ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬಗ್ಗೆ ಜನ ಹೆಚ್ಚು ಕೇಳಲಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ!
ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್, ಇತ್ತೀಚೆಗೆ ಗೆರಿಲ್ಲಾ 450 ಬೈಕ್ ಅನ್ನು ಪರಿಚಯಿಸಿದ್ದು, ಈ ಸರಣಿಯಲ್ಲಿಯೇ ಅತ್ಯಂತ ಕೈಗೆಟುಕುವ 450 ಸಿಸಿ ಮೋಟಾರ್ ಸೈಕಲ್ ಆಗಿದೆ. ಈ ಮೋಟಾರ್‌ಸೈಕಲ್ ಹಿಮಾಲಯನ್ 450 ನೊಂದಿಗೆ ಸಾಕಷ್ಟು ವಿಶೇಷತೆಗಳನ್ನು ಹಂಚಿಕೊಳ್ಳುತ್ತದೆ. ಆದರೆ ಎರಡೂ ಡಿಸೈನ್ ಹಾಗೂ ಇನ್ನಿತರ ವಿಷಯಗಳಲ್ಲಿ ಬೇರೆ ಬೇರೆಯಾಗಿವೆ. ಈ ಕುರಿತು ಹಲವರು ಖರೀದಿದಾರರಿಗೆ ಸಾಕಷ್ಟು ಸಂದೇಹಗಳಿವೆ. ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಗೆರಿಲ್ಲಾ 450ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕೇಳಲಾದ ಐದು ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.
ಗೆರಿಲ್ಲಾ 450 ಯಾವೆಲ್ಲಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ?: ಗೆರಿಲ್ಲಾ 450 ಬೈಕ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ರೈಡ್-ಬೈ-ವೈರ್ ತಂತ್ರಜ್ಞಾನ, ಡ್ಯುಯಲ್-ಚಾನೆಲ್ ಎಬಿಎಸ್, ಇಕೋ ಮತ್ತು ಪರ್ಫಾಮೆನ್ಸ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿರುವ ಆಲ್ ಎಲ್ಇಡಿ ಲೈಟಿಂಗ್, 4-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ನ್ಯಾವಿಗೇಷನ್ ಮತ್ತು ಸ್ಮಾರ್ಟ್ ಸಂಪರ್ಕಕ್ಕಾಗಿ ಅಂತರ್ನಿರ್ಮಿತ ಗೂಗಲ್ ಮ್ಯಾಪ್ಸ್ ಹೊಂದಿದೆ.

ಎಂಟ್ರಿ ಲೆವೆಲ್ ಗೆರಿಲ್ಲಾ 450 ಐಚ್ಛಿಕ ನ್ಯಾವಿಗೇಷನ್ ಪಡೆದಿದೆಯೇ?: ಬೇಸ್ ವೇರಿಯಂಟ್ ಗೆರಿಲ್ಲಾ, ಅನಲಾಗ್ ಸ್ಪೀಡೋಮೀಟರ್ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿದ್ದು, ಎಲ್‌ಸಿಡಿ ಮ್ಯೂಟಿ-ಇನ್ಫಾರ್ಮೇಶನ್ ಡಿಸ್ಪ್ಲೇಯೊಂದಿಗೆ ಫ್ಯೂಯಲ್ ಗೇಜ್, ಓಡೋಮೀಟರ್, ಟ್ರಿಪ್‌ಮೀಟರ್, ರೈಡ್ ಮೋಡ್, ಗೇರ್ ಇಂಡಿಕೇಟರ್, ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಐಚ್ಛಿಕ ಅಕ್ಸೆಸೊರಿಯಾಗಿದೆ.
ಎಂಜಿನ್ ಹಿಮಾಲಯನ್ 450 ನಂತೆಯೇ ಇದೆಯೇ?: ತಾಂತ್ರಿಕವಾಗಿ ಹೇಳುವುದಾದರೆ ಗೆರಿಲ್ಲಾ, ಹಿಮಾಲಯನ್ ನಂತೆಯೇ 450 ಸಿಸಿ ಪವರ್ ಟ್ರೇನ್ ಅನ್ನು ಪಡೆಯುತ್ತದೆ. ಆದರೆ ಕಂಪನಿಯು ಇದಕ್ಕೆ ಕೆಲವು ಬದಲಾವಣೆಗಳನ್ನು ನೀಡಿದೆ. ರಾಯಲ್ ಎನ್ ಫೀಲ್ಡ್ ಗೆರಿಲ್ಲಾಗಾಗಿ ಎಂಜಿನ್ ಅನ್ನು ವಿಭಿನ್ನವಾಗಿ ಟ್ಯೂನ್ ಮಾಡಿದೆ. ಇದು ನಗರಕ್ಕಾಗಿ ನಿರ್ಮಿಸಿದ ಮೋಟಾರ್ ಸೈಕಲ್ ಆಗಿದೆ.

ಗೆರಿಲ್ಲಾ 450 ಪ್ರತಿಸ್ಪರ್ಧಿಗಳು ಯಾವುವು?: ಗೆರಿಲ್ಲಾ 450 ಬೈಕ್ ಟ್ರಯಂಫ್ ಸ್ಪೀಡ್ 400, ಹೀರೋ ಮೇವರಿಕ್ 440 ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ನೇರ ಪ್ರತಿಸ್ಪರ್ಧಿಗಳನ್ನು ಹೊರತುಪಡಿಸಿ, ಹೋಂಡಾ ಸಿಬಿ 300 ಆರ್ ಮತ್ತು ಹಸ್ಕ್ ವರ್ನಾ ಸ್ವಾರ್ಟ್ ಪಿಲೆನ್ 401 ಎಂಬ ಎರಡು ನೇಕೆಡ್ ಬೈಕ್‌ಗಳು ಇದೇ ಬೆಲೆಯ ಶ್ರೇಣಿಯಲ್ಲಿವೆ.
ಗೇರ್ ರೇಷಿಯೊ ಹಿಮಾಲಯನ್ 450 ಗಿಂತ ಭಿನ್ನವಾಗಿದೆಯೇ?: ಗೆರಿಲ್ಲಾ 450 ಬೈಕಿನಲ್ಲಿ ಹಿಮಾಲಯನ್ ಬೈಕಿನಂತೆಯೇ 6 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ. ರಾಯಲ್ ಎನ್ ಫೀಲ್ಡ್ ಕಂಪನಿಯು ಅಡ್ವೆಂಚರ್ ಬೈಕ್ ನಲ್ಲಿ 47 ಇಂಚಿನ ಹಿಂಭಾಗದ ಸ್ಪ್ರೋಕೆಟ್ ಬದಲಿಗೆ 45 ಇಂಚಿನ ಹಿಂಭಾಗದ ಸ್ಪ್ರೋಕೆಟ್ ಅನ್ನು ಅಳವಡಿಸಿದೆ. ಈ ನವೀಕರಣದಿಂದಾಗಿ, ಗೆರಿಲ್ಲಾ 450 ಕಡಿಮೆ-ಮಟ್ಟದ ಟಾರ್ಕ್ ಅನ್ನು ಸುಧಾರಿಸಿದೆ.

ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕ್ ವಿವಿಧ ರೂಪಾಂತರ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಅನಲಾಗ್ (Analogue) ಮಾದರಿಯು ರೂ.3.08 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ನೀವು ರೂ.50,000 ಡೌನ್ ಪೇಮೆಂಟ್ ಪಾವತಿಸಿ ಈ ಮೋಟಾರ್‌ಸೈಕಲ್‌ನ್ನು ತೆಗೆದುಕೊಂಡರೆ, ರೂ.2.58 ಲಕ್ಷ ಸಾಲವಿರುತ್ತದೆ. ಅದಕ್ಕೆ ಶೇಕಡ 6% ಬಡ್ಡಿ ದರದಲ್ಲಿ ಮೂರು ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.7,851 ಇಎಂಐ ಕಟ್ಟಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








