ಯುವಕರಿಗೆ ಸಿಹಿಸುದ್ದಿ: ಮಾಸ್ ಲುಕ್‌ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ ಬೈಕ್
ಭಾರತದಲ್ಲಿ ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು. ಆ ಕಾಲದಲ್ಲಿ ಯುವಕರಿಗೆ ನಿಮ್ಮ ಫೆವರೇಟ್ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಉತ್ತರ ಅದುವೇ ಪಲ್ಸರ್ ಬೈಕ್ ಎಂದು. ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಕನಸಿನ ಬೈಕ್ ಆಗಿತ್ತು.
ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್‌ಗಳು ತನ್ನ ಜನಪ್ರಿಯತೆಯಿಂದ ಗ್ರಾಹಕರನ್ನು ಸೆಳೆಯುತ್ತಿದೆ. ಆದರೆ ಹೊಸ ಬೈಕುಗಳ ಆಗಮನಗಳ ಬಳಿಕ ಅದರ ಜೊತೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ. ಈ ನಡುವೆ ಬಜಾಜ್ ಆಟೋ ಭಾರತದಲ್ಲಿ ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಹಲವಾರು ಹೊಸ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ.

ಮಾರುಕಟ್ಟೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಬಜಾಜ್ ಗೆ ಒಂದು ಗೇಮ್ ಚೇಂಜರ್‌ನ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಪ್ರೀಮಿಯಂ ಬೈಕ್ ಬ್ರಾಂಡ್‌ಗಳು ಎಂದು ಕರೆಸಿಕೊಂಡಿದ್ದ ಜಾರ್ಲೆ ಮತ್ತು ಟ್ರಯಂಫ್ 400cc ಸೆಗ್ಮೆಂಟ್‌ನಲ್ಲಿ ತಮ್ಮ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ಈಗಾಗಲೇ ಬಜಾಜ್ ಮಾರುಕಟ್ಟೆಯಲ್ಲಿ 400 ಸಿಸಿ ಸೆಗ್ಮೆಂಟ್‌ನಲ್ಲಿ ಡಾಮಿನಾರ್ 400 ಇದ್ದರೂ ಸಹ, ಆ ಸಾಲಿಗೆ ಬಜಾಜ್ ಇನ್ನೊಂದು ವಾಹನವನ್ನು ಸೇರಿಸುವ ಸಮಯ ಬಂದಿದೆ.
ಅದಕ್ಕಾಗಿಯೇ ಬಜಾಜ್ ಇದೀಗ ಈ ಸೆಗ್ಮೆಂಟ್‌ಗೆ ತನ್ನ ಹೊಸ ವಾಹನವೊಂದುನ್ನು ಸೇರಿಸಲಿದೆ, ತನ್ನ ಔದ್ಯೋಗಿಕ ಸಮಾಜಿಕ ಜಾಲತಾಣಗಳಲ್ಲಿ ಇದರ ಟೀಸರ್ ಒಂದನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಹೌದು, ಇದು ಬಜಾಜ್ ಮುಂಬರಲಿರುವ ತನ್ನ ಹೊಸ ಬಜಾಜ್ ಪಲ್ಸರ್ NS400ನ ಟೀಸರ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈಗಾಗಲೇ ಬಜಾಜ್‌ನ ಎನ್‌ಎಸ್ ಸರಣಿಯ ಬೈಕ್‌ಗಳು ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಯುವಕರ ನೆಚ್ಚಿನ ಬೈಕ್ ಆಗಿ ಹೊರ ಹೊಮ್ಮಿರುವ ಈ ಎನ್‌ಎಸ್ ಸರಣಿಯ ಬೈಕ್‌ಗಳು ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. ಸದ್ಯಕ್ಕೆ ಭಾರತದಲ್ಲಿ ಬಜಾಜ್ ಎನ್‌ಸ್ ಸರಣಿ 125cc, 160cc ಮತ್ತು 200cc ಸೆಗ್ಮೆಂಟ್‌ನಲ್ಲಿ ಲಭ್ಯವಿದ್ದು, ತಮಗೆ ಬೇಕಾದ ಸೆಗ್ಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಈಗಷ್ಟೇ ಟೀಸರ್ ಬಿಟ್ಟಿರುವ 400cc ಯ ಬಜಾಜ್ ಪಲ್ಸರ್ ಎನ್‌ಎಸ್400 (Bajaj Pulsar NS400) ಈ ಸರಣಿಗೆ ಹೊಸ ಸೇರ್ಪಡೆ ಆಗಲಿದೆ.
ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಕಳೆದ ಬಾರಿಯ ಪಲ್ಸರ್ ಎನ್‌ಎಸ್ 200 ಗಿಂತಲೂ ಹೆಚ್ಚಿನ ಸ್ಪೋರ್ಟಿ ಡಿಸೈನ್ ಮತ್ತು ಪರ್ಫಾಮೆನ್ಸ್ ಅನ್ನು ಈ ಬೈಕ್‌ನಿಂದ ನಿರೀಕ್ಷಿಸಲಾಗುತ್ತಿದೆ. 2023ರ ಬಜಾಜ್ ಪಲ್ಸರ್ NS160 ಬೈಕಿನ ಎಂಜಿನ್ 17 bhp ಮತ್ತು 14.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು NS200 ಬೈಕ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಬೈಕ್‌ಗಳ ಎಂಜಿನ್ ಔಟ್‌ಪುಟ್‌ಗಳು ಬದಲಾಗದೆ ಉಳಿದಿವೆ. 20 ವರ್ಷಗಳ ಹಿಂದೆ ಮೊದಲ ಬಜಾಜ್ ಪಲ್ಸರ್ ಆಗಮನದ ನಂತರ, ಹೆಚ್ಚಿನ ಭಾರತೀಯರಿಗೆ 'ಸ್ಪೋರ್ಟಿ' ದೈನಂದಿನ ಬೈಕಿನ ಕುರಿತು ಯೋಚಿಸಿದಾಗ, ಪಲ್ಸರ್ ಬೈಕ್ ಹೆಚ್ಚು ಮನಸ್ಸಿಗೆ ಬರುತ್ತದೆ.
ಆ ಎರಡು ದಶಕಗಳಲ್ಲಿ, ಪಲ್ಸರ್ ಲೈನ್‌ಅಪ್ ಅನ್ನು ಕೆಲವು ಬಾರಿ ಪುನರುಜ್ಜೀವನಗೊಳಿಸಲಾಗಿದೆ. ಪಲ್ಸರ್‌ನೊಂದಿಗಿನ ಬಜಾಜ್‌ನ ಪ್ರಸ್ತುತ ಮಾರ್ಗವು ಹೊಸ 250cc ಫ್ಲ್ಯಾಗ್‌ಶಿಪ್‌ಗಳನ್ನು ಮತ್ತು ಕಡಿಮೆ ಸಾಮರ್ಥ್ಯದ ವಿಭಾಗಗಳಲ್ಲಿ ಹೊಸ ಬೈಕುಗಳನ್ನು ಹೊರತಂದಿದೆ. ಈ ಹೊಸ ಬಜಾಜ್ ಪಲ್ಸರ್ NS160 & NS200 ಬೈಕ್‌ಗಳ ಸಸ್ಪೆಕ್ಷನ್ ವಿಭಾಗದಲ್ಲಿ ಹೊಚ್ಚ ಹೊಸ ಅಪ್ ಸೈಡ್-ಡೌನ್ ಫೋರ್ಕ್ ಸೆಟಪ್ ಅನ್ನು ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








