ಅಂತರಾಷ್ಟ್ರೀಯ ಹೈ-ಪರ್ಫಾಮೆನ್ಸ್ ಕೆಟಿಎಂ ಬೈಕ್‌ಗಳು ಭಾರತದಲ್ಲಿ ಬಿಡುಗಡೆ: ವಿಶೇಷತೆಗಳೇನು?

ಯುರೋಪ್‌ನ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ KTM, ತನ್ನ ಅಂತರಾಷ್ಟ್ರೀಯ ಶ್ರೇಣಿಯ ಹೈ-ಪರ್ಫಾಮೆನ್ಸ್ ಮೋಟಾರ್ ಸೈಕಲ್‌ಗಳನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ನಾಲ್ಕು ವಿಶಿಷ್ಟ ವಿಭಾಗಗಳಲ್ಲಿ 10 ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ 1390cc ವರೆಗಿನ KTM ನೇಕೆಡ್, ಆಫ್-ರೋಡ್ ಮೋಟೋಕ್ರಾಸ್, ಟ್ರಾವೆಲ್, ಆಫ್-ರೋಡ್ ಎಂಡ್ಯೂರೋನ ನಾಲ್ಕು ಪ್ರಮುಖ ವಿಭಾಗಗಳನ್ನು ಒಳಗೊಂಡ 10 ಐಕಾನಿಕ್ ಮೋಟಾರ್‌ಸೈಕಲ್‌ಗಳನ್ನು ಅನಾವರಣಗೊಳಿಸಿದೆ.

ಈ ಬೈಕ್‌ಗಳು ಈಗ ಭಾರತದ 7 - ಪ್ರಮುಖ ನಗರಗಳಲ್ಲಿನ ಎಲ್ಲಾ ಹೊಸ KTM ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ. ಇದರಲ್ಲಿ ಗ್ರಾಹಕರು KTM PowerParts ಮತ್ತು KTM ಪವರ್‌ವೇರ್‌ಗಳ ಸಮಗ್ರ ಆಯ್ಕೆಯನ್ನು ಅನ್ವೇಷಿಸಬಹುದು, KTM Pro-XP ಅನುಭವಗಳನ್ನು ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ.

ktm-high-performance-motorcycles-top-things

ಬೆಂಗಳೂರು, ಪುಣೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ 7 ನಗರಗಳ ಪ್ರಮುಖ ಶೋರೂಂಗಳಲ್ಲಿ ಪ್ರೀಮಿಯಂ ಅನುಭವವನ್ನು ಪಡೆಯಬಹುದು. ಭಾರತದಲ್ಲಿ ಹೊಸ ಮೋಟಾರ್‌ಸೈಕಲ್‌ಗಳ ಬೆಲೆ ವಿಷಯಕ್ಕೆ ಬಂದರೆ, ಕೆಟಿಎಂ 85 SX ಬೆಲೆಯು ರೂ.6.69 ಲಕ್ಷ, ಕೆಟಿಎಂ 65 SX ಬೆಲೆಯು ರೂ.5.47 ಲಕ್ಷ, ಕೆಟಿಎಂ 250 SX-F ಬೆಲೆಯು ರೂ.9.58 ಲಕ್ಷ, ಕೆಟಿಎಂ 50 SX ಬೆಲೆಯು ರೂ.4.75 ಲಕ್ಷವಿದೆ.

ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೆಲೆಯು ರೂ.22.74 ಲಕ್ಷ, ಕೆಟಿಎಂ 890 ಅಡ್ವೆಂಚರ್ ಆರ್ ಬೆಲೆಯು ರೂ.15.80 ಲಕ್ಷ, ಕೆಟಿಎಂ 1390 ಸೂಪರ್ ಡ್ಯೂಕ್ R ಬೆಲೆಯು ರೂ.22.96 ಲಕ್ಷ, ಕೆಟಿಎಂ 890 ಡ್ಯೂಕ್ R ಬೆಲೆಯು ರೂ.14.50 ಲಕ್ಷ, ಕೆಟಿಎಂ 350 EXC-F ಬೆಲೆಯು ರೂ.12.96 ಲಕ್ಷ, ಕೆಟಿಎಂ 450 SX-F ಬೆಲೆಯು ರೂ.10.25 ಲಕ್ಷವಿದೆ.

ktm-high-performance-motorcycles-top-things

ಎಂಡ್ಯೂರೋ ಮತ್ತು ಮೋಟೋಕ್ರಾಸ್: ಗಂಭೀರ ಮೋಟೋಕ್ರಾಸ್ ರೇಸರ್‌ಗಳಿಗಾಗಿ KTM 450 SX-F ಮತ್ತು KTM 250 SX-F ಬೈಕ್‌ಗಳನ್ನು ನಿರ್ಮಿಸಲಾಗಿದೆ. ಗಂಭೀರ ಆಫ್ ರೋಡ್ ಉತ್ಸಾಹಿಗಳಿಗೆ KTM 350 EXC-F ಅನ್ನು ನಿರ್ಮಿಸಲಾಗಿದೆ. ಯುವ ಸ್ಪರ್ಧಾತ್ಮಕ ರೇಸರ್‌ಗಳಿಗಾಗಿ KTM 85 SX, KTM 65 SX & KTM 50 SX ಅನ್ನು ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ನೇಕೆಡ್ ಮತ್ತು ಅಡ್ವೆಂಚರ್: ಅಡ್ವೆಂಚರ್ ವಿಭಾಗದಲ್ಲಿ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಮತ್ತು ಕೆಟಿಎಂ 890 ಅಡ್ವೆಂಚರ್ ಆರ್ ಮೋಟಾರ್‌ಸೈಕಲ್‌ಗಳನ್ನು ಅಡ್ವೆಂಚರ್ ಬಯಸುವವರಿಗಾಗಿ ನಿರ್ಮಿಸಲಾಗಿದೆ. KTM 1390 ಸೂಪರ್ ಡ್ಯೂಕ್ R ಮತ್ತು KTM 890 DUKE R ಮೋಟಾರ್‌ಸೈಕಲ್‌ಗಳು ನೇಕೆಡ್ ಪರ್ಫಾಮೆನ್ಸ್ ಬಯಸುವ ಸವಾರರಿಗಾಗಿ ನಿರ್ಮಿಸಲಾಗಿದೆ.

ktm-high-performance-motorcycles-top-things

ಈ ಬೈಕ್‌ಗಳು ಈಗ ಭಾರತದ ಬೆಂಗಳೂರು, ಪುಣೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ 7 ನಗರಗಳ ಪ್ರಮುಖ ಎಲ್ಲಾ ಹೊಸ KTM ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ. ಇದರಲ್ಲಿ ಗ್ರಾಹಕರು KTM PowerParts ಮತ್ತು KTM ಪವರ್‌ವೇರ್‌ಗಳ ಸಮಗ್ರ ಆಯ್ಕೆಯನ್ನು ಅನ್ವೇಷಿಸಬಹುದು, KTM Pro-XP ಅನುಭವಗಳನ್ನು ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, November 16, 2024, 10:00 [IST]
English summary
Ktm high performance motorcycles top things
Read more on ktm india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+