ಕೇವಲ ರೂ. 49 ಸಾವಿರಕ್ಕೆ ಬಿಡುಗಡೆಯಾದ ಹೊಸ ಸ್ಟೈಲಿಷ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು!
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೋಮಾಕಿ, ತನ್ನ ಎಕ್ಸ್-ಒನ್ ಲಿಥಿಯಂ ಸರಣಿಯಲ್ಲಿ ಎಕ್ಸ್-ಒನ್ ಪ್ರೈಮ್ ಮತ್ತು ಎಕ್ಸ್-ಒನ್ ಏಸ್ ಮಾದರಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅಲ್ಲದೇ ಕೊಮಾಕಿ ಸಂಭಾವ್ಯ ಖರೀದಿದಾರರಿಗೆ ಈ ಹಬ್ಬದ ಸೀಸನ್‌ನಲ್ಲಿ ಆಕರ್ಷಕ ರಿಯಾಯಿತಿಗಳನ್ನು ಸಹ ನೀಡುತ್ತಿರುವುದಾಗಿ ಹೇಳಿದೆ. ಹೊಸ ಎಕ್ಸ್-ಒನ್ ಪ್ರೈಮ್ ಬೆಲೆಯು ರೂ. 49,999 (ಎಕ್ಸ್ ಶೋರೂಂ) ಮತ್ತು ಎಕ್ಸ್-ಒನ್ ಏಸ್ ಬೆಲೆಯು ರೂ.59,999 (ಎಕ್ಸ್ ಶೋರೂಂ) ಇದೆ. ಇವು ಬ್ಯಾಟರಿಗಳು, ಚಾರ್ಜರ್ಗಳು ಮತ್ತು ಪರಿಕರಗಳನ್ನು ಒಳಗೊಂಡಂತೆ ಈ ಬೆಲೆಯನ್ನು ಹೊಂದಿವೆ.
ಎರಡೂ ಮಾದರಿಗಳು 2 ಹಾಗೂ 2.2 ಕಿಲೋವ್ಯಾಟ್ ಲಿಥಿಯಂ ಬ್ಯಾಟರಿಗಳನ್ನು ಹೊಂದಿದ್ದು, 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಕಂಪನಿಯು ಮೋಟಾರ್, ಬ್ಯಾಟರಿ ಮತ್ತು ನಿಯಂತ್ರಕದ ಮೇಲೆ 3 ವರ್ಷಗಳ ವಾರಂಟಿ ನೀಡುತ್ತಿದೆ. ಇದು 45,999 ರೂ.ಗಳ ಕಡಿಮೆ ವೇಗದ ರೂಪಾಂತರಗಳಿಂದ ಪ್ರಾರಂಭವಾಗುತ್ತದೆ. ಈ ವಾರಂಟಿ 30,000 ಕಿ.ಮೀವರೆಗೆ ಇರುತ್ತದೆ.

ಈ ಬ್ಯಾಟರಿಗಳೊಂದಿಗೆ, ಒಂದು ಬಾರಿ ಚಾರ್ಜ್ ಮಾಡಿದರೆ 100 ರಿಂದ 150 ಕಿ.ಮೀ ದೂರವನ್ನು ಕ್ರಮಿಸಬಹುದು ಎಂದು ಕೊಮಾಕಿ ಎಲೆಕ್ಟ್ರಿಕ್ ತಿಳಿಸಿದೆ. ಹೊಸ ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಹೊಸ ಎಕ್ಸ್-ಒನ್ ಪ್ರೈಮ್ ಮತ್ತು ಎಕ್ಸ್-ಒನ್ ಏಸ್ ಮಾದರಿಗಳ ಬೆಲೆಗಳು ಪ್ರಸ್ತುತ ಇವಿ ವಾಹನ ವಲಯದಲ್ಲಿ ತೀರಾ ಕೈಗೆಟುಕುವ ಬೆಲೆಗಳಾಗಿವೆ.
ಹೆಚ್ಚುವರಿ ಟೆಕ್ ಸೌಲಭ್ಯಗಳನ್ನು ಹುಡುಕುತ್ತಿರುವವರಿಗೆ, ಎರಡೂ ಸ್ಕೂಟರ್‌ಗಳಲ್ಲಿ ಪಾರ್ಕಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ರಿವರ್ಸ್ ಅಸಿಸ್ಟ್ ಮತ್ತು ಕೀ ಫೋಬ್ ಮೂಲಕ ಕೀಲೆಸ್ ಎಂಟ್ರಿಯೊಂದಿಗೆ ಬರುತ್ತವೆ. ಸೂಪರ್ ಮೆಟಲ್ ಗ್ರೇ ಸೇರಿದಂತೆ ಗಾರ್ನೆಟ್ ರೆಡ್, ಫ್ರಾಸ್ಟ್ ವೈಟ್, ಜೆಟ್ ಬ್ಲ್ಯಾಕ್ ಎಂಬ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪುನರುತ್ಪಾದಕ ಬ್ರೇಕಿಂಗ್ (Regenerative braking) ಮತ್ತು ಆಟೋ-ರಿಪೇರಿ ಫಂಕ್ಷನ್ (Auto - repair function), ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ಬಿಎಲ್ ಡಿಸಿ ಹಬ್‌ಮೋಟಾರ್ ಸಹ ಹೊಂದಿವೆ. ಹಾಗೆಯೇ ಸ್ವಯಂ-ರೋಗನಿರ್ಣಯ (Self - diagnosis) ನಡೆಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ.
ಕೊಮಾಕಿ ಎಲೆಕ್ಟ್ರಿಕ್ ಕೇವಲ ಈ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾತ್ರವಲ್ಲದೇ ಭಾರತದಲ್ಲಿ ವಿವಿಧ ಹೈ-ರೇಂಜ್ ಇವಿ ಸ್ಕೂಟರ್‌ಗಳನ್ನು ಕೂಡ ನೀಡುತ್ತಿದೆ. ಈಗಾಗಲೇ ಈ ಸ್ಕೂಟರ್‌ಗಳು ಭಾರತದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ಮಾರಾಟ ಕಾಣುತ್ತಿವೆ. ಮುಂಬರುವ ದಿನಗಳಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಕಂಪನಿಯಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ಹೆಚ್ಚಾಗುತ್ತಲೇ ಇವೆ, ಇದರ ಜೊತೆಗೆ ಇತ್ತೀಚೆಗೆ ಜನ ಪೆಟ್ರೋಲ್ ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ರೇಂಜ್ ನೀಡುವ ಇವಿ ವಾಹನಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಇದೀಗ ಅತೀ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಯಾವ ಮಟ್ಟಕ್ಕೆ ಯಶಸ್ವಿಯಾಗಲಿವೆ ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








