ಹಮಾರಾ ಬಜಾಜ್ ಚೇತಕ್‌ನ ಸ್ಪೆಷಲ್ ಎಡಿಷನ್ ಬಿಡುಗಡೆ: 90s ನೆನಪಿನಲ್ಲಿ ಜನ ಮುಗಿಬೀಳುವುದು ಪಕ್ಕಾ!

ಬಜಾಜ್ ಆಟೋ ಭಾರತದಲ್ಲಿ ಚೇತಕ್ 3201 ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.30 ಲಕ್ಷವಾಗಿದೆ. ಈ ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್‌ನ ಟಾಪ್-ಸ್ಪೆಕ್ ಪ್ರೀಮಿಯಂ ರೂಪಾಂತರವನ್ನು ಆಧರಿಸಿದೆ. ಈ ಹೊಸ ಚೇತಕ್ 3201 ಸ್ಪೆಷಲ್ ಎಡಿಷನ್ ಮಾದರಿಯು ಆಗಸ್ಟ್ 5 ರಿಂದ Amazon ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಹೊಸ ಮಾದರಿಗೆ ಪರಿಚಯಾತ್ಮಕ ಬೆಲೆಯ ಅವಧಿ ಮುಗಿದ ನಂತರ, ಬೆಲೆಯನ್ನು 1.40 ಲಕ್ಷ ರೂ.ಗೆ (ಎಕ್ಸ್ ಶೋ ರೂಂ) ಪರಿಷ್ಕರಿಸಲಾಗುತ್ತದೆ.

ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ (Bajaj Chetak 3201 Special Edition) ಮೊದಲೇ ಹೇಳಿದಂತೆ ಈ ಮಾದರಿಯ 'ಪ್ರೀಮಿಯಂ' ಆವೃತ್ತಿಯನ್ನು ಆಧರಿಸಿದೆ. ಆದರೆ ಈ ಹೊಸ ಮಾದರಿಯು ನೋಡಲು ಭಿನ್ನವಾಗಿರುತ್ತದೆ. ಚೇತಕ್ 3201 ಸ್ಪೆಷಲ್ ಎಡಿಷನ್ ಸೈಡ್ ಪ್ಯಾನೆಲ್‌ಗಳಲ್ಲಿ 'ಚೇತಕ್' ಡಿಕಾಲ್‌ಗಳನ್ನು ಪಡೆಯುತ್ತದೆ ಮತ್ತು ಬ್ರೂಕ್ಲಿನ್ ಬ್ಲ್ಯಾಕ್‌ನಲ್ಲಿ ಮಾತ್ರ ಲಭ್ಯವಿದೆ. ಇದು ಸ್ಕಫ್ ಪ್ಲೇಟ್‌ಗಳು ಮತ್ತು ಎರಡು-ಟೋನ್ ಕ್ವಿಲ್ಟೆಡ್ ಸೀಟ್ ಅನ್ನು ಸಹ ಪಡೆಯುತ್ತದೆ.

Bajaj Chetak 3201 Special Edition

ಚೇತಕ್ 3201 ಸ್ಪೆಷಲ್ ಎಡಿಷನ್ ಮಾದರಿಯ ಒಟ್ಟಾರೆ ವಿನ್ಯಾಸವು ಅದರ ಪ್ರೀಮಿಯಂ ಕೌಂಟರ್‌ಪಾರ್ಟ್‌ಗೆ ಹೋಲುತ್ತದೆ. ಪ್ರೀಮಿಯಂ ರೂಪಾಂತರದಂತೆಯೇ, ಸ್ಪೆಷಲ್ ಎಡಿಷನ್ ಮಾದರಿಯಲ್ಲಿಯೂ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್‌ಗಳು, ಕಾಲ್ ಅಲರ್ಟ್ ಗಳು ಮತ್ತು ಕಸ್ಟಮೈಸ್ ಮಾಡಬಹುದಾದ ಥೀಮ್‌ಗಳೊಂದಿಗೆ ಬಣ್ಣದ TFT ಪ್ರದರ್ಶನವನ್ನು ಹೊಂದಿದೆ.

ಇದರೊಂದಿಗೆ ಹಿಲ್-ಹೋಲ್ಡ್ ಕಂಟ್ರೋಲ್ ಮತ್ತು ಹೆಚ್ಚುವರಿ 'ಸ್ಪೋರ್ಟ್' ರೈಡ್ ಮೋಡ್ ಸಹ TecPac ಸಾಫ್ಟ್‌ವೇರ್ ಪ್ಯಾಕೇಜ್‌ನ ಭಾಗವಾಗಿದೆ. ಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ ಮಾದರಿಯು ಪ್ರೀಮಿಯಂ ರೂಪಾಂತರದಂತೆಯೇ 3.2 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಕುತೂಹಲಕಾರಿಯಾಗಿ, ARAI ಪ್ರಮಾಣೀಕರಣದ ಪ್ರಕಾರ ಸಾಮಾನ್ಯ ಚೇತಕ್ ಪ್ರೀಮಿಯಂ 127 ಕಿಮೀ ರೇಂಜ್ ಅನ್ನು ಹೊಂದಿದ್ದರೆ, ಈ ಹೊಸ ಸ್ಪೆಷಲ್ ಎಡಿಷನ್ 136 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

Bajaj Chetak 3201 Special Edition

ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು ಒಂದೇ ಆಗಿರುತ್ತದೆ, ಇದು ಗಂಟೆಗೆ 73 ಕಿ.ಮೀ ಆಗಿದೆ. ಪ್ರತಿಸ್ಪರ್ಧಿಗಳ ವಿಷಯದಲ್ಲಿ, ಎಥರ್ ರಿಜ್ಟಾ Z ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.34 ಲಕ್ಷವಾದರೆ, ಟಿವಿಎಸ್ ಐಕ್ಯೂಬ್ ಎಸ್ ಮಾದರಿಯ ಬೆಲೆಯು ರೂ.46 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಇನ್ನು ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯ ಜನರ ಜೊತೆ ಸೆಲಬ್ರಿಟಿಗಳನ್ನು ಈ ಸ್ಕೂಟರ್ ಆಕರ್ಷಿಸಿದೆ. ಬಾಲಿವುಡ್ ನಿರ್ದೇಶಕಿ ಮತ್ತು ನಿರ್ಮಾಪಕಿ ಕಿರಣ್ ರಾವ್ ಅವರು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದಾರೆ. ನಿರ್ದೇಶಕಿ ಕಿರಣ್ ರಾವ್ ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ. ಸಾಮಾನ್ಯ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಡಿಆರ್‌ಎಲ್ ಹೊಂದಿದೆ.

Bajaj Chetak 3201 Special Edition

ಇದರೊಂದಿಗೆ ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್, ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನವನ್ನು ಕೂಡ ಒಳಗೊಂಡಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 5, 2024, 16:54 [IST]
English summary
New bajaj chetak 3201 special edition launched price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+