ಭಾರತ ನಿರ್ಮಿತ ಸ್ಕೂಟರ್‌ಗೆ ಮುಗಿಬಿದ್ದ ಯುರೋಪ್ ದೇಶಗಳು: ಸ್ಕೂಟರ್ ವಿಶೇಷತೆಗಳೇನು?

ವಿದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರೀ ಬೇಡಿಕೆ ಇದೆ. ಆದರೆ ಇತ್ತೀಚೆಗೆ ಯುಕೆ, ಸ್ಪೇನ್, ಫ್ರಾನ್ಸ್, ಇಟಲಿ, ಜರ್ಮನಿ, ಟರ್ಕಿ, ಸ್ವಿಟ್ಜರ್ಲೆಂಡ್, ಗ್ರೀಸ್ ಮತ್ತು ಪೋರ್ಚುಗಲ್‌ನಂತಹ ದೇಶಗಳಲ್ಲಿ ಯಮಹಾ ರೇ ಝಡ್ಆರ್ 125 ಸ್ಕೂಟರ್‌ಗೆ ಬೇಡಿಕೆ ಹೆಚ್ಚಾಗಿದೆ. ಈ ಸ್ಕೂಟರ್ ಭಾರತದಲ್ಲಿ ನಿರ್ಮಾಣವಾಗುತ್ತಿದ್ದು, ಯಮಹಾ ಕಂಪನಿಯು 13,400 ಮೇಡ್ ಇನ್ ಇಂಡಿಯಾ ರೇ ಝಡ್ಆರ್ 125 ಬೈಕುಗಳನ್ನು ರಫ್ತು ಮಾಡಿದೆ. ಈ ಸ್ಕೂಟರ್ ಭಾರತದಲ್ಲೂ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಸ್ಕೂಟರ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಯಮಹಾ ರೇ ಝಡ್ಆರ್ 125 ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.85,030 ರಿಂದ ರೂ.96,730ಗಳಾಗಿದೆ. ಇದು ಡ್ರಮ್, ಡಿಸ್ಕ್ ಮತ್ತು ಮಾನ್‌ಸ್ಟರ್ ಎನರ್ಜಿ ಮೋಟೋ ಜಿಪಿ ಎಡಿಷನ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಮೆಟಾಲಿಕ್ ಬ್ಲ್ಯಾಕ್, ಸಿಯಾನ್ ಬ್ಲೂ ಮತ್ತು ಮ್ಯಾಟ್ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

yamaha-ray-zr-125-scooter

ಡ್ರಮ್ ಬ್ರೇಕ್ ರೂಪಾಂತರವು ಮೆಟಾಲಿಕ್ ಬ್ಲ್ಯಾಕ್, ಸಿಯಾನ್ ಬ್ಲೂ ಮತ್ತು ಮ್ಯಾಟ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಇದಕ್ಕೆ ವ್ಯತಿರಿಕ್ತವಾಗಿ, ಡಿಸ್ಕ್ ಬ್ರೇಕ್ ರೂಪಾಂತರವನ್ನು ಸಿಯಾನ್ ಬ್ಲೂ, ಮ್ಯಾಟ್ ರೆಡ್ ಮತ್ತು ಮೆಟಾಲಿಕ್ ಬ್ಲ್ಯಾಕ್ ಜೊತೆಗೆ ರೇಸಿಂಗ್ ಬ್ಲೂ ಮತ್ತು ಡಾರ್ಕ್ ಮ್ಯಾಟ್ ಬ್ಲೂ ಆಯ್ಕೆಗಳಲ್ಲಿ ನೀಡಲಾಗುತ್ತಿದೆ.

ಸ್ಕೂಟರ್ ಎಂಜಿನ್ ಬಗ್ಗೆ ಮಾತನಾಡುವುದಾದ್ರೆ, ಫಾಸಿನೊ 125 ಎಫ್‌ಐ ಹೈಬ್ರಿಡ್ ಸ್ಕೂಟರ್‌ನಲ್ಲಿ ಸಿಗುವ ಅದೇ ಎಂಜಿನ್ ಅನ್ನು ಯಮಹಾ ರೇ ಝಡ್ಆರ್ 125 ನಲ್ಲೂ ನೀಡಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 8.1 ಬಿಹೆಚ್‌ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

yamaha-ray-zr-125-scooter

ವಿದೇಶಗಳಿಗೆ ರಫ್ತು: ಇಷ್ಟು ಅಗ್ಗದ ಬೆಲೆಗೆ ಅತ್ಯುತ್ತಮ ಫಿಚರ್‌ಗಳನ್ನು ನೀಡುತ್ತಿರುವ ಕಾರಣ ಸ್ಕೂಟರ್ ವಿದೇಶಿ ಮಾರುಕಟ್ಟೆಗಳಲ್ಲೂ ಉತ್ತಮ ಬೇಡಿಕೆ ಪಡೆಯುತ್ತಿದೆ. ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ರೇ ಝಡ್ಆರ್ 125 ಸ್ಕೂಟರ್‌ನ 13,400 ಯುನಿಟ್‌ಗಳನ್ನು ಯುರೋಪಿಯನ್ ಮಾರುಕಟ್ಟೆಗೆ ರಫ್ತು ಮಾಡಿದೆ.

ಈ ಮಾದರಿಗಳನ್ನು ಜನವರಿ ಮತ್ತು ಜುಲೈ ನಡುವೆ 27 ಯುರೋಪಿಯನ್ ದೇಶಗಳಿಗೆ ರವಾನಿಸಲಾಗಿದೆ. ಯುಕೆ, ಸ್ಪೇನ್, ಫ್ರಾನ್ಸ್, ಇಟಲಿ, ಜರ್ಮನಿ, ಟರ್ಕಿ, ಸ್ವಿಟ್ಜರ್ಲೆಂಡ್, ಗ್ರೀಸ್ ಮತ್ತು ಪೋರ್ಚುಗಲ್ ದೇಶಗಳಲ್ಲಿ ರೇ ಝಡ್ಆರ್ 125 ಯಶಸ್ವಿಯಾಗಿದೆ. ಯುರೋಪ್ ಮಾರುಕಟ್ಟೆಗಾಗಿ ಯಮಹಾ ರೇ ಝಡ್ಆರ್ 125 ಅನ್ನು ತಮಿಳುನಾಡು ಮೂಲದ ಘಟಕದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.

yamaha-ray-zr-125-scooter

ಯಮಹಾ ಮೋಟಾರ್ ಇಂಡಿಯಾ ಅಧ್ಯಕ್ಷ ಈಶಿನ್ ಚಿಹಾನಾ ಮಾತನಾಡಿ, "ಮೇಡ್ ಇನ್ ಇಂಡಿಯಾ, ಯಮಹಾದ ರೇ ಝಡ್ಆರ್ 125 ಎಫ್ಐ ಹೈಬ್ರಿಡ್ ಯುರೋಪ್‌ನಲ್ಲಿ ಅದ್ಭುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಈ ಸಾಧನೆಯು ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಈ ಸ್ಕೂಟರ್ ಒಳಗೊಂಡಿರುವ ಉನ್ನತ ಗುಣಮಟ್ಟದ ಪ್ರಮಾಣವನ್ನು ಹೇಳುತ್ತದೆ.

ಈ ಮಾರುಕಟ್ಟೆಯಲ್ಲಿ ಮಾದರಿಯ ಗಮನಾರ್ಹ ಮಾರಾಟದ ಬೆಳವಣಿಗೆಯು, ಭಾರತದಲ್ಲಿ ಮಾತ್ರವಲ್ಲ, ಯುರೋಪ್‌ನಂತಹ ಇತರ ಪ್ರಬುದ್ಧ ಮಾರುಕಟ್ಟೆಗಳಲ್ಲಿಯೂ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸುವ ಮೂಲಕ ನಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಈ ಮೈಲಿಗಲ್ಲು ಭಾರತವನ್ನು ಜಾಗತಿಕವಾಗಿ ಯಮಹಾದ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸುವ ನಮ್ಮ ಪ್ರಯತ್ನವನ್ನು ಒತ್ತಿ ಹೇಳುತ್ತದೆ ಎಂದರು.

More from DriveSpark

Article Published On: Wednesday, August 7, 2024, 11:47 [IST]
English summary
Made in india yamaha ray zr 125 scooter export to european countries
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+