ದುಬಾರಿ ಕಾರಿನ ಬೆಲೆಯಲ್ಲಿ ಹೊಸ ಬಿಎಂಡಬ್ಲ್ಯು ಬೈಕ್‌ಗಳು ಬಿಡುಗಡೆ: ಬೆಲೆ ಎಷ್ಟು?
ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ (BMW Motorrad India) ತನ್ನ ಬಿಎಂಡಬ್ಲ್ಯು R12 ಮತ್ತು R12 ನೈಟ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಬಿಎಂಡಬ್ಲ್ಯು R12 ಬೈಕಿನ ಬೆಲೆಯು ರೂ.19.90 ಲಕ್ಷವಾದರೆ, ಬಿಎಂಡಬ್ಲ್ಯು R12 ನೈಟ್ ಬೈಕಿನ ಬೆಲೆಯು ರೂ.20.90 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. 2023 ರಲ್ಲಿ ಅನಾವರಣಗೊಂಡ, R12 ಒಂದು ಕ್ರೂಸರ್ ಆಗಿದೆ, ಆದರೆ ನೈಟ್ ಒಂದು ರೋಡ್‌ಸ್ಟರ್ ಆಗಿದೆ, ಆದರೆ ಎರಡೂ ಮೋಟಾರ್‌ಸೈಕಲ್‌ಗಳು ಒಂದೇ ಬಾಕ್ಸರ್ ಎಂಜಿನ್ ಅನ್ನು ಹಂಚಿಕೊಳ್ಳುತ್ತವೆ.
ಬಿಎಂಡಬ್ಲ್ಯು R12 ಮತ್ತು R12 9T ಬೈಕ್‌ಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್ ಆಗಿ ಭಾರತಕ್ಕೆ ತರಲಾಗುತ್ತದೆ ಮತ್ತು ಈ ಬೈಕ್‌ಗಳ ವಿತರಣೆಯು 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿವೆ. ಈ ಹೊಸ ಬಿಎಂಡಬ್ಲ್ಯು R12 ಮತ್ತು R12 ನೈಟ್ ಬೈಕ್‌ಗಳಲ್ಲಿ 1,170cc, ಟ್ವಿನ್-ಸಿಲಿಂಡರ್ ಬಾಕ್ಸರ್ ಎಂಜಿನ್ ಅನ್ನು ನೀಡಿದೆ.

1,170cc ಎಂಜಿನ್ R12 ನೈಟ್ ಬೈಕಿನಲ್ಲಿ 108 bhp ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಬಿಎಂಡಬ್ಲ್ಯು R12 ಬೈಕಿನಲ್ಲಿ 94 bhp ಮತ್ತು 110 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಒಂದೇ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಈ ಬೈಕ್‌ಗಳ ಹಿಂದಿನ ವ್ಹೀಲ್ ಗಳೊಂದಿಗೆ ಡ್ರೈವ್‌ಶಾಫ್ಟ್ ಚಾಲಿತವಾಗಿದೆ.
ಈ ಬಿಎಂಡಬ್ಲ್ಯು R12 ನೈಟ್ ಬೈಕ್ ರೈನ್, ರೋಡ್ ಮತ್ತು ಡೈನಾಮಿಕ್ ಎಂಬ ಡ್ರೈವ್ ಮೋಡ್‌ಗಳನ್ನು ಹೊಂದಿವೆ. ಇನ್ನು ಬಿಎಂಡಬ್ಲ್ಯು R12 ಬೈಕ್ ರೋಲ್ ಮತ್ತು ರಾಕ್ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಟ್ಯೂಬ್ಯುಲರ್ ಬ್ರಿಡ್ಜ್ ಸ್ಪೇಸ್‌ಫ್ರೇಮ್ ಅನ್ನು ಸಹ ಎರಡು ಮೋಟಾರ್‌ಸೈಕಲ್‌ಗಳ ನಡುವೆ ಹಂಚಿಕೊಳ್ಳಲಾಗಿದೆ.

ಬಿಎಂಡಬ್ಲ್ಯು R12 ನೈಟ್ ಬ್ಲಾಕ್‌ಸ್ಟಾರ್ಮ್, 719 ಅಲ್ಯೂಮಿನಿಯಂ ನೈಟ್ ಬ್ಲ್ಯಾಕ್ ಮತ್ತು ಸ್ಯಾನ್ ರೆಮೊ ಗ್ರೀನ್ ಪೇಂಟ್ ಸ್ಕೀಮ್‌ನಲ್ಲಿ ಲಭ್ಯವಿದ್ದರೆ, R12 ಬ್ಲ್ಯಾಕ್‌ಸ್ಟಾರ್ಮ್, 719 ಆವುಸ್ ಸಿಲ್ವರ್ ಮತ್ತು ಅವೆಂಚುರಿನ್ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. R12 ಫ್ಲ್ಯಾಗ್‌ಶಿಪ್ R18 ನಿಂದ ಸ್ಫೂರ್ತಿ ಪಡೆಯುತ್ತದೆ ಮತ್ತು ಸಿಂಗಲ್ ಸೀಟ್ ನೊಂದಿಗೆ 19-ಇಂಚಿನ ಮುಂಭಾಗ ಮತ್ತು 14-ಇಂಚಿನ ಹಿಂಭಾಗದ ವ್ಹೀಲ್ ಗಳನ್ನು ಹೊಂದಿದೆ.
ಬಿಎಂಡಬ್ಲ್ಯು R12 ನೈಟ್ ಬೈಕ್ ರೆಟ್ರೊ ಸ್ಟೈಲಿಂಗ್ ಮತ್ತು 17-ಇಂಚಿನ ಸ್ಪೋಕ್ ವೀಲ್‌ಗಳೊಂದಿಗೆ ಬಾಕ್ಸರ್ ಅಲ್ಯೂಮಿನಿಯಂ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ 45 mm USD ಫೋರ್ಕ್‌ನಿಂದ ಕೂಡಿದೆ. ಎರಡೂ ಬೈಕುಗಳು ಸಿಂಗಲ್-ಸೈಡ್ ಡ್ಯುಯಲ್-ಎಂಡ್ ಎಕ್ಸಾಸ್ಟ್ ಟಿಪ್ಸ್‌ಗಳನ್ನು ಹೊಂದಿದ್ದರೂ, ನೈಟ್ ನಲ್ಲಿರುವ ಒಂದು ಕ್ರೋಮ್ ಫಿನಿಶ್ ಆಗಿದ್ದರೆ ಇನ್ನೊಂದು ಬ್ರಷ್ಡ್ ಫಿನಿಶ್ ಹೊಂದಿದೆ.

ಎರಡೂ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (DTC), ಎಂಜಿನ್ ಡ್ರ್ಯಾಗ್ ಟಾರ್ಕ್ ಮತ್ತು TPMS ಜೊತೆಗೆ ಬಿಎಂಡಬ್ಲ್ಯುಯ ಹೊಸ ABS ಪ್ರೊ ಅನ್ನು ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಇನ್ನು ಹೆಡ್‌ಲೈಟ್ ಪ್ರೊ ಮತ್ತು ಕೀಲೆಸ್ ರೈಡ್ ಅನ್ನು ಸಹ R12 ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ನಂತೆ ನೀಡಲಾಗುತ್ತದೆ.
ಪ್ರೀಮಿಯಂ ಕ್ರೂಸರ್ ಮತ್ತು ರೋಡ್‌ಸ್ಟರ್‌ನಿಂದ ನೀವು ನಿರೀಕ್ಷಿಸಿದಂತೆ, ಎರಡೂ ಅಧಿಕೃತ ಆಕ್ಸೆಸರೀಸ್ ಮತ್ತು ಆಯ್ಕೆಯ ಪ್ಯಾಕೇಜ್‌ಗಳೊಂದಿಗೆ ಭಾರತದಲ್ಲಿ ಲಭ್ಯವಿದೆ. ಈ ಬಿಎಂಡಬ್ಲ್ಯು ಮೂರು ವರ್ಷಗಳ/ಅನಿಯಮಿತ ಕಿಲೋಮೀಟರ್ ಸ್ಟ್ಯಾಂಡರ್ಡ್ ವಾರಂಟಿಯನ್ನು ಸಹ ನೀಡುತ್ತಿದೆ, ಇದನ್ನು ಆಯ್ಕೆಯಾಗಿ ವಿಸ್ತರಿಸಬಹುದು. ಈ ಬಿಎಂಡಬ್ಲ್ಯು R12 ಮತ್ತು R12 ನೈಟ್ ಬೈಕ್‌ಗಳು ದುಬಾರಿ ಬೆಲೆ ಐಷಾರಾಮಿ ಬೈಕ್ ಗಳಾಗಿವೆ.


Click it and Unblock the Notifications








