ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್‌ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
ಭಾರತದ ರಸ್ತೆಗಳಲ್ಲಿ ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು. ಆ ಕಾಲದಲ್ಲಿ ಯುವಕರಿಗೆ ನಿಮ್ಮ ಫೆವರೇಟ್ ಬೈಕ್ ಯಾವುದೆಂದು ಕೇಳಿದ ತಕ್ಷಣ ಸಿಗುವ ಉತ್ತರ ಅದುವೇ ಪಲ್ಸರ್ ಬೈಕ್ ಎಂದು. ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಕನಸಿನ ಬೈಕ್ ಆಗಿತ್ತು.
ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್‌ಗಳು ತನ್ನ ಜನಪ್ರಿಯತೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯನ್ನು ಕಂಡಿತು. ಆದರೆ ಹೊಸ ಬೈಕುಗಳ ಆಗಮನಗಳ ಬಳಿಕ ಅದರ ಜೊತೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ. ಈ ನಡುವೆ ಬಜಾಜ್ ಆಟೋ ಭಾರತದಲ್ಲಿ ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಹಲವಾರು ಹೊಸ ಬೈಕುಗಳು ಮತ್ತು ಸ್ಕೂಟರ್‌ಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ.

ಮಾರುಕಟ್ಟೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಬಜಾಜ್ ಗೆ ಒಂದು ಗೇಮ್ ಚೇಂಜರ್‌ನ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಇದೀಗ ಬಜಾಜ್ ಕಂಪನಿಯು ಅಂತಹ ಹೊಸ ಒಂದು ಮಾದರಿ ಪಲ್ಸರ್ 400 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಡೊಮಿನಾರ್‌ಗಿಂತಲೂ ಹೆಚ್ಚು ಬಜೆಟ್ ಸ್ನೇಹಿಯಾಗಿ ಸ್ಥಾನ ಪಡೆಯಬಹುದು. ಬಜಾಜ್ ಆಟೋ ಮುಂಬರುವ ಬಜಾಜ್ ಪಲ್ಸರ್ 400 (Bajaj Pulsar 400) ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಟೀಸರ್ ನಲ್ಲಿ ಈ ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗವಾಗಿದೆ. ಇದರ ಪ್ರಕಾರ, ಈ ವರ್ಷದ ಮೇ 3 ರಂದು ಬಿಡುಗಡೆಯಾಗಲಿದೆ. ಟೀಸರ್ ವೀಡಿಯೊವು ಹೊಸದಾಗಿ ಬಿಡುಗಡೆಯಾದ ಪಲ್ಸರ್ N250ಗೆ ಹೋಲುವ ಬೈಕ್‌ನ ಅಲಾಯ್ ವ್ಹೀಲ್ ಗಳನ್ನು ತೋರಿಸುತ್ತದೆ. ಪಲ್ಸರ್ 400 ಮಾದರಿಯು ಹಿಂಭಾಗದ ವಿಭಾಗದಲ್ಲಿ ಅಳವಡಿಸಲಾಗಿರುವ ಯುನಿಟ್ ಬದಲಿಗೆ ಅಂಡರ್ ಬೆಲ್ಲಿ ಎಕ್ಸಾಸ್ಟ್ನೊಂದಿಗೆ ಬರುವ ಸಾಧ್ಯತೆಯಿದೆ.
ಇದೇ ರೀತಿಯ ಸೆಟಪ್ ಬಜಾಜ್ ಪಲ್ಸರ್ NS160 ಮತ್ತು NS200 ನಲ್ಲಿ ಕಂಡುಬರುತ್ತದೆ. ಇನ್ನು ಪಲ್ಸರ್ 400 ಒಂದೇ ಬದಿಯ ಮೌಂಟ್ ರಿಯರ್ ಟೈರ್ ಹಗ್ಗರ್ ಜೊತೆಗೆ ದಪ್ಪವಾದ ಹಿಂಬದಿಯ ಟೈರ್ ಅನ್ನು ಸಹ ಪಡೆಯುತ್ತದೆ. ಈ ಹೊಸ ಹೊಸ ಬಜಾಜ್ ಪಲ್ಸರ್ 400 ಬಿಡುಗಡೆಯಾದ ಬಳಿಕ KTM 390 ಡ್ಯೂಕ್, ಟ್ರಯಂಫ್ ಸ್ಪೀಡ್ 400 ಮತ್ತು ಹಸ್ಕ್ವರ್ನಾ ಸ್ವಾರ್ಟ್‌ಪಿಲೆನ್ 401 ಬೈಕುಗಳಿಗೆ ಪೈಪೋಟಿ ನೀಡುತ್ತದೆ.
ಹೊಸ ಬಜಾಜ್ ಪಲ್ಸರ್ 400 ಬೈಕಿನಲ್ಲಿ 373.3cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8,800rpm ನಲ್ಲಿ 39.4bhp ಪವರ್ ಮತ್ತು 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಟೆಕ್ನೊಂದಿಗೆ ಜೋಡಿಸಲಾಗಿದೆ. ಕ್ವಿಕ್‌ಶಿಫ್ಟರ್ ಅನ್ನು ಟಾಪ್-ಎಂಡ್ ರೂಪಾಂತರದಲ್ಲಿ ಪ್ರತ್ಯೇಕವಾಗಿ ನೀಡಬಹುದು.
ಹೊಸ ಬಜಾಜ್ ಪಲ್ಸರ್ NS400 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳಿವುದಾದರೆ, ಇದರ ಮುಂಭಾಗದಲ್ಲಿ USD ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಒಳಗೊಂಡಿರುತ್ತದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬೈಕ್ ಸ್ಟ್ಯಾಂಡರ್ಡ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುತ್ತದೆ.
ಇನ್ನು ಪ್ರಮುಖವಾಗಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಎಲ್ಇಡಿ ಲೈಟಿಂಗ್ ಸಿಸ್ಟಮ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಹೊಸ ಬಜಾಜ್ ಪಲ್ಸರ್ 400 ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು 2 ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








