ಹೊಸ ಬಜಾಜ್ ಚೇತಕ್ ಇವಿ ಬಿಡುಗಡೆ... 137 ಕಿ.ಮೀ ರೇಂಜ್, ರಿವರ್ಸ್ ಗೇರ್ ಕೂಡ ಇದೆ!

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ, ಕೇವಲ ಇಂಧನ ಚಾಲಿತ ವಾಹನಗಳು ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲೂ ಉತ್ತಮ ಬೆಳವಣಿಗೆ ಕಾಣುತ್ತಿದೆ. ಬಜಾಜ್ ಕಂಪನಿಯು ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ 'ಚೇತಕ್ ಇವಿ'ಯನ್ನು ಮಾತ್ರ ನೀಡುತ್ತಿದೆ. ಇದೀಗ ಇದಕ್ಕೆ ಹೊಸ ವೇರಿಯೆಂಟ್ ಅನ್ನು ಪರಿಚಯಿಸಿದೆ. ಬಜಾಜ್ ಆಟೋ ತನ್ನ ವೆಬ್‌ಸೈಟ್‌ನಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಪಟ್ಟಿ ಮಾಡಿದೆ. ಈ ಹೊಸ ವೇರಿಯೆಂಟ್ ಬೆಲೆ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೊಸ ವೇರಿಯೆಂಟ್ 'ಬಜಾಜ್ ಚೇತಕ್ ಬ್ಲೂ 3202' ಆಗಿದ್ದು, ರೂ. 2,000 ಟೋಕನ್‌ ಮೊತ್ತಕ್ಕೆ ಬುಕ್ಕಿಂಗ್‌ಗಳು ತೆರೆದಿವೆ. ಇದನ್ನು ಚೇತಕ್ 2901 ಮತ್ತು ಚೇತಕ್ ಅರ್ಬೇನ್ ವೇರಿಯೆಂಟ್‌ಗಳ ನಡುವೆ ಇರಿಸಲಾಗಿದೆ. ಹೊಸ ಬಜಾಜ್ ಚೇತಕ್ ಬ್ಲೂ 3202 ವೇರಿಯೆಂಟ್' ಅರ್ಬೇನ್ ವೇರಿಯೆಂಟ್‌ಗಿಂತ ರೂ. 8,000 ಅಗ್ಗವಾಗಿದೆ. ಆದರೂ 137 ಕಿ.ಮೀ ಹೆಚ್ಚಿನ ರೇಂಜ್ ನೀಡುತ್ತದೆ.

new-bajaj-chetak-blue-3202-variant-lanched

ಹೊಸ ಚೇತಕ್ ಇವಿ ಬ್ಲೂ ವೈಶಿಷ್ಟ್ಯಗಳು: ಹೊಸ ಚೇತಕ್ ಬ್ಲೂ 3202 ಇವಿ ಸ್ಕೂಟರ್, ಇಲ್ಯೂಮಿನೇಟೆಡ್ ಸ್ವಿಚ್ ಗೇರ್, ಸಾಫ್ಟ್ ಕ್ಲೋಸ್ ಸೀಟ್, ರಿವರ್ಸ್ ಫಂಕ್ಷನ್ ಮತ್ತು ಸ್ಮಾರ್ಟ್ ಕೀಯನ್ನು ಸಹ ಪಡೆದಿದೆ. ಸ್ಪೋರ್ಟ್ ಮತ್ತು ಕ್ರಾಲ್ ಮೋಡ್‌ಗಳ ಹೊರತಾಗಿ ಹೆಚ್ಚಿನ ರೇಂಜ್ ಪಡೆಯಲು ಇಕೊ ಮೋಡ್‌ನೊಂದಿಗೆ ಸಜ್ಜುಗೊಂಡಿದೆ.

ಹೊಸ ಚೇತಕ್ ಬ್ಲೂ ಬ್ಯಾಟರಿ ಮತ್ತು ರೇಂಜ್: ಈ ಸ್ಕೂಟರ್ ದೊಡ್ಡ 3.2 kWh ಬ್ಯಾಟರಿ ಪ್ಯಾಕ್ ಅನ್ನು ಪಡೆದಿದ್ದು, ಇದೇ ಬ್ಯಾಟರಿಯನ್ನು ಚೇತಕ್‌ನ ಪ್ರೀಮಿಯಂ ವೇರಿಯೆಂಟ್‌ನಲ್ಲಿಯೂ ನೀಡಲಾಗುತ್ತದೆ. ಈ ಬ್ಯಾಟರಿಯಿಂದ 137 ಕಿ.ಮೀ ವರೆಗೆ ರೇಂಜ್ ಪಡೆಯಬಹುದು. ಇತರ ವೇರಿಯೆಂಟ್‌ಗಳಂತೆ, ಬಜಾಜ್ ಇ-ಸ್ಕೂಟರ್‌ನಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ಅನ್‌ಲಾಕ್ ಮಾಡಲು ಹೆವಚ್ಚುವರಿ ವೆಚ್ಚದಲ್ಲಿ TecPac ಅನ್ನು ನೀಡಲಾಗುತ್ತದೆ.

new-bajaj-chetak-blue-3202-variant-lanched

ಇವಿಷ್ಟೇ ಅಲ್ಲದೇ ಹಾರ್ಸ್‌ಶೂ-ಆಕಾರದ LED DRL, ಕನೆಕ್ಟಿವಿಟಿ ವೈಶಿಷ್ಟ್ಯಗಳು, TFT ಇನ್‌ಸ್ಟ್ರೂಮೆಂಟ್ ಕನ್ಸೋಲ್, ಆಲ್-ಮೆಟಲ್ ಬಾಡಿ, USB ಚಾರ್ಜಿಂಗ್ ಪೋರ್ಟ್, LED ಹೆಡ್‌ಲ್ಯಾಂಪ್ ಅನ್ನು ನೀಡಲಾಗಿದೆ. ಇನ್ನು TecPac ಅನ್ನು ಹೆಚ್ಚುವರಿಯಾಗಿ ಖರೀದಿಸಿದರೆ ಮತ್ತಷ್ಟು ವೈಶಿಷ್ಟ್ಯಗಳನ್ನು ಪಡೆಯಬಹುದು ಎಂದು ಬಜಾಜ್ ಆಟೋ ತಿಳಿಸಿದೆ.

ಚೇತಕ್ ಬ್ಲೂ 3202 ಬೆಲೆ: ಹೊಸ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್ ರೂ. 1.15 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಿದೆ (ಎಕ್ಸ್ ಶೋ ರೂಂ). ಹಾಗೆಯೇ ಚೇತಕ್‌ನ ಪ್ರೀಮಿಯಂ ಟ್ರಿಮ್ ರೂ. 1.48 ಲಕ್ಷ ರೂ.(ಎಕ್ಸ್ ಶೋ ರೂಂ) ಇದೆ. ಹೊಸ ವೇರಿಯೆಂಟ್ ಬ್ರೂಕ್ಲಿನ್ ಬ್ಲ್ಯಾಕ್, ಸೈಬರ್ ವೈಟ್, ಇಂಡಿಗೋ ಮೆಟಾಲಿಕ್ ಮತ್ತು ಮ್ಯಾಟ್ ಕೋರ್ಸ್ ಗ್ರೇ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

new-bajaj-chetak-blue-3202-variant-lanched

ಹೊಸ ಬಜಾಜ್ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್, ಓಲಾ ಎಸ್1 ಏರ್, ಟಿವಿಎಸ್ ಐಕ್ಯೂಬ್, ಎಥರ್ ರಿಜ್ಟಾ ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಳಗೊಂಡಂತೆ ಇತರ ಇವಿಗಳಿಗೆ ಪೈಪೋಟಿ ನೀಡುತ್ತದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ.

ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 2, 2024, 13:13 [IST]
English summary
New bajaj chetak blue 3202 variant lanched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+