನಲ್ಲಿ 20.6Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಕವಾಸಕಿ KLX230 S ಬೈಕ್ ಇದೇ ರೀತಿಯ ಅಂಕಿಅಂಶಗಳನ್ನು ಸಾಧಿಸಿದರೆ, ಇದು ಹೀರೋ Xpulse 200 4V ಬೈಕ್ ಅನ್ನು ಸ್ವಲ್ಪಮಟ್ಟಿಗೆ ಮೀರಿಸುವ ನಿರೀಕ್ಷೆಯಿದೆ. ಇದು 8,500rpm ನಲ್ಲಿ 19.2hp ಮತ್ತು 6,500rpm ನಲ್ಲಿ 17.35Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಬಿಡುಗಡೆಯಾದರೆ ಎರಡೂ ಬೈಕುಗಳು ಪರಸ್ಪರ ಸ್ಪರ್ಧಿಸಲಿದೆ.
ಈ ಕವಾಸಕಿ KLX230 S ಬೈಕಿನ ಸೀಟ್ ಎತ್ತರವು 843mm ಆಗಿದೆ, ಆದರೆ ಅದರ ಗ್ರೌಂಡ್ ಕ್ಲಿಯರೆನ್ಸ್ 239mm ಆಗಿದೆ. US-ಸ್ಪೆಕ್ ಮಾಡೆಲ್ ಸುಮಾರು 133 ಕೆಜಿ ತೂಕವನ್ನು ಹೊಂದಿದೆ. ಈ ಬೈಕ್ ಭಾರತದಲ್ಲಿನ ಕಾನೂನು ಅವಶ್ಯಕತೆಗಳಾದ ಮುಂಭಾಗದ ನಂಬರ್ ಪ್ಲೇಟ್ ಹೋಲ್ಡರ್ ಮತ್ತು ಪಿಲಿಯನ್ ಗ್ರಾಬ್ ರೈಲ್ ಕಾರಣ, ಭಾರತೀಯ ಆವೃತ್ತಿಯು 140 ಕೆಜಿಯಷ್ಟು ತೂಕವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚಿನ ಸ್ಪೈ ಶಾಟ್ ಮಾದರಿಯನ್ನು ನಿರ್ಮಾಣ-ಸಿದ್ಧ ಸ್ವರೂಪದಲ್ಲಿ ತೋರಿಸಿದೆಯಾದರೂ, ಹೆಚ್ಚಿನ ಮಾಹಿತಿಗಳು ಬಿಡುಗಡೆಯಾದ ಬಳಿಕ ಮಾಹಿತಿಗಳು ಬಹಿರಂಗವಾಗಲಿದೆ. ಕವಾಸಕಿ ಕಂಪನಿಯು ಭಾರತದಲ್ಲಿ KLX230 S ಗಾಗಿ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ವರದಿಗಳ ಪ್ರಾಕರ, ಈ ಬೆಳವಣಿಗೆಗಳು ಇದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಸೂಚಿಸುತ್ತದೆ.
ಇನ್ನು ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕವಾಸಕಿ ವಲ್ಕನ್ ಎಸ್ ಕ್ರೂಸರ್ ಬೈಕ್ ಅನ್ನು ಮಾರಾಟ ಮಾಡುತ್ತಿದೆ. ಕವಾಸಕಿ ಕಂಪನಿಯು ಹೈ ಪಾರ್ಫಾಮೆನ್ಸ್ ಬೈಕುಗಳ ಜೊತೆ ಕ್ರೂಸರ್ ಬೈಕ್ ಅನ್ನು ತಮ್ಮ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಇದರಲ್ಲಿ ಕವಾಸಕಿ ವಲ್ಕನ್ ಎಸ್ ಕ್ರೂಸರ್ ಬೈಕಿಗೆ ರೂ.60,000 ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಗಳನ್ನು "ಗುಡ್ ಟೈಮ್ಸ್ ವೋಚರ್" ಎಂದು ನೀಡಲಾಗುತ್ತದೆ. ಇದನ್ನು ಗ್ರಾಹಕರು ಚೆಕ್‌ಔಟ್‌ನಲ್ಲಿ ರಿಡೀಮ್ ಮಾಡಬಹುದು.

ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕವಾಸಕಿ ನಿಂಜಾ 650 ಬೈಕ್ ಅನ್ನು ಮಾರಾಟ ಮಾಡುತ್ತಿದೆ. ಕವಾಸಕಿ ಕಂಪನಿಯು ಹೈ ಪಾರ್ಫಾಮೆನ್ಸ್ ಮಲ್ಟಿ-ಸಿಲಿಂಡರ್ ಬೈಕುಗಳ ವ್ಯಾಪಕ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಇದರಲ್ಲಿ ಕವಾಸಕಿಯು ತನ್ನ ನಿಂಜಾ 650 ಬೈಕಿನ ಮೇಲೆ ಆಕರ್ಷಕ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ. ಈ ಬೈಕ್ ಅನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ. ಕವಾಸಕಿ ನಿಂಜಾ 650 ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ಜನಪ್ರಿಯ ಮಧ್ಯಮ ತೂಕದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








