Kinetic: 'ಲೂನಾ ಮೇಲೆ ನನ್ನ ಮೈನಾ..' ಎಂದು ಹಾಡುವ ಸಮಯ ಹತ್ತಿರ, ಕೈನೆಟಿಕ್ ಇ-ಲೂನಾದ ಬೆಲೆ ಬಹಿರಂಗ!

ಕೈನೆಟಿಕ್ ಲೂನಾ 80 ದರದಲ್ಲಿ ಎಷ್ಟರಮಟ್ಟಿಗೆ ಜನಪ್ರಿಯವಾಗಿತ್ತು ಎನ್ನುವುದಕ್ಕೆ ಕನ್ನಡದ ಈ ಸಿನಿಮಾದ ಹಾಡೇ ಸಾಕ್ಷಿ. ರೆಬೆಲ್ ಸ್ಟಾರ್ ಅಂಬರೀಶ್, ಪ್ರಯಾಣ ರಾಜ ಶ್ರೀನಾಥ್, ನಟಿ ಅಂಬಿಕಾ ನಟನೆಯ 'ದ್ವಿಗ್ವಿಜಯ' ಚಿತ್ರದ 'ಲೂನಾ ಮೇಲೆ ನನ್ನ ಮೈನಾ..' ಗೀತೆಯು ಆ ಕಾಲದ ಯುವ ಜನರನ್ನು ಸೆಳೆದಿತ್ತು.

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜೈರಾಮ್ ಅವರು ಈ ಹಾಡಿಗೆ ಧ್ವನಿಯಾಗಿದ್ದರು. ಹಂಸಲೇಖರ ಅದ್ಭುತ ಸಂಗೀತವಿತ್ತು. ಈಗ 20-30 ವರ್ಷಗಳ ಹಿಂದೆ ಭಾರತದ ರಸ್ತೆಯನ್ನು ಆಳಿದ್ದ ಎಲ್ಲರ ಪ್ರೀತಿಯ ಅದೇ 'ಲೂನಾ' ಎಲೆಕ್ಟ್ರಿಕ್ ರೂಪದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲು ಸಿದ್ದವಾಗಿದೆ. ಫೆಬ್ರವರಿಯ ಆರಂಭದಲ್ಲಿ ಬರಲಿದ್ದು, ಅದಕ್ಕಾಗಿ ಗ್ರಾಹಕರು ಸಹ ಕುತೂಹಲದಿಂದ ಕಾಯುತ್ತಿದ್ದಾರೆ.

Kinetic E-Luna Price Revealed In Amazon, Flipkart

ಕೈನೆಟಿಕ್ ಇ-ಲೂನಾ (Kinetic E-Luna) ಮೊಪೆಡ್‌ಗಾಗಿ ಶುಕ್ರವಾರ (ಜನವರಿ 26) ದಿಂದ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.500 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಕಾಯ್ದಿರಿಸಬಹುದು. ಕಂಪನಿಯು ಇ-ಲೂನಾದ ಬೆಲೆ, ವೈಶಿಷ್ಟ್ಯ ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ನೂತನ ಇ-ಲೂನಾದ ಬೆಲೆಯ ಕುರಿತ ವಿವರಗಳು ಸೋರಿಕೆಯಾಗಿವೆ.

ಇ-ಕಾಮರ್ಸ್ ದೈತ್ಯ ಅಮೆಜಾನ್‌ (Amazon) ಹಾಗೂ ಫ್ಲಿಪ್‌ಕಾರ್ಟ್‌ (Flipkart)ನಲ್ಲಿ ಮುಂಬರುವ ಇ-ಲೂನಾ ಬೆಲೆಗಳು ಬಹಿರಂಗಗೊಂಡಿವೆ. ಅಮೆಜಾನ್‌ ನಲ್ಲಿ ರೂ.74,990 ಎಕ್ಸ್ ಶೋರೂಂ ದರವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಓಷನ್ ಬ್ಲೂ, ಮಲ್ಬೆರಿ ರೆಡ್ ಬಣ್ಣಗಳ ಆಯ್ಕೆಯಲ್ಲಿ ಈ ಎಲೆಕ್ಟ್ರಿಕ್ ಲೂನಾ ದೊರೆಯಲಿದ್ದು, ರೂ.74,990 ಬೆಲೆಯನ್ನು ಹೊಂದಿದೆ. ರಿಯಾಯಿತಿ ಕಳೆದು ರೂ.71,990ಕ್ಕೆ ಸಿಗುತ್ತದೆಯೆಂದು ನಮೂದಿಸಲಾಗಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

Kinetic E-Luna Price Revealed In Amazon, Flipkart

ಪ್ರಸ್ತುತ, ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಕೈನೆಟಿಕ್ ಇ-ಲೂನಾದ ಬೆಲೆಯನ್ನು ತೆಗೆಯಲಾಗಿದೆ. ಆದರೂ, ಹೊಸ ಎಲೆಕ್ಟ್ರಿಕ್ ಲೂನಾ ಸಂಪೂರ್ಣ ಚಾರ್ಜ್ ನಲ್ಲಿ 110 ಕಿಲೋಮೀಟರ್ (ಮೈಲೇಜ್) ನೀಡಲಿದೆ. ಗಂಟೆಗೆ 50 ಕಿ.ಮೀ ವೇಗವನ್ನು ಪಡೆಯಲಿದ್ದು, ಟ್ಯೂಬ್ ಟೈಯರ್ ಆಯ್ಕೆಯನ್ನು ಹೊಂದಿರಲಿದೆ. ಜೊತೆಗೆ ಈ ಮೊಪೆಡ್ ಬ್ಯಾಟರಿ ಪ್ಯಾಕ್ ಪೂರ್ತಿ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳಲಿದೆ ಎಂದು ಫ್ಲಿಪ್‌ಕಾರ್ಟ್‌ನಲ್ಲಿ ತಿಳಿಸಲಾಗಿದೆ.

ಈ ಹಿಂದೆ, ಪುಣೆ ಮೂಲದ ಕೈನೆಟಿಕ್ ಗ್ರೀನ್, ಫೆಬ್ರವರಿಯ ಮೊದಲಾರ್ಧದಲ್ಲಿ ಇ-ಲೂನಾವನ್ನು ಬಿಡುಗಡೆಗೊಳಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಮಹಾರಾಷ್ಟ್ರದ ಅಹ್ಮದ್‌ ನಗರದಲ್ಲಿ ಕೈನೆಟಿಕ್ ಗ್ರೀನ್ ತನ್ನ ತಯಾರಿಕಾ ಘಟಕವನ್ನು ಹೊಂದಿದ್ದು, ಪ್ರತಿ ತಿಂಗಳು 5,000 ಯುನಿಟ್‌ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಬಹುದು. 1970ರ ದಶಕದ ಆರಂಭದಲ್ಲಿ ಬಿಡುಗಡೆಯಾಗಿದ್ದ 'ಲೂನಾ' ದ್ವಿಚಕ್ರ ವಾಹನ ಮಾರುಕಟ್ಟೆಯ ಬಹುಪಾಲನ್ನು ತನ್ನದಾಗಿಸಿಕೊಂಡಿತ್ತು.

Kinetic E-Luna Price Revealed In Amazon, Flipkart

ಕಠಿಣ ಎಮಿಷನ್ ಮಾನದಂಡ ಮತ್ತು ಮಾರುಕಟ್ಟೆಯಲ್ಲಿ ಹೊಸ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಪ್ರವೇಶದಿಂದ ತೀವ್ರ ಪೈಪೋಟಿ ಎದುರಾಗಿ 2000ನೇ ಇಸವಿಯಲ್ಲಿ ಲೂನಾ ಇತಿಹಾಸದ ಪುಟ ಸೇರಿತ್ತು. ಕಳೆದ ತಿಂಗಳು, ಜುಲು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯನ್ನು 'ಕೈನೆಟಿಕ್' ಪುನಃ ಪ್ರವೇಶಿಸಿತು. ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.94,990 ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೂರ್ತಿ ಚಾರ್ಜ್ ನಲ್ಲಿ 104 ಕಿಲೋಮೀಟರ್ ರೇಂಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 27, 2024, 9:39 [IST]
English summary
Kinetic e luna price revealed in amazon flipkart very low cost
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+