Kinetic E-Luna: ಬೆಂಗಳೂರಿನಲ್ಲಿ ಹೊಸ ಕೈನೆಟಿಕ್ ಇ-ಲೂನಾ ಮೊಪೆಡ್ ಆನ್-ರೋಡ್ ಬೆಲೆ ಎಷ್ಟಿದೆ ಗೊತ್ತಾ?
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 1970ರ ದಶಕದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದ್ದ ಕೈನೆಟಿಕ್ ಲೂನಾ (Kinetic Luna) ಎಲೆಕ್ಟ್ರಿಕ್ ರೂಪದಲ್ಲಿ ಫೆ.7ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಎಕ್ಸ್1 (X1), ಎಕ್ಸ್2 (X2) ರೂಪಾಂತರದ ಆಯ್ಕೆಯಲ್ಲಿ ಬಂದಿರುವ ಈ ಮೊಪೆಡ್, ಕ್ರಮವಾಗಿ ರೂ.69,990 ಮತ್ತು ರೂ.74,900 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಸದ್ಯ, ದೇಶದ ಪ್ರಮುಖ ನಗರಗಳಲ್ಲಿ ಕೈನೆಟಿಕ್ ಇ-ಲೂನಾ (Kinetic E-Luna) ಪಡೆದಿರುವ ಆನ್-ರೋಡ್ ಬೆಲೆ ಕುರಿತ ವಿವರಗಳು ಲಭ್ಯವಾಗಿವೆ. ಬೆಂಗಳೂರು (Bengaluru) ನಗರದಲ್ಲಿ ಎಕ್ಸ್1 ರೂಪಾಂತರ (variant) ರೂ.77,874 ಮತ್ತು ಎಕ್ಸ್2 ರೂಪಾಂತರ ರೂ. 83,056 ದರವನ್ನು ಹೊಂದಿದೆ. ಮುಂಬೈ (Mumbai)ನಲ್ಲಿ ರೂ.77,374 ಮತ್ತು 82,556, ನವದೆಹಲಿ (New Delhi)ಯಲ್ಲಿ ರೂ.78,174 ಹಾಗೂ ರೂ.83,356 ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ.

ಪುಣೆ (Pune)ಯಲ್ಲಿ ಕೈನೆಟಿಕ್ ಇ-ಲೂನಾ ಎಕ್ಸ್1 ಮಾದರಿ ರೂ.77,374 ಮತ್ತು ಎಕ್ಸ್2 ಮಾದರಿ ರೂ.82,556, ನವಿ ಮುಂಬೈ (Navi Mumbai)ನಲ್ಲಿ ರೂ.77,374, ರೂ.82,556, ಹೈದರಾಬಾದ್ (Hyderabad)ನಲ್ಲಿ ರೂ.78,474 ಹಾಗೂ ರೂ.83,656, ಚೆನ್ನೈ (Chennai)ನಲ್ಲಿ ರೂ.78,674, ರೂ.83,856, ಕೋಲ್ಕತ್ತಾ (Kolkata)ದಲ್ಲಿ ರೂ.84,174 ಮತ್ತು ರೂ.89,356 ಆನ್-ರೋಡ್ ಬೆಲೆಯನ್ನು ಹೊಂದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಕೈನೆಟಿಕ್ ಇ-ಲೂನಾದ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಒಳಗೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಜೊತೆಗೆ 50 ಕೆಎಂ/ಹೆಚ್ (km/h) ಗರಿಷ್ಠ ವೇಗವನ್ನು ಪಡೆಯಲಿದೆ. ಈ ಮೊಪೆಡ್ ಡುಯಲ್-ಟ್ಯೂಬ್ಯುಲರ್ ಸ್ಟೀಲ್ ಚಾಸಿಸ್ ಅನ್ನು ಆಧರಿಸಿದ್ದು, 150 ಕೆಜಿ ತೂಕವನ್ನು ಸಾಗಿಸಬಲ್ಲದು.

ಕೈನೆಟಿಕ್ ಇ-ಲೂನಾ ಮೊಪೆಡ್, ಮಲ್ಬೆರಿ ರೆಡ್, ಓಷನ್ ಬ್ಲೂ, ಪರ್ಲ್ ಯೆಲ್ಲೋ, ಸ್ಪಾರ್ಕ್ಲಿಂಗ್ ಗ್ರೀನ್ ಸೇರಿದಂತೆ 5 ಬಣ್ಣದ ಆಯ್ಕೆಯೊಂದಿಗೆ ಲಭ್ಯವಿದೆ. ಇದರ ಬ್ಯಾಟರಿ ಪ್ಯಾಕ್ 4 ಗಂಟೆಗಳಲ್ಲಿ ಭರ್ತಿ ಚಾರ್ಜ್ ಆಗಲಿದ್ದು, ಕಾಂಬಿ ಬ್ರೇಕಿಂಗ್ ಸಿಸ್ಟಮ್, 16-ಇಂಚಿನ ವೀಲ್ಸ್, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕೈನೆಟಿಕ್ ಇ-ಲೂನಾವನ್ನು ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿಸಬಹುದು. ಇದಕ್ಕಾಗಿ ತಿಂಗಳಿಗೆ ರೂ.2,000 ಇಎಂಐ (EMI) ಪಾವತಿ ಮಾಡಿದರೆ ಸಾಕು. ನಿರ್ವಹಣಾ ವೆಚ್ಚ ರೂ.300 ಸೇರಿದಂತೆ ಮಾಸಿಕ ರೂ.2,500ಕ್ಕಿಂತ ಕಡಿಮೆ ಖರ್ಚು ಬರುತ್ತದೆ. ಕಂಪನಿಯೇ ಹೇಳಿರುವಂತೆ ಈ ಎಲೆಕ್ಟ್ರಿಕ್ ಲೂನಾ 1 ಕಿಲೋಮೀಟರ್ ಕ್ರಮಿಸಲು ಕೇವಲ 10 ಪೈಸೆ ಖರ್ಚಾಗುತ್ತದೆ.

ಕಳೆದ ಜನವರಿ 26 ರಿಂದಲೇ ನೂತನ ಕೈನೆಟಿಕ್ ಇ-ಲೂನಾದ ಬುಕ್ಕಿಂಗ್ ಪ್ರಾರಂಭವಾಗಿದೆ. ಆಸಕ್ತ ಖರೀದಿದಾರರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.500 ಮುಂಗಡ ಹಣವನ್ನು ಪಾವತಿಸಿ, ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕಾಯ್ದಿರಿಸಬಹುದು. 20-30 ವರ್ಷಗಳ ಹಿಂದೆ, ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ರೂಪದಲ್ಲಿ ಬಂದಿರುವುದು ಗ್ರಾಹಕರಿಗೆ ಖುಷಿ ನೀಡಿದ್ದು, ಮುಂಬರುವ ತಿಂಗಳಲ್ಲಿ ವಿತರಣೆ ಶುರುವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








