ಅತ್ಯಾಧುನಿಕ ADAS ಟೆಕ್ನಾಲಜಿಯೆನ್ನೇ ಗೊಂದಲಗೊಳಿಸಿದ ಭಾರತದ ಟ್ರಾಫಿಕ್!
'ADAS' ತಂತ್ರಜ್ಞಾನ, ಇದು ಅತ್ಯಾಧುನಿಕ ಹಾಗೂ ವಿದೇಶಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಟೆಕ್ನಾಲಜಿಯಾಗಿದೆ. ಇದನ್ನು ಮೊದಲು ಭಾರತಕ್ಕೆ ಪರಿಚಯಿಸಿದವರು MG ಮೋಟಾರ್ಸ್. ಕಂಪನಿಯ ಗ್ಲೋಸ್ಟರ್ ಎಸ್‌ಯುವಿ ಮೊದಲ ADAS ಟೆಕ್ ಹೊಂದಿರುವ ಕಾರಾಗಿದೆ. ಇದೀಗ ಬಹುತೇಕ ಕಂಪನಿಗಳು ತಮ್ಮ ಪ್ರೀಮಿಯಂ ಕಾರುಗಳ ಹೈ-ಸ್ಪೆಕ್ ರೂಪಾಂತರಗಳಲ್ಲಿ ADAS ಅನ್ನು ನೀಡಲು ಪ್ರಾರಂಭಿಸಿದ್ದಾರೆ.
ಕಂಪನಿಯಿಂದ ನೀಡಲಾಗುವ ಈ ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ) ತಂತ್ರಜ್ಞಾನವು ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಮನಬಂದಂತೆ ಕೆಲಸ ಮಾಡುತ್ತದೆ. ಇನ್ನು ಆಫ್ಟರ್ ಮಾರ್ಕೆಟ್‌ನಿಂದ ಪಡೆದ ADAS ಬಗ್ಗೆ ಹೇಳಬೇಕೆ? ಮೈಲ್ಡ್ ADAS ನೆರವಿನೊಂದಿಗೆ ಬರುವ ಆಫ್ಟರ್ ಮಾರ್ಕೆಟ್ ಡ್ಯಾಶ್‌ಕ್ಯಾಮ್‌ಗಳು ಸಾಮಾನ್ಯವಾಗಿ ಸ್ಟಾಕ್ ADAS ನಷ್ಟು ನಿಖರವಾಗಿರುವುದಿಲ್ಲ ಎಂಬುದಕ್ಕೆ ಈ ಘಟನೆಯೆ ಸಾಕ್ಷಿಯಾಗಿದೆ.

ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಇತ್ತೀಚಿನ ಪೋಸ್ಟ್, ಭಾರೀ ಟ್ರಾಫಿಕ್‌ನಲ್ಲಿ ವಾಹನವನ್ನು ಓಡಿಸುವಾಗ ಕಾರಿನಲ್ಲಿ ಅಳವಡಿಸಲಾದ 70mai ಡ್ಯಾಶ್‌ಕ್ಯಾಮ್ ಗೊಂದಲಕ್ಕೆ ಒಳಗಾಗಿದೆ. ಟ್ರಾಫಿಕ್ ಮತ್ತು ಜನರಿಂದ ತುಂಬಿರುವ ರಸ್ತೆಯಲ್ಲಿ ಕಾರು ಪಾದಚಾರಿ ಎಚ್ಚರಿಕೆ (Pedestrian alert)ಯನ್ನು ತೋರುವ ಡ್ಯಾಶ್‌ಕ್ಯಾಮ್, ಅಸಮಂಜಸ ಎಚ್ಚರಿಕೆಗಳನ್ನು ನೀಡಿ ಅಸಹಜವಾಗಿ ವರ್ತಿಸಿದೆ.
ವಾಹನದ ಸುತ್ತಲೂ ಇರುವ ಪಾದಚಾರಿಗಳನ್ನು ಪತ್ತೆಹಚ್ಚಲು ಸಿಸ್ಟಮ್‌ಗೆ ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ, ಇದು ಅನಿಯಮಿತ ಎಚ್ಚರಿಕೆಗಳನ್ನು ಬೀಪ್ ಮಾಡಲು ಪ್ರಾರಂಭಿಸಿದೆ. ಕೊನೆಗೂ ಭಾರತದಂತಹ ಟ್ರಾಫಿಕ್ ಪರಿಸ್ಥಿತಿಗಳಿರುವ ದೇಶದಲ್ಲಿ ADAS ಖಂಡಿತ ಅಪಾಯವನ್ನು ತಂದೊಡ್ಡುತ್ತದೆ ಎಂದು ವೈರಲ್ ಆಗುತ್ತಿರುವ ವಿಡಿಯೋಗೆ ಸಾವರ್ಜನಿಕರು ಪ್ರತಿಕ್ರಿಯಿಸುತ್ತಿದ್ದಾರೆ.

ಈ ಹಿಂದೆ ಕಂಪನಿ ನೀಡುವ ADAS ಕೂಡ ತಪ್ಪಾಗಿ ವರ್ತಿಸಿದ ಕೆಲವು ನಿದರ್ಶನಗಳಿವೆ, ಇದರಿಂದಾಗಿ ಸಣ್ಣ ಅಪಘಾತಗಳು ಕೂಡ ಸಂಭವಿಸಿವೆ. ಈ ADAS ತಂತ್ರಜ್ಞಾನ ಕೇವಲ ಕಟ್ಟುನಿಟ್ಟಾದ ಟ್ರಾಫಿಕ್ ನಿಯಮಗಳನ್ನು ಒಳಗೊಂಡಿರುವ ದೇಶಗಳಿಗೆ ಮಾತ್ರ ಸೂಕ್ತ. ಹಾಗೆಂದು ಭಾರತಕ್ಕೆ ಬೇಡ ಎಂಬುದು ನಮ್ಮ ಅಭಿಪ್ರಾಯವಲ್ಲ, ಇವು ಹಚ್ಚಿನ ಟ್ರಾಫಿಕ್ ನಗರಗಳಿಗೆ ಸೂಕ್ತವಲ್ಲ.
ADAS ದುರುಪಯೋಗ: ಅನೇಕ ಜನರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ವಿಶೇಷವಾಗಿ ಹೈ-ಸ್ಪೀಡ್ ಹೈವೇನಲ್ಲಿ ಡ್ರೈವಿಂಗ್ ಮಾಡುವಾಗ ವಾಹನದ ಮೇಲೆ ಸಂಪೂರ್ಣವಾಗಿ ನಿಯಂತ್ರಣವನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಕೆಲವರು ಕಾರಿನೊಳಗೆ ಸ್ಟೀರಿಂಗ್ ಬಿಟ್ಟು ಆಟಗಳನ್ನು ಆಡುವುದು, ತಿನ್ನುವುದು ಅಥವಾ ಮಲಗುವುದು ಮುಂತಾದ ವಿವಿಧ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

ಕಾರು ರಸ್ತೆಯಲ್ಲಿರುವಾಗ ಚಾಲಕರಿಗೆ ಸಹಾಯ ಮಾಡಲು ADAS ರಾಡಾರ್‌ಗಳು ಮತ್ತು ಕ್ಯಾಮೆರಾ, ಸೆನ್ಸಾರ್‌ಗಳನ್ನು ಅವಲಂಬಿಸಿರುತ್ತದೆ. ಭಾರತದ ರಸ್ತೆ ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಕಾರನ್ನು ADAS ಗೆ ಬಿಡಬಾರದು, ಬದಲಿಗೆ ನಮ್ಮ ಪ್ರಮೆಯ ಕೂಡ ಕಾರಿನ ಮೇಲೆ ಇರಬೇಕು. ಕಾರು ತಯಾರಕರು ಭಾರತದಲ್ಲಿ ಲೆವೆಲ್-1 ಮತ್ತು ಲೆವೆಲ್-2 ADAS ಕಾರ್ಯಗಳನ್ನು ನೀಡುತ್ತವೆ.
ಇದು ಚಾಲಕರಿಗೆ ಭಾಗಶಃ ಸ್ವಾಯತ್ತ ಚಾಲನೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಇಲ್ಲಿ ವಾಹನವು ಅದರ ಚಲನೆಯ ಕೆಲವು ಭಾಗಗಳನ್ನು ನಿಯಂತ್ರಿಸುತ್ತದೆ. ಈ ವೈಶಿಷ್ಟ್ಯಗಳು ಚಾಲನೆಯನ್ನು ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿವೆ. ಆದರೆ ದುರುಪಯೋಗಪಡಿಸಿಕೊಂಡರೆ ವಾಹನದ ಚಾಲಕ ಮತ್ತು ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications