ಪೆಟ್ರೋಲ್ ಬೇಕಿಲ್ಲ.. ಆಫೀಸ್‌ಗೆ ಹೋಗುವವರಿಗೆ ಫರ್ಫೆಕ್ಟ್ ಚಾಯ್ಸ್.. 136 Km ರೇಂಜ್.. 1.20 ಲಕ್ಷ ರೂಪಾಯಿ!
ಆಂಪಿಯರ್ ನೆಕ್ಸಸ್ (Ampere Nexus) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಫೀಸ್‌ಗೆ ಹೋಗುವವರೂ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ನೆಕ್ಸಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ & ರೂಪಾಂತರಗಳು (Price & Variants):
ನೂತನ 'ಆಂಪಿಯರ್ ನೆಕ್ಸಸ್' ಕೈಗೆಟುಕುವ ಬೆಲೆಯಲ್ಲಿಯೂ ದೊರೆಯುತ್ತದೆ. ಕನಿಷ್ಠ ರೂ.1.20 ಲಕ್ಷ ಹಾಗೂ ಗರಿಷ್ಠ ರೂ.1.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ನೆಕ್ಸಸ್ ಇಎಕ್ಸ್ (Nexus EX) ಮತ್ತು ನೆಕ್ಸಸ್ ಎಸ್‌ಟಿ (Nexus ST) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ವಿನ್ಯಾಸ & ಬಣ್ಣಗಳು (Design & Colours):
ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ನೋಡುಗರ ಕಣ್ಣು ಕುಕ್ಕುವಂತಿದೆ. ಡೈಮಂಡ್-ಕಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ನ್ನು ಒಳಗೊಂಡಿದೆ. 12-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಲೂನಾರ್ ವೈಟ್, ಸ್ಟೀಲ್ ಗ್ರೇ, ಇಂಡಿಯನ್ ರೆಡ್ ಹಾಗೂ ಕಾರ್ಬನ್ ನೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.
ಸುತ್ತಳತೆ (Dimensions):
ಈ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,805 ಮಿ.ಮೀ ಉದ್ದ, 645 ಮಿ.ಮೀ ಅಗಲ ಮತ್ತು 1,140 ಮಿ.ಮೀ ಎತ್ತರವಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,319 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 130 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ಹೊಸ 'ಆಂಪಿಯರ್ ನೆಕ್ಸಸ್' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 136 ಕಿ.ಮೀ ವರೆಗೆ ರೇಂಜ್ (ಸಿಎಂವಿಆರ್) ನೀಡುತ್ತದೆ. ಈ ಸ್ಕೂಟರ್‌ನಲ್ಲಿರುವ ಮಿಡ್-ಮೌಂಟೆಡ್ ಪಿಎಂಎಸ್ ಮೋಟಾರ್, 4.0 ಕೆಡಬ್ಲ್ಯೂ ಪೀಕ್ ಪವರ್ ಹಾಗೂ 35 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ.
ಇದು 93 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 4 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಸ್ಟ್ಯಾಂಡರ್ಡ್ ಚಾರ್ಜರ್ ಬಳಕೆಯಲ್ಲಿ ಕೇವಲ 3.3 ಗಂಟೆಗಳಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗುತ್ತದೆ. ಸೀಟ್ ಎತ್ತರವು 765 ಮಿ.ಮೀ ಇದೆ.
ವೈಶಿಷ್ಟ್ಯಗಳು (Features):
ಈ ಎಲೆಕ್ಟ್ರಿಕ್ ಸ್ಕೂಟರ್ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ - ವೈ-ಫೈ ಕನೆಕ್ಟಿವಿಟಿ ಹಾಗೂ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಕೋ (Eco), ಸಿಟಿ (City) ಮತ್ತು ಪವರ್ (Power) ಎಂಬ 3 ಅತ್ಯಾಕರ್ಷಕವಾದ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ನೂತನ 'ಆಂಪಿಯರ್ ನೆಕ್ಸಸ್' ಇ-ಸ್ಕೂಟರ್ ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹೈಡ್ರಾಲಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಜೊತೆಗೆ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಟಿವಿಎಸ್ ಐಕ್ಯೂಬ್ (TVS iQube), ಎಥರ್ ರಿಜ್ಟಾ (Ather Rizta), ಬಜಾಜ್ ಚೇತಕ್ (Bajaj Chetak), ಓಲಾ ಎಸ್1 ಎಕ್ಸ್ (Ola S1 X) ಮತ್ತು ಹೀರೋ ವಿಡಾ ವಿ2 (Hero Vida V2) ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








