Hero: 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಬೈಕ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಬೈಕ್‌ಗಳು ದಶಕಗಳಿಂದ ಸಾಮಾನ್ಯ ಜನರ ಮನಸ್ಸನ್ನು ಗೆದ್ದಿವೆ. ಅದಕ್ಕೆ ಸಾಕ್ಷಿ ಎಂಬಂತೆ ಪುಟ್ಟ ಹಳ್ಳಿಯಿಂದ ರಾಷ್ಟ್ರ ರಾಜಧಾನಿ ದೆಹಲಿಯ ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇಂದು ಹೀರೋ ಕಂಪನಿ ಮತ್ತಷ್ಟು ಸಂಖ್ಯೆಯಲ್ಲಿ ಖರೀದಿದಾರರನ್ನು ಸೆಳೆಯಲು ಎಕ್ಸ್‌ಸ್ಟ್ರೀಮ್ 60ಆರ್ 4ವಿ ಮೋಟಾರ್‌ಸೈಕಲ್‌ನ '2024 ಎಡಿಷನ್'ನ್ನು ಅದ್ದೂರಿಯಾಗಿದೆ ಬಿಡುಗಡೆ ಮಾಡಿದೆ. ಬನ್ನಿ.. ಈ ಬೈಕ್ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ನೂತನ 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಎಡಿಷನ್ (2024 Hero Xtreme 160R 4V Edition) ರೂ.1,38,500 (ಎಕ್ಸ್ ಶೋರೂಂ - ದೆಹಲಿ) ಬೆಲೆಯನ್ನು ಹೊಂದಿದೆ. ಇದು ಹಿಂದಿನ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) 'ಪ್ರೀಮಿಯಂ'ಗಿಂತ ರೂ.2,000 ದುಬಾರಿಯಾಗಿದೆ. ವಿನ್ಯಾಸದಲ್ಲಿ ಕೆಲವೊಂದು ಕಾಸ್ಮೆಟಿಕ್ (ಸೌಂದರ್ಯಾತ್ಮಕ) ಬದಲಾವಣಿಗಳನ್ನು ಪಡೆದಿದೆ.

ಈ 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಎಡಿಷನ್ ಬೈಕ್‌ನ ಬಾಡಿವರ್ಕ್ (ಕುಶಾಲತ್ಮಕ ಕೆಲಸ) ಯಾವುದೇ ರೀತಿಯಲ್ಲಿ ಮಾರ್ಪಾಡುಗೊಂಡಿಲ್ಲ. ಆದಾಗ್ಯೂ ಕೆವ್ಲರ್ ಬ್ರೌನ್ ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದಿದೆ. ಹಳೆಯ ಮಾದರಿಯಂತೆ ನಿಯಾನ್ ಶೂಟಿಂಗ್ ಸ್ಟಾರ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣ (ಕಲರ್)ಗಳೊಂದಿಗೂ ಲಭ್ಯವಿದೆ.
ಹೊಚ್ಚ ಹೊಸ ಮೋಟಾರ್‌ಸೈಕಲ್ ಹಲವು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಪ್ಯಾನಿಕ್ ಬ್ರೇಕ್ ಅಲರ್ಟ್ ಸಿಸ್ಟಮ್‌ನ್ನು ಪಡೆದಿದೆ. ಹೊಸದಾಗಿರುವ ಡ್ರ್ಯಾಗ್ ರೇಸ್ ಟೈಮರ್‌ನ್ನು ಹೊಂದಿದ್ದು, ಸವಾರರು 0-60 ಕೆಎಂಪಿಹೆಚ್ ವೇಗ ಪಡೆಯಲು ತೆಗೆದುಕೊಂಡು ಸಮಯವನ್ನು ತೋರಿಸುತ್ತದೆ. ಜೊತೆಗೆ ಸಿಂಗಲ್-ಪೀಸ್ ಸೀಟ್‌ನ್ನು ತನ್ನದಾಗಿಸಿಕೊಂಡಿದೆ.

2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಎಡಿಷನ್ ಬೈಕ್‌ನ ಪವರ್‌ಟ್ರೇನ್‌ನಲ್ಲೂ ಬದಲಾವಣೆಗಳಾಗಿಲ್ಲ. ಹಿಂದಿನ ಮಾದರಿ (ಮಾಡೆಲ್)ಯಂತೆ 163.2 ಸಿಸಿ ಸಿಂಗಲ್ ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 16.6 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 14.6 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಈ ನೂತನ ಮೋಟಾರ್‌ಸೈಕಲ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ (ಫ್ರಂಟ್) ಯುಎಸ್‌ಡಿ ಪೋರ್ಕ್ಸ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಹೊಂದಿದೆ. ಹ್ಯಾಂಡಲ್ ಬಾರ್ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ. 17-ಇಂಚಿನ ಅಲಾಯ್ ವೀಲ್‌ಗಳು, ಮುಂದೆ 100/80-ಆರ್17 ಮತ್ತು ಹಿಂದೆ 130/70-ಆರ್17 ಅಳತೆಯ ಟೈರ್‌ಗಳನ್ನು ಹೊಂದಿದೆ.

ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಮೋಟಾರ್‌ಸೈಕಲ್‌ಗೆ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಈ ಅಪಾಚೆ ರೂ.1.10 ಲಕ್ಷದಿಂದ ರೂ.1.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 159.7 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 46.99 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








