ನಿಮ್ಮ ಹೆಂಡತಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ಕೊಡಬಹುದು.. ನಿನ್ನೆಯಷ್ಟೇ ಬಿಡುಗಡೆ, ವಿಶೇಷತೆಗಳೇನು?

ದೇಶದಲ್ಲಿ ಬೈಕ್‌ಗಳಂತೆ ಸ್ಕೂಟರ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಹಲವರ ಮನೆಯಲ್ಲಿ ದಿನನಿತ್ಯದ ಬಳಕೆಗೆ ಸ್ಕೂಟರ್‌ವೊಂದು ಇದ್ದೇ ಇರುತ್ತದೆ. ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಸ್ಕೂಟರ್‌ಗಳು 'ಗೇರ್‌ಲೆಸ್' ಆಗಿರುವುದರಿಂದ ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಪ್ರತಿಯೊಬ್ಬರಿಗೂ ತುಂಬಾ ಅಚ್ಚುಮೆಚ್ಚಾಗಿವೆ. ನೀವು ಕೂಡ ಅಗ್ಗದ ದರದಲ್ಲಿ ಹೊಸ ಸ್ಕೂಟರ್ ಖರೀದಿಸಲು ಯೋಚಿಸಿದ್ದೀರಾ.. ಹಾಗಾದರೆ ಮಂಗಳವಾರ ಬಿಡುಗಡೆಯಾದ ಬಿಗಾಸ್ ಆರ್‌ಯುವಿ350 (BGauss RUV350) ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆಯಾಗಬಲ್ಲದು. ಇಲ್ಲಿ ನೂತನ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಬೆಲೆ ಹಾಗೂ ರೂಪಾಂತರಗಳು: ಹೊಚ್ಚ ಹೊಸ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್, ರೂ.1,09,999 ದಿಂದ ರೂ.1,34,999 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಆರ್‌ಯುವಿ350ಐ ಇಎಕ್ಸ್ (RUV 350i EX), ಆರ್‌ಯುವಿ350 ಇಎಕ್ಸ್ (RUV 350 EX) ಹಾಗೂ ಆರ್‌ಯುವಿ350 ಮ್ಯಾಕ್ಸ್ (RUV 350 Max) ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

new BGauss RUV350 electric scooter top 5 things

ಬ್ಯಾಟರಿ & ಕಾರ್ಯಕ್ಷಮತೆ: ನೂತನ ಇ-ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 3.5 ಕೆಡಬ್ಲ್ಯೂ (4.6 ಬಿಹೆಚ್‌ಪಿ) ಗರಿಷ್ಠ ಶಕ್ತಿ (Power) ಹಾಗೂ 165 ಎನ್ಎಂ ಪೀಕ್ ಟಾರ್ಕ್ (Peak Torque) ಉತ್ಪಾದಿಸುತ್ತದೆ. ಎಲ್ಲ ಮೂರು ಮಾದರಿ (Models)ಗಳು 75 ಕೆಎಂಪಿಹೆಚ್ ಗರಿಷ್ಠ ವೇಗ (Top Speed) ಹೊಂದಿವೆ.

ಕಡಿಮೆ ಶ್ರೇಣಿ ರೂಪಾಂತರ (Lower variants)ಗಳು 2.3 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 90 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿವೆ. ಗರಿಷ್ಠ ಶ್ರೇಣಿ ರೂಪಾಂತರ (Top-Spec Variant)ವಾದ 'ಮ್ಯಾಕ್ಸ್' 3 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 120 ಕಿಲೋಮೀಟರ್ ಓಡುತ್ತದೆ. ಬ್ಯಾಟರಿ ಪ್ಯಾಕ್ ಸುದೀರ್ಘವಾಗಿ ಬಾಳಿಕೆ ಬರಲು ಚೀನಾದ ಎಲ್‌ಎಎಫ್‌ಪಿ ಸೆಲ್ ಉಪಯೋಗಿಸಲಾಗಿದೆ.

new BGauss RUV350 electric scooter top 5 things

ವಿನ್ಯಾಸ: ಬಿಗಾಸ್ ಆರ್‌ಯುವಿ350 ಅತ್ಯಾಧುನಿಕ ವಿನ್ಯಾಸ (Design)ವನ್ನು ಹೊಂದಿದೆ. ಬಹುತೇಕ 'ಡಿ 15 ಪ್ರೊ' ಇ-ಸ್ಕೂಟರ್‌ಗೆ ಹೋಲಿಕೆಯಾಗುತ್ತದೆ. ಮುಂಭಾಗದ (Front) ಹ್ಯಾಂಡಲ್‌ಬಾರ್‌ನಲ್ಲಿ ಸ್ಕ್ವೇರ್ ಹೆಡ್‌ಲೈಟ್‌ನ್ನು ಪಡೆದಿದೆ. ವಿಶಾಲವಾದ ಫ್ಲೋರ್‌ಬೋರ್ಡ್‌ನ್ನು ಹೊಂದಿದ್ದು, ಆಸನವು (Seat) ಸಾಕಷ್ಟು ವೃದ್ದುವಾಗಿದ್ದು, ಸಿಂಗಲ್-ಪೀಸ್ ಗ್ರಾಬ್ ಹ್ಯಾಂಡಲ್‌ಗಳಿವೆ. ಹಿಂಭಾಗ (Rear)ದಲ್ಲಿರುವ ಟೈಲ್‌ಲೈಟ್ ಸಹ ಅತ್ಯುತ್ತಮವಾಗಿದೆ.

ವೈಶಿಷ್ಟ್ಯಗಳು: ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರ್‌ಯುವಿ350ಐ ಇಎಕ್ಸ್ ಮಾದರಿಯಲ್ಲಿ ಸೆಗ್ಮೆಂಟ್ ಡಿಸ್ಪ್ಲೇ ಇದ್ದು, ಉಳಿದ ಆರ್‌ಯುವಿ350 ಇಎಕ್ಸ್ ಮತ್ತು ಆರ್‌ಯುವಿ350 ಮ್ಯಾಕ್ಸ್ ರೂಪಾಂತರಗಳು 5-ಇಂಚಿನ ಟಿಎಎಫ್‌ಟಿ ಡಿಸ್ಪ್ಲೇಯನ್ನು ಹೊಂದಿವೆ. ಇದರಲ್ಲಿ ಕಾಲ್ ನೋಟಿಫಿಕೇಶನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೈಡಿಂಗ್ ಹಾಗೂ ಚಾರ್ಜಿಂಗ್ ಅಂಕಿಅಂಶಗಳನ್ನು ನೋಡಬಹುದು. ಸೀಟ್ ಕೆಳಭಾಗದಲ್ಲಿ ಬೂಟ್ ಸ್ಪೇಸ್ ಒಳಗೊಂಡಿದ್ದು, ಚಾರ್ಜಿಂಗ್ ಪೋರ್ಟ್ ಮತ್ತು ಪವರ್‌ಟ್ರೇನ್ ಆನ್/ಆಫ್ ಸ್ವಿಚ್ ಕೂಡ ಒಳಗೊಂಡಿದೆ.

ಸಸ್ಪೆನ್ಷನ್ ಸೆಟಪ್, ಬ್ರೇಕಿಂಗ್ ಸಿಸ್ಟಮ್: ನೂತನ ಎಲೆಕ್ಟ್ರಿಕ್ ಸ್ಕೂಟರ್‌ ಮುಂಭಾಗ (Front) ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗ (Rear) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. 16-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದ್ದು, ಮುಂದೆ 80/80 ಹಾಗೂ ಹಿಂದೆ 90/80 ಅಳತೆಯ ಟೈರ್‌ಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಹ್ಯಾಂಡಲ್‌ನ ಎರಡು ತುದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 26, 2024, 12:23 [IST]
English summary
New bgauss ruv350 electric scooter top 5 things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+