ಪಲ್ಸರ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಹೊಸ ಲುಕ್‌ ಪಡೆದು ಬಿಡುಗಡೆಯಾದ ಹಳೇ ಮಾಡಲ್

ಜನಪ್ರಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್, ಹೊಸ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ ಪಲ್ಸರ್ N160ನ ಹೊಸ ವೇರಿಯೆಂಟ್ ಅನ್ನು ಪರಿಚಯಿಸಿದೆ. ಜೊತೆಗೆ ಪಲ್ಸರ್ 125, 150 ಮತ್ತು 220F ಮಾಡಲ್‌ಗಳನ್ನು ಹೊಸ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ನವೀಕರಿಸಲಾಗಿದೆ. ಈ ಮಾದರಿಗಳು ಈಗ ವರ್ಧಿತ ಬ್ಲೂಟೂತ್-ಸಕ್ರಿಯ ಸಂಪರ್ಕವನ್ನು ಹೊಂದಿವೆ. ಪಲ್ಸರ್ N160 ಅದರ ಬ್ಲೂಟೂತ್-ಸಕ್ರಿಯಗೊಳಿಸಿದ ಇನ್‌ಸ್ಟ್ರೂಮೆಂಟ್ ಕನ್ಸೋಲ್‌ಗೆ ಸಂಯೋಜಿತವಾಗಿ ಟರ್ನ್‌ ಬೈ ಟರ್ನ್ ನ್ಯಾವಿಗೇಷನ್ ಜೊತೆಗೆ ಬರಲಿದ್ದು, ಮೋಟಾರ್‌ಸೈಕಲ್ ಈಗ ಸಂಪೂರ್ಣ ಕನೆಕ್ಟಿವಿಟಿ ಸೂಟ್ ಹೊಂದಿದೆ.

ಹೊಸ ಪಲ್ಸರ್ N160 ಸ್ಟೈಲಿಶ್, ಸ್ಪೋರ್ಟಿ ಬೈಕ್ ಹೊಸ ಡಿಸೈನ್‌ನೊಂದಿಗೆ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡುತ್ತದೆ. ನಿಖರವಾದ ನಿರ್ವಹಣೆ ಮತ್ತು ಸಾಟಿಯಿಲ್ಲದ ಸವಾರಿ ಅನುಭವಕ್ಕಾಗಿ, ಹೊಸ ಪಲ್ಸರ್ N160 ಶಾಂಪೇನ್ ಗೋಲ್ಡ್ 33mm USD ಫೋರ್ಕ್‌ಗಳನ್ನು ಹೊಂದಿದೆ ಎಂದು ಬಜಾಜ್ ಆಟೋ ತಿಳಿಸಿದೆ.

new-bajaj-pulsar-n160-introduced-and-graphics-for-pulsar-125-150-220f

ನಿಖರವಾದ ಸವಾರಿ ಮತ್ತು ಒಟ್ಟಾರೆ ನಿಯಂತ್ರಣಕ್ಕಾಗಿ ರೈನ್, ರೋಡ್ ಮತ್ತು ಆಫ್ - ರೋಡ್ ರೈಡ್ ಮೋಡ್‌ಗಳ ಸೇರ್ಪಡೆಯನ್ನು ಹೊಂದಿದೆ. ವಿವಿಧ ರೀತಿಯ ರಸ್ತೆ ಪರಿಸ್ಥಿತಿಗಳಲ್ಲಿ ಸವಾರನಿಗೆ ಗರಿಷ್ಠ ನಿಯಂತ್ರಣವನ್ನು ನೀಡಲು ಪ್ರತಿ ರೈಡ್ ಮೋಡ್‌ನಲ್ಲಿ ಎಬಿಎಸ್ ಮಟ್ಟವನ್ನು ಹೊಂದುವಂತೆ ಮಾಡಲಾಗಿದೆ.

ರೋಡ್ ಮೋಡ್ ಅನ್ನು ಪ್ರಮಾಣಿತವಾಗಿ ಹೊಂದಿಸಲಾಗಿದ್ದು, ಇದು ನಗರದಲ್ಲಿ ಅಥವಾ ಹೆದ್ದಾರಿಯಲ್ಲಿ ನಿಯಮಿತ ಸವಾರಿಗೆ ಸೂಕ್ತವಾಗಿರುತ್ತದೆ. ತೇವಾಂಶದ ರಸ್ತೆಗಳಿಗೆ ರೈನ್ ಮೋಡ್ ಸೂಕ್ತವಾಗಿದ್ದು, ಜಾರು ಮೇಲ್ಮೈಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಸ್ಥಿರವಾದ ಬ್ರೇಕಿಂಗ್ ಅನ್ನು ಖಾತ್ರಿಗೊಳಿಸುತ್ತದೆ. ಆಫ್ ರೋಡ್ ಮೋಡ್ ಭೂಪ್ರದೇಶ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದು, ಒಟ್ಟಾರೆ ನಿರ್ವಹಣೆ ಅನುಭವಕ್ಕೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ.

new-bajaj-pulsar-n160-introduced-and-graphics-for-pulsar-125-150-220f

ಬಜಾಜ್ ಈಗ ಹೊಸ ಪಲ್ಸರ್ N160 ರೂಪಾಂತರವನ್ನು ರೂ. 1,39,693 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು 164.82cc ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 11.7 kW(16PS @8750rpm ವರೆಗೆ ಪವರ್ ನೀಡಲು ಟ್ಯೂನ್ ಮಾಡಲಾಗಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ನೀಡಲಾಗಿದೆ.

2024ರ ಪಲ್ಸರ್ 125, 150 ಮತ್ತು 220F ಮಾಡಲ್‌ಗಳ ಅಪ್‌ಡೇಟ್: ಪಲ್ಸರ್ 125ರ ಕಾರ್ಬನ್ ಫೈಬರ್ ಸಿಂಗಲ್ ಮತ್ತು ಸ್ಪ್ಲಿಟ್ ಸೀಟ್ ರೂಪಾಂತರಗಳು ಈಗ ಸಂಪೂರ್ಣ ಡಿಜಿಟಲ್ ಬ್ಲೂಟೂತ್ ಕನ್ಸೋಲ್, ಯುಎಸ್‌ಬಿ ಚಾರ್ಜರ್ ಮತ್ತು ಹೊಸ ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ. ಇದೇ ರೀತಿಯ ರೂಪಾಂತರದ ಆಯ್ಕೆಯು ಪಲ್ಸರ್ 150 ನಲ್ಲಿ ಲಭ್ಯವಿದೆ. ವೈಶಿಷ್ಟ್ಯಗಳು ಮತ್ತು ರಿಫ್ರೆಶ್ ಮಾಡಿದ ಸ್ಟೈಲಿಂಗ್ 220F ಗೆ ಪ್ರಮಾಣಿತವಾಗಿದೆ.

new-bajaj-pulsar-n160-introduced-and-graphics-for-pulsar-125-150-220f

ಹೊಸ ಲೈನ್‌ಅಪ್ ಬೆಲೆಗಳು: ಹೊಸ ನವೀಕೃತ ಪಲ್ಸರ್ 125 ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಬೆಲೆಯು 92,883 ರೂ., ಹೊಸ ನವೀಕೃತ ಪಲ್ಸರ್ 150 ಸಿಂಗಲ್ ಡಿಸ್ಕ್ ಬೆಲೆಯು 1,13,696 ರೂ., ಹೊಸ ಪಲ್ಸರ್ 220 ಬೆಲೆಯು 1,41,024 ರೂ. ಇದೆ. ಇವೆಲ್ಲವು ದೆಹಲಿ ಎಕ್ಸ್‌ ಶೂರೂಂ ಬೆಲೆಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 15, 2024, 13:51 [IST]
English summary
New bajaj pulsar n160 introduced and graphics for pulsar 125 150 220f
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+