ಪಾಕೆಟ್ ರಾಕೆಟ್: ಜನಪ್ರಿಯ ಕವಾಸಕಿ ನಿಂಜಾ 500 ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ಕೆಲವು ಬೈಕುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ. ಇದರಲ್ಲಿ ಜನಪ್ರಿಯ ಕವಾಸಕಿ ನಿಂಜಾ 500 (Kawasaki Ninja 500) ಬೈಕ್ ಕೂಡ ಒಳಗೊಂಡಿದೆ. ಈ ಕವಾಸಕಿ ನಿಂಜಾ 500 ಬೈಕಿನ ಮೇಲೆ ರೂ.10,000 ರಿಯಾಯಿತಿಯನ್ನು ಘೋಷಿಸಿದೆ. ಈ ಹಬ್ಬದ ಕೊಡುಗೆಯು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ ಮತ್ತು GST ಒಳಗೊಂಡಿದೆ. ಈ ಕವಾಸಕಿ ನಿಂಜಾ 500 ಸೂಪರ್ ಬೈಕ್ ಅನ್ನು ಖರೀದಿಸಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ.
ಸದ್ಯ ಕವಾಸಕಿ ನಿಂಜಾ 500 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.24 ಲಕ್ಷವಾಗಿದೆ. ಇದೀಗ ರೂ.10,000 ರಿಯಾಯಿತಿಯ ನಂತರ ಈ ಕವಾಸಕಿ ಬೈಕಿನ ಬೆಲೆಯು ರೂ. 5.14 ಲಕ್ಷವಾಗಿದೆ. ಇದರೊಂದಿಗೆ ಆರ್‌ಟಿಒ ಮತ್ತು ವಿಮಾ ವೆಚ್ಚವನ್ನು ಇನ್ನೂ ಕೆಲವು ಸಾವಿರಗಳಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ನಾವು ಸರಿಸುಮಾರು ರೂ.12,000 ರಿಂದ 13,000 ಗಳವರೆಗೆ ಆನ್-ರೋಡ್ ಬೆಲೆಯಲ್ಲಿ ರಿಯಾಯಿತಿಯನ್ನು ನಿರೀಕ್ಷಿಸಬಹುದು.

ಈ ಕವಾಸಕಿ ನಿಂಜಾ 500 ಬೈಕಿನಲ್ಲಿ ಹೊಸ ಲಿಕ್ವಿಡ್ ಕೂಲ್ಡ್, 451cc, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000rpm ನಲ್ಲಿ 45 bhp ಮತ್ತು 6,000rpm ನಲ್ಲಿ 42.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಪರಿಚಿತ ಪವರ್‌ಟ್ರೇನ್ ಆಗಿದೆ ಮತ್ತು ಇದನ್ನು ಎಲಿಮಿನೇಟರ್ 500 ಕ್ರೂಸರ್ ಮತ್ತು ನವೀನ ನಿಂಜಾ 7 ಹೈಬ್ರಿಡ್ ಬೈಕಿನಲ್ಲೂ ಬಳಸಲಾಗುತ್ತದೆ.
ಈ ಕವಾಸಕಿ ನಿಂಜಾ 500 ಮಾದರಿಯು 171 ಕೆಜಿ ತೂಕವನ್ನು ಹೊಂದಿದ್ದು, ಇದು ನಿಂಜಾ 400 ಬೈಕ್ ಗಿಂತ ತೂಕ ಹೆಚ್ಚಾಗಿದೆ. ಈ ಹೊಸ ನಿಂಜಾ 500 ಬೈಕಿನ ತೂಕವು ಇದರ ಪ್ರತಿಸ್ಪರ್ಧಿಗಳಾದ ಎಪ್ರಿಲಿಯಾ RS 457 ಮತ್ತು KTM RC 390 ಗಿಂತ ಕಡಿಮೆಯಾಗಿದೆ. ಈ ಬೈಕ್ ಡ್ಯುಯಲ್-ಚಾನೆಲ್ ABS ಅನ್ನು ಸಹ ಹೊಂದಿದೆ ಮತ್ತು ಸೀಟ್ ಎತ್ತರವು ಆರಾಮದಾಯಕ 785 mm ಆಗಿದೆ.

ಈ ಕವಾಸಕಿ ನಿಂಜಾ 500 ಬೈಕ್ ಮಾದರಿಯು ZX-6R ಮತ್ತು Ninja 7 ಹೈಬ್ರಿಡ್ ಸೇರಿದಂತೆ ಇತ್ತೀಚಿನ ಕವಾಸಕಿ ಸ್ಪೋರ್ಟ್ ಬೈಕ್‌ಗಳೊಂದಿಗೆ ಹೊಂದಿಕೆಯಾಗುವ ಹೊಸ ಮುಖವನ್ನು ನಿಂಜಾ 500 ಪರಿಚಯಿಸಿದೆ. ಭಾರತದಲ್ಲಿ ಬಿಡುಗಡೆ ಮಾಡಲಾದ ಈ ಬೈಕ್ ಸ್ಟ್ಯಾಂಡರ್ಡ್ ಮಾದರಿಯಾಗಿದ್ದು, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ LCD ಡ್ಯಾಶ್ ಮತ್ತು ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿದೆ.
ಆದರೆ ಕೀಲೆಸ್ ಇಗ್ನಿಷನ್ ಅನ್ನು ಒಳಗೊಂಡಿಲ್ಲ, ಇದು ಅಪ್-ಸ್ಪೆಕ್ SE ರೂಪಾಂತರಕ್ಕಾಗಿ ಕಾಯ್ದಿರಿಸಲಾಗಿದೆ. ಕವಾಸಕಿ ನಿಂಜಾ 500 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ R3, ಎಪ್ರಿಲಿಯಾ RS 457, ಮತ್ತು KTM RC 390 ಬೈಕ್ ಗಳಲ್ಲಿ ಪೈಪೋಟಿ ನೀಡುತ್ತದೆ. ಇನ್ನು ಕವಾಸಕಿ ನಿಂಜಾ 500 ಬೈಕ್ ಅತ್ಯುತ್ತಮ ಸೂಪರ್ ಬೈಕ್ ಗಳಲ್ಲಿ ಒಂದಾಗಿದೆ.

ಕವಾಸಕಿ ತನ್ನ ಮೊದಲ ಹೈಡ್ರೋಜನ್ ಚಾಲಿತ ದ್ವಿಚಕ್ರ ವಾಹನ ಮಾದರಿಯನ್ನು ಅನಾವರಣಗೊಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪರ್ಯಾಯ ವಾಹನಗಳ ಬಳಕೆಯತ್ತ ಜಗತ್ತು ವೇಗವಾಗಿ ಚಲಿಸುತ್ತಿರುವ ಸಮಯದಲ್ಲಿ, ಕವಾಸಕಿ ಹೈಡ್ರೋಜನ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕವಾಸಕಿ ತನ್ನ ಹೈಡ್ರೋಜನ್ ಚಾಲಿತ ಬೈಕ್ ಅನ್ನು ನಿಂಜಾ H2 SX ಮಾದರಿಯನ್ನು ಆಧರಿಸಿ ಸಿದ್ಧಪಡಿಸಿದೆ.
ಕವಾಸಕಿ ತನ್ನ ಹೈಡ್ರೋಜನ್ ಬೈಕನ್ನು (Hydrogen bike) ಮೊದಲ ಬಾರಿಗೆ ಸಾರ್ವಜನಿಕವಾಗಿದೆ ಪ್ರದಋಶಿಸಿದೆ. ಇದನ್ನು ನಡೆಯುತ್ತಿರುವ ಸಂಶೋಧನಾ ಉಪಕ್ರಮದ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ. ಕವಾಸಕಿ ಕಂಪನಿಯು ದೀರ್ಘಕಾಲದವರೆಗೆ ಹೈಡ್ರೋಜನ್ ಸ್ಮಾಲ್ ಮೊಬಿಲಿಟಿ ಮತ್ತು ಎಂಜಿನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುತ್ತಿದೆ. ಕವಾಸಕಿ ಕಳೆದ ವರ್ಷ ಈ ಬಗ್ಗೆ ಸಂಶೋಧನೆ ಆರಂಭಿಸಿದರು.
ಇದರ ನಂತರ, ಈ ವರ್ಷದ ಆರಂಭದಲ್ಲಿ ಹೈಡ್ರೋಜನ್ ಬೈಕ್‌ನ ಮೊದಲ ಪರೀಕ್ಷಾರ್ಥ ಪ್ರಯೋಗ ನಡೆಸಿತು. ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಗೆ ತರುವ ಸಾಧ್ಯತೆಗಳಿದೆ ಎಂದು ವರದಿಯಾಗಿದೆ. ಹೈಡ್ರೋಜನ್ ಎಂಜಿನ್ ಕವಾಸಕಿಯ 998cc ಇನ್-ಲೈನ್-ಫೋರ್ ಸೂಪರ್ಚಾರ್ಜ್ಡ್ ಮೋಟಾರ್ ಅನ್ನು H2 ಲೈನ್-ಅಪ್‌ನಲ್ಲಿ ಆಧರಿಸಿದೆ. ಸಿಲಿಂಡರ್‌ಗಳಿಗೆ ಹೈಡ್ರೋಜನ್ ಅನ್ನು ನೇರವಾಗಿ ಇಂಜೆಕ್ಷನ್ ಮಾಡಲು ಮೋಟರ್ ಅನ್ನು ಮಾರ್ಪಡಿಸಲಾಗಿದೆ.


Click it and Unblock the Notifications








