ಇಂಥಾ ಹಬ್ಬದ ಆಫರ್ ಇನ್ನು ಮುಂದೆ ಸಿಗಲ್ಲ: ಕೇವಲ ರೂ. 49,999ಕ್ಕೆ ಹೊಸ ಸ್ಕೂಟರ್

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ಹೆಚ್ಚಾಗುತ್ತಲೇ ಇವೆ, ಇದರ ಜೊತೆಗೆ ಇತ್ತೀಚೆಗೆ ಜನ ಪೆಟ್ರೋಲ್ ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ರೇಂಜ್ ನೀಡುವ ಇವಿ ವಾಹನಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಇದೀಗ ಅತೀ ಕಡಿಮೆ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೋಮಾಕಿ, ತನ್ನ ಎಕ್ಸ್-ಒನ್ ಲಿಥಿಯಂ ಸರಣಿಯಲ್ಲಿ ಎಕ್ಸ್-ಒನ್ ಪ್ರೈಮ್ ಮತ್ತು ಎಕ್ಸ್-ಒನ್ ಏಸ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಅಂದಹಾಗೆ ಎಕ್ಸ್-ಒನ್ ಪ್ರೈಮ್ ಬೆಲೆಯು ರೂ. 49,999 ಮತ್ತು ಎಕ್ಸ್-ಒನ್ ಏಸ್ ಬೆಲೆಯು ರೂ.59,999 ಇದೆ. ಇವು ಎಕ್ಸ್‌ ಶೋರೂಂ ಬೆಲೆಗಳಾಗಿವೆ. ಇದು ಪ್ರಸ್ತುತ ಇವಿ ವಾಹನ ವಲಯದಲ್ಲಿ ತೀರಾ ಕೈಗೆಟುಕುವ ಬೆಲೆಗಳಾಗಿದ್ದು, ಈ ಬೆಲೆಗಳಿಗೆ ತಕ್ಕಂತೆ ರೇಂಜ್ ಹಾಗೂ ಫೀಚರ್ಸ್ ಇವೆಯೇ ಎಂಬುದನ್ನು ಈ ಕೆಳಗೆ ನೋಡೋಣ.

komaki-electric-launched-prime-and-ace-e-scooters-in-india

ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಹೊಸ ಎಕ್ಸ್-ಒನ್ ಪ್ರೈಮ್ ಮತ್ತು ಎಕ್ಸ್-ಒನ್ ಏಸ್ ಮಾದರಿಗಳ ಬೆಲೆಗಳಲ್ಲಿ ಕೇವಲ ವಾಹನಗಳನ್ನು ಮಾತ್ರವಲ್ಲದೆ, ಅವುಗಳ ಬ್ಯಾಟರಿಗಳು, ಚಾರ್ಜರ್ಗಳು ಮತ್ತು ಪರಿಕರಗಳನ್ನು ಒಳಗೊಂಡಂತೆ ಈ ಬೆಲೆಯನ್ನು ನಿರ್ಧರಿಸಿದೆ. ಕೊಮಾಕಿ ಸಂಭಾವ್ಯ ಖರೀದಿದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ಸಹ ನೀಡುತ್ತಿರುವುದಾಗಿ ತಿಳಿಸಿದೆ.

ಕಂಪನಿಯು ಮೋಟಾರ್, ಬ್ಯಾಟರಿ ಮತ್ತು ನಿಯಂತ್ರಕದ ಮೇಲೆ 3 ವರ್ಷಗಳ ವಾರಂಟಿ ನೀಡುತ್ತಿದೆ. ಇದು 45,999 ರೂ.ಗಳ ಕಡಿಮೆ ವೇಗದ ರೂಪಾಂತರಗಳಿಂದ ಪ್ರಾರಂಭವಾಗುತ್ತದೆ. ಈ ವಾರಂಟಿ 30,000 ಕಿ.ಮೀವರೆಗೆ ಇರುತ್ತದೆ. ಹೆಚ್ಚುವರಿ ಟೆಕ್ ಸೌಲಭ್ಯಗಳನ್ನು ಹುಡುಕುತ್ತಿರುವವರಿಗೆ, ಎರಡೂ ಸ್ಕೂಟರ್‌ಗಳಲ್ಲಿ ಪಾರ್ಕಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ರಿವರ್ಸ್ ಅಸಿಸ್ಟ್ ಮತ್ತು ಕೀ ಫೋಬ್ ಮೂಲಕ ಕೀಲೆಸ್ ಎಂಟ್ರಿಯೊಂದಿಗೆ ಬರುತ್ತವೆ.

ಸೂಪರ್ ಮೆಟಲ್ ಗ್ರೇ ಸೇರಿದಂತೆ ಗಾರ್ನೆಟ್ ರೆಡ್, ಫ್ರಾಸ್ಟ್ ವೈಟ್, ಜೆಟ್ ಬ್ಲ್ಯಾಕ್ ಎಂಬ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಕೂಟರ್‌ಗಳು ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ಬಿಎಲ್ ಡಿಸಿ ಹಬ್‌ಮೋಟಾರ್ ಸಹ ಹೊಂದಿವೆ. ಕಂಪನಿಯು ದೇಶಾದ್ಯಂತ 500ಕ್ಕೂ ಹೆಚ್ಚು ಮಳಿಗೆಗಳ ಮೂಲಕ ತನ್ನ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪುನರುತ್ಪಾದಕ ಬ್ರೇಕಿಂಗ್ (Regenerative braking) ಮತ್ತು ಆಟೋ-ರಿಪೇರಿ ಫಂಕ್ಷನ್ (Auto - repair function) ನಂತಹ ವೈಶಿಷ್ಟ್ಯಗಳಿಂದ ತುಂಬಿದ್ದು, ವಾಹನಗಳು ಸ್ವಯಂ-ರೋಗನಿರ್ಣಯ (Self - diagnosis) ನಡೆಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ, ಸ್ಥಗಿತಗೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಎರಡೂ ಮಾದರಿಗಳು 2 ಹಾಗೂ 2.2 ಕಿಲೋವ್ಯಾಟ್ ಲಿಥಿಯಂ ಬ್ಯಾಟರಿಗಳನ್ನು ಹೊಂದಿದ್ದು, 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಬ್ಯಾಟರಿಗಳೊಂದಿಗೆ, ಒಂದು ಬಾರಿ ಚಾರ್ಜ್ ಮಾಡಿದರೆ 100 ರಿಂದ 150 ಕಿ.ಮೀ ದೂರವನ್ನು ಕ್ರಮಿಸಬಹುದು ಕೊಮಾಕಿ ಎಲೆಕ್ಟ್ರಿಕ್ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 4, 2024, 11:34 [IST]
English summary
Komaki electric launched prime and ace e scooters in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+