ದಿನಬಳಕೆಗೆ ಬೆಸ್ಟ್ ಬೈಕ್‌ಗಳಿವು: ರೂ.70 ಸಾವಿರಕ್ಕೆ ಸಿಗುತ್ತವೆ.. 70 ಕಿಲೋಮೀಟರ್ ಮೈಲೇಜ್!
ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಹಲವರಿಗೆ ಕೆಲಸಕ್ಕೆ ತೆರಳಲು ದ್ವಿಚಕ್ರ ವಾಹನಗಳೇ ಆಧಾರವಾಗಿರುತ್ತವೆ. ಇಲ್ಲಿ ದಿನನಿತ್ಯದ ಬಳಕೆಗೆ ಸೂಕ್ತವಾಗಿರುವುದರೊಂದಿಗೆ 70 ಸಾವಿರ ರೂಪಾಯಿಯಲ್ಲಿ ಸಿಗುವ ಬಜಾಜ್ ಪ್ಲಾಟಿನಾ 100 ಹಾಗೂ ಬಜಾಜ್ ಪ್ಲಾಟಿನಾ 110 ಬೈಕ್‌ಗಳ ಕುರಿತು ತಿಳಿಸಿಕೊಟ್ಟಿದ್ದೇವೆ.
ಮೊದಲಿಗೆ ಬಜಾಜ್ ಪ್ಲಾಟಿನಾ 100 (Bajaj Platina 100) ಮೋಟಾರ್‌ಸೈಕಲ್ ಬಗ್ಗೆ ಮಾತನಾಡೋಣ. ಇದು ರೂ.68,288 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ 102 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 7.9 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.3 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಈ ಬಜಾಜ್ ಪ್ಲಾಟಿನಾ 100 ಬೈಕ್ 70 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, ಗಂಟೆಗೆ 90 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ. ಬ್ಲ್ಯಾಕ್ & ರೆಡ್, ಬ್ಲ್ಯಾಕ್ & ಸಿಲ್ವರ್, ಬ್ಲ್ಯಾಕ್ & ಗೋಲ್ಡ್, ಬ್ಲ್ಯಾಕ್ & ಬ್ಲೂ ಬಣ್ಣಗಳೊಂದಿಗೆ ದೊರೆಯುತ್ತದೆ. 117 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ 100 ಹ್ಯಾಲೊಜೆನ್ ಹೆಡ್‌ಲೈಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ (LED DRLs) ಸಿಂಗಲ್ ಪೀಸ್ ಸೀಟ್ಸ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ರೌಂಡ್ ಕ್ಲಿಯರೆನ್ಸ್ 200 ಎಂಎಂ ಇದ್ದು, ಮುಂಭಾಗ (ಫ್ರಂಟ್) 130 ಎಂಎಂ, ಹಿಂಭಾಗ (ರೇರ್) 110 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಬಜಾಜ್ ಪ್ಲಾಟಿನಾ 110 (Bajaj Platina 110) ಬೈಕ್ ರೂ.70,451 ದಿಂದ ರೂ.80,012 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದರ 115.45 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ 8.6 ಪಿಎಸ್ ಪವರ್ ಮತ್ತು 9.81 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದ್ದು, 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ.
ಈ ಬಜಾಜ್ ಪ್ಲಾಟಿನಾ 110 ಮೋಟಾರ್‌ಸೈಕಲ್ ಕೂಡ 70 ಕೆಎಂಪಿಎಲ್ ಮೈಲೇಜ್ ಕೊಡಲಿದ್ದು, ಹ್ಯಾಂಡ್ ಗಾರ್ಡ್, ಟ್ಯೂಬ್‌ಲೆಸ್ ಟೈರ್, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 123 ಕೆಜಿ ತೂಕವಿರುವ ಈ ಬೈಕ್, 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ 110 ರೂಪಾಂತರಗಳಿಗೆ ಅನುಗುಣವಾಗಿ ಎಬೊನಿ ಬ್ಲ್ಯಾಕ್ ಬ್ಲೂ, ಎಬೊನಿ ಬ್ಲ್ಯಾಕ್ ರೆಡ್ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದ್ದು, ಡ್ರಮ್ ಅಥವಾ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಈ ಬೈಕ್‌ಗೆ ಹೀರೋ ಸ್ಪ್ಲೆಂಡರ್, ಹೀರೋ ಹೆಚ್‌ಎಫ್ ಡಿಲಕ್ಸ್ ಮತ್ತು ಹೋಂಡಾ ಶೈನ್ 100 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








