TVS: ಶೋರೂಂಗೆ ಬಂದೆ ಬಿಡ್ತು ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್.. ರೂ.73,700ಕ್ಕೆ ಸಿಗುತ್ತದೆ, ವಿಶೇಷತೆಗಳೇನು?
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಮೋಟಾರ್ (TVS Motor) ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ನವೀನ ಶೈಲಿಯ ವಿನ್ಯಾಸ (Design) ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು (Features) ಪಡೆದುಕೊಂಡಿರುವ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಕಳೆದ ವಾರವಷ್ಟೇ 2024ರ ನವೀಕರಿಸಿದ ಹೊಚ್ಚ ಹೊಸ ಜುಪಿಟರ್ 110 (Jupiter 110) ಸ್ಕೂಟರ್‌ನ್ನು ಬಿಡುಗಡೆಗೊಳಿಸಿತ್ತು. ಈ ಸ್ಕೂಟರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಸದ್ಯ, ದೇಶಾದ್ಯಂತ ವಿವಿಧ ಶೋರೂಂಗಳಿಗೆ ನೂತನ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಕಂಪನಿ ತಲುಪಿಸುವುದಕ್ಕೆ ಶುರು ಮಾಡಿದೆ. ಹೊಸ ಸ್ಕೂಟರ್ ಶೋರೂಂನಲ್ಲಿ ನಿಂತಿರುವ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಶೀಘ್ರದಲ್ಲೇ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದ್ದು, ಖರೀದಿದಾರರು ಸಹ ಕಾತರದಿಂದ ಕಾಯುತ್ತಿದ್ದಾರೆ.

ಈ ಟಿವಿಎಸ್ ಜುಪಿಟರ್ 110 ಸ್ಕೂಟರ್ ರೂ.73,700 ದಿಂದ ರೂ.87,250 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಡ್ರಮ್, ಡ್ರಮ್ ಅಲಾಯ್, ಡ್ರಮ್ ಎಸ್‌ಎಕ್ಸ್‌ಸಿ ಹಾಗೂ ಡಿಸ್ಕ್ ಎಸ್‌ಎಕ್ಸ್‌ಸಿ ಎಂಬ 4 ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದ್ದು, ಡಾನ್ ಬ್ಲೂ, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್ ಹಾಗೂ ಸ್ಟಾರ್ಲೈಟ್ ಬ್ಲೂ ಗ್ಲೋಸ್ ಸೇರಿದಂತೆ 6 ಬಣ್ಣಗಳೊಂದಿಗೂ ಲಭ್ಯವಿದೆ.
ನೂತನ ಟಿವಿಎಸ್ ಜುಪಿಟರ್ 110 ಶಕ್ತಿಯುತ ಪವರ್‌ಟ್ರೇನ್ ಪಡೆದಿದೆ. ಇದರ 113 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ 7.91 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 9.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದ್ದು, ಹೆಚ್ಚು ಟಾರ್ಕ್ ಉತ್ಪಾದಿಸಲು ಐಗೋ ಅಸಿಸ್ಟ್ ಎಂಬ ವೈಶಿಷ್ಟ್ಯವನ್ನು ಹೊಂದಿದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್ ಅತ್ಯಾಕರ್ಷಕ ವಿನ್ಯಾಸವನ್ನು ಪಡೆದಿದೆ. ಮುಂಭಾಗ (ಫ್ರಂಟ್) ವಿನೂತನವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ನೊಂದಿಗೆ ವಿಶಾಲವಾಗಿರುವ (ವೈಡ್) ಎಲ್ಇಡಿ ಡಿಆರ್‌ಎಲ್‌ನ್ನು ಪಡೆದಿದೆ. ಹಿಂಭಾಗದ (ರೇರ್) ವಿನ್ಯಾಸವು ಉತ್ತಮವಾಗಿದ್ದು, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್ ಲೈಟ್ ಒಳಗೊಂಡಿರುವ ಎಲ್ಇಡಿ ಲೈಟ್ ಬಾರ್‌ನ್ನು ಹೊಂದಿದೆ.
ಈ ಜುಪಿಟರ್ 110 ಸ್ಕೂಟರ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನವೀನವಾಗಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ಯುಎಸ್‌ಬಿ ಚಾರ್ಜರ್, 2 ಲೀಟರ್ ಗ್ಲೋವ್ ಬಾಕ್ಸ್, 33 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸೋರೇಜ್ ಅನ್ನು ಹೊಂದಿದೆ.

ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್ ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 220 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗ (ರೇರ್) 130 ಎಂಎಂ ಡ್ರಮ್ ಬ್ರೇಕ್‌ನ್ನು ಪಡೆದಿದೆ. ಹಾಗೆಯೇ, ಮುಂದೆ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂದೆ ಗ್ಯಾಸ್ ಫೀಲ್ಡ್ ಡ್ಯಾಂಪರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. 12-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದ್ದು, ಟೈರ್‌ಗಳು ಕೂಡ ಉತ್ತಮವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Courtesy: RS Tvs Golaghat


Click it and Unblock the Notifications








