ನಿಮ್ಮ ಮನೆಯವರಿಗೆ ಸ್ಕೂಟರ್ ಕೊಡಿಸಬೇಕೇ? ಬೆಂಗಳೂರಿನಲ್ಲಿ ಆಂಪಿಯರ್ ನೆಕ್ಸಸ್ ವಿತರಣೆ ಪ್ರಾರಂಭ

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (GEMPL) ಉನ್ನತ ಕಾರ್ಯಕ್ಷಮತೆಯ (high performance) ಆಂಪಿಯರ್ ನೆಕ್ಸಸ್ ಎಂಬ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗ ಬಿಡುಗಡೆಗೊಳಿಸಿತು. ಇದೀಗ ಬಿಡುಗಡೆಯಾಗಿ ಒಂದು ತಿಂಗಳ ನಂತರ, ಗ್ರೀವ್ಸ್ ಕಾಟನ್ ಲಿಮಿಟೆಡ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಅಂಗವಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (GEMPL), ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭಿಸಿದೆ. ಇದು ಸಂಪೂರ್ಣ ಮೇಡ್ ಇನ್ ಇಂಡಿಯಾ ವಾಹನವಾಗಿದೆ. ಈ ಹೊಸ ಆಂಪಿಯರ್ ನೆಕ್ಸಸ್ (Ampere Nexus) ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.10 ಲಕ್ಷವಾಗಿದೆ.

ಈ ಹೊಸ ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್, ಟ್ವಿನ್ ಸಸ್ಪೆಂಷನ್ ಹೊಂದಿರುವ ಮೊದಲ ಹೈಬ್ರಿಡ್ ಸ್ವಿಂಗ್ ಆರ್ಮ್ ಜೊತೆಗೆ ಬರುತ್ತದೆ. ಏರ್-ಕೂಲ್ ಆರ್ಕಿಟೆಕ್ಚರ್‌, ಲೋಡ್-ಸ್ಟ್ರ್ಯಾಟಿಫೈಡ್ ವಿನ್ಯಾಸ, ಹೆಚ್ಚಿನ ಸಾಮರ್ಥ್ಯದ ಚಾಸಿಸ್(4ಪಟ್ಟು ಹೆಚ್ಚು), ನಟ್‌ಗಳು ಮತ್ತು ಬೋಲ್ಟ್‌ಗಳು ಗೋಚರಿಸಿದ ಮೊದಲ ಪ್ರೀಮಿಯಂ ವಿನ್ಯಾಸ, 7 ಇಂಚಿನ ಸ್ಮಾರ್ಟ್‌ಸೆನ್ಸ್ ತಂತ್ರಜ್ಞಾನದ TFT ಟಚ್‌ಸ್ಕ್ರೀನ್, 3 ಗಂಟೆ 22 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಹೊಂದಿದೆ.

Ampere Nexus

ಇದರೊಂದಿಗೆ ಉತ್ತಮ ಸೌಕರ್ಯ, ಶೈಲಿ, ಕಾರ್ಯಕ್ಷಮತೆ, ಸುರಕ್ಷತೆ, ಶೇ30 ಹೆಚ್ಚುವರಿ ಬ್ಯಾಟರಿ ಬಾಳಿಕೆ, ಸುರಕ್ಷಿತ LFP ಬ್ಯಾಟರಿ, ಪವರ್‌ಫುಲ್ ಮಿಡ್-ಮೌಂಟ್ ಡ್ರೈವ್‌ನೊಂದಿಗೆ ತನ್ನ 4 ಕಿಲೋವ್ಯಾಟ್ ಪೀಕ್ ಮೋಟಾರ್‌ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಝನ್ಸ್ಕರ್ ಆಕ್ವಾ, ಇಂಡಿಯನ್ ರೆಡ್, ಲೂನಾರ್ ವೈಟ್ ಮತ್ತು ಸ್ಟೀಲ್ ಗ್ರೇ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಈ ವೈವಿಧ್ಯಮಯ ಬಣ್ಣದ ಪ್ಯಾಲಿಟ್, ಸವಾರರ ಆದ್ಯತೆಗಳಿಗೆ ಸರಿಹೊಂದುವಂತೆ ಆಕರ್ಷಕವಾದ ಆಯ್ಕೆಗಳನ್ನು ನೀಡುತ್ತದೆ.

ಆಂಪಿಯರ್ ನೆಕ್ಸಸ್' ಟಾಪ್ ಪಾರ್ಫಾನೊಂದಿಗೆ ಕುಟುಂಬಕ್ಕೆ ಬೇಕಾಗುವ ವೈಶಿಷ್ಟ್ಯಗಳ ಅನುಭವವನ್ನು ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಡೈಮಂಡ್ ಕಟ್ ಹೆಡ್‌ಲ್ಯಾಂಪ್‌ಗಳು ಮತ್ತು ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್‌, ಆರ್ಕ್ಟಿಕ್ ಟರ್ನ್-ಪ್ರೇರಿತ ಟೈಲ್ ಲ್ಯಾಂಪ್‌ಗಳು, ದೊಡ್ಡ ಸೀಟ್, ಐದು ರೈಡಿಂಗ್ ಮೋಡ್‌ಗಳೊಂದಿಗೆ ಗಂಟೆಗೆ 93 ಕಿ.ಮೀ ಟಾಪ್ ಸ್ಪೀಡ್ ಮತ್ತು ಸಿಂಗಲ್ ಚಾರ್ಜ್‌ಗೆ ಸ್ಟ್ರಾಂಡರ್ಡ್ 136 ಕಿ.ಮೀ ರೇಂಜ್, ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು IP67 ರೇಟಿಂಗ್‌ ಅನ್ನು ಪಡೆದುಕೊಂಡಿದೆ.

Ampere Nexus

ಆಂಪಿಯರ್ ನೆಕ್ಸಸ್ ಇವಿ ಸ್ಕೂಟರ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ 10,000 ಕಿ.ಮೀ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿಗಳು ಸೇರಿದಂತೆ ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನಗಳಲ್ಲಿ ಸಲೀಸಾಗಿ ಓಡಿಸಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದಾಖಲೆಯ ಪ್ರಯಾಣವನ್ನು ಸಾಧಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ರೈಡ್‌ನಲ್ಲಿ 115 ನಗರಗಳು ಮತ್ತು ಪಟ್ಟಣಗಳಿಗೆ ಭೇಟಿ ನೀಡಿರುವುದರ ಜೊತೆಗೆ 1,860 ಕೆ.ಜಿ ತೂಕದ ಪಿಕಪ್ ಟ್ರಕ್ ಎಳೆಯುವ ಸಾಮರ್ಥ್ಯವಿರುವ ಮೊದಲ ಇಲೆಕ್ಟ್ರಿಕ್ ಸ್ಕೂಟರ್ ಆಗಿದೆ.

ಜೊತೆಗೆ ಇದು ಇಬ್ಬರು ಪ್ರಯಾಣಿಕರನ್ನು ಸೇರಿದಂತೆ 140 ಕೆ.ಜಿ ತೂಕ ಹೊತ್ತು 2 ಕಿ.ಮೀ ಕ್ರಮಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ಹೆಚ್ಚು ಆರಾಮ-ನೀಡುವ ಮಲ್ಟಿಪಲ್ ಸಿಟಿ ಮೋಡ್‌ಗಳು ಮತ್ತು ರಿವರ್ಸ್ ಮೋಡ್ ಜೊತೆಗೆ ಪವರ್ ಮೋಡ್‌ನಲ್ಲಿ ಪ್ರಭಾವಶಾಲಿ ವೇಗವನ್ನು ನೀಡುವ ಮೂಲಕ ದಕ್ಷತೆಯನ್ನು ಹೊಂದಿದೆ. ಜೊತೆಗೆ, ಪ್ರತಿ ಚಾರ್ಜ್‌ಗೆ 136 ಕಿ.ಮೀಗಳ ಪ್ರಮಾಣೀಕೃತ ಶ್ರೇಣಿಯೊಂದಿಗೆ, ಸವಾರರು ಆಗಾಗ್ಗೆ ರೀಚಾರ್ಜ್ ಮಾಡುವ ಬಗ್ಗೆ ಚಿಂತಿಸದೆ ಸುತ್ತಾಡಬಹುದು.

Ampere Nexus

ನಾವೀನ್ಯತೆ-ವಿಶ್ವಾಸಾರ್ಹತೆ ಎರಡೂ ಇರುವಂತೆ ರಚಿಸಲಾಗಿದೆ ಎಂದು ಗ್ರೀವ್ಸ್ ಎಲೆಕ್ಟ್ರಿಕ್ ತಿಳಿಸಿದೆ. ನೀವು ಆಂಪಿಯರ್ ನೆಕ್ಸಸ್ ಅನ್ನು ಆನ್‌ಲೈನ್‌ನಲ್ಲಿ ಎರಡು ರೂಪಾಂತರಗಳಲ್ಲಿ(ನೆಕ್ಸಸ್ ಎಕ್ಸ್ ಮತ್ತು ನೆಕ್ಸಸ್ ಎಸ್.ಟಿ) ಬುಕ್ ಮಾಡಬಹುದು. ರಾಷ್ಟ್ರವ್ಯಾಪಿ 400 ಡೀಲರ್‌ಶಿಪ್‌ಗಳು ಮತ್ತು ಟಚ್‌ಪಾಯಿಂಟ್‌ಗಳಲ್ಲಿ ಟೆಸ್ಟ್ ರೈಡ್‌ಗಳ ಅವಕಾಶವನ್ನು ಕಲ್ಪಿಸಲಾಗಿದೆ. ವಿತರಣೆಯು ಮೇ 2024 ರ ದ್ವಿತೀಯಾರ್ಧದಿಂದ ಭಾರತದಾದ್ಯಂತ ಲಭ್ಯವಿರುತ್ತದೆ ಎಂದು ಕಂಪನಿ ತಿಯುಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 6, 2024, 11:46 [IST]
English summary
New ampere nexus electric scooter deliveries begin in bengaluru details
Read more on ampere india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+