ನಂ.1 ಹೀರೋ ಕಂಪನಿಯ ಬ್ರಹ್ಮಾಸ್ತ್ರ ಮಾವ್ರಿಕ್ 440 ಅನಾವರಣ: ರಾಯಲ್ ಎನ್‌ಫೀಲ್ಡ್‌ಗೆ ಆತಂಕ ಶುರು
ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero Motocorp) ತನ್ನ ಬಹುನಿರೀಕ್ಷಿತ ಹೀರೋ ಮಾವ್ರಿಕ್ 440 (Hero Mavrick 440) ಬೈಕ್ ಅನ್ನು ಅನಾವರಣಗೊಳಿಸಿದೆ. ಇದು ಹೀರೋ ಮೋಟೋಕಾರ್ಪ್ - ಹಾರ್ಲೆ ಡೇವಿಡ್ಸನ್ (Harley Davidson) ಪಾಲುದಾರಿಕೆಯಿಂದ ಹೊರಬರುವ ಎರಡನೇ ಮಾದರಿಯಾಗಿದೆ.
ಈ ಹೊಸ ಹೀರೋ ಮಾವ್ರಿಕ್ 440 (Hero Mavrick 440) ಬೈಕ್ ಕಳೆದ ವರ್ಷ ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ X440 (Harley-Davidson X440) ಆಧಾರವಾಗಿದೆ. ಹೊಸ ಮಾವ್ರಿಕ್ 440 ಬೈಕ್ ಸಂಪೂರ್ಣವಾಗಿ ವಿಭಿನ್ನವಾದ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಹೊಸ ಹೀರೋ ಮಾವ್ರಿಕ್ 440 ಬೈಕ್ ಖರೀದಿಗಾಗಿ ಬುಕ್ಕಿಂಗ್ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಇನ್ನು ಈ ಬೈಕಿನ ವಿತರಣೆಯು ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗುತ್ತವೆ.

ಹೊಸ ಹೀರೋ ಮಾವ್ರಿಕ್ 440 ಬೈಕ್ ಮೂರು ರೂಪಾಂತರಗಳಲ್ಲಿ ಐದು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಬೈಕ್ ಮಸ್ಕ್ಯುಲರ್ ಸ್ಟೈಲಿಂಗ್ ಅನ್ನು ಬಲ್ಬಸ್ ಫ್ಯುಯಲ್ ಟ್ಯಾಂಕ್‌ನೊಂದಿಗೆ ಸಂಪೂರ್ಣ ಶ್ರೌಡ್ಸ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಹೆಡ್‌ಲ್ಯಾಂಪ್ ಮತ್ತು ಅಗಲವಾದ ಹ್ಯಾಂಡಲ್‌ಬಾರ್‌ನೊಂದಿಗೆ ಪಡೆಯುತ್ತದೆ. ಇನ್ನು ಈ ಬೈಕ್ ಟೇಲ್ ವಿಭಾಗ ಮತ್ತು ಸ್ಕೂಪ್-ಔಟ್ ಸಿಂಗಲ್-ಪೀಸ್ ಸೀಟುಗಳು ಮಾಡೆಲ್‌ನ ಉತ್ಸಾಹಭರಿತ ಭಾವನೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಹೊಸ ಹೀರೋ ಮಾವ್ರಿಕ್ 440 ಬೈಕ್ ಸಹ ಟ್ಯೂನಿಂಗ್ ಫೋರ್ಕ್-ಶೈಲಿಯ ಅಲಾಯ್ ವ್ಹೀಲ್ ಗಳು ಮತ್ತು ಆಕರ್ಷಕ ಎಕ್ಸಾಸ್ಟ್ ಅನ್ನು ಪಡೆಯುತ್ತದೆ. ಹೀರೋ ಮಾವ್ರಿಕ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗಾಗಿ ಎಲ್‌ಸಿಡಿ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಹಲವಾರು ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇನ್ನು ಈ ಡಿಸ್ ಪ್ಲೇಯು ಬ್ಲೂಟೂತ್ ಕನೆಕ್ಟ್ ನೊಂದಿಗೆ ಕರೆಗಳು ಮತ್ತು SMS ಅಲರ್ಟ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಅನ್ನು ಹೊಂದಿರುತ್ತದೆ.

ಆದರೆ ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಮಾಡಬಹುದು. ಈ ಬೈಕಿನಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಫುಲ್ ಎಲ್‌ಇಡಿ ಲೈಟಿಂಗ್ ಸಹ ಲಭ್ಯವಿದೆ. ಹಾರ್ಲೆ ಡೇವಿಡ್ಸನ್ X440 ಬೈಕಿನಲ್ಲಿ 440 cc ಸಿಂಗಲ್-ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 2,000 rpm ನಿಂದ 90 ಪ್ರತಿಶತ ಟಾರ್ಕ್ ಅನ್ನು ಉತ್ಪಾದಿಸುವುದರಿಂದ ದೀರ್ಘ-ಸ್ಟ್ರೋಕ್ ಎಂಜಿನ್ ಅನ್ನು ಟಾರ್ಕ್‌ಗೆ ಟ್ಯೂನ್ ಮಾಡಲಾಗಿದೆ
ಹಾರ್ಲೆ ಡೇವಿಡ್ಸನ್ X440 ಬೈಕ್ ಗಿಂತ ಭಿನ್ನವಾಗಿರುವ ಸಸ್ಪೆಕ್ಷನ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಈ ಹೀರೋ ಮಾವ್ರಿಕ್ 440 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಜಾವಾ 350, ಹೋಂಡಾ CB350 ಮತ್ತು ಹಾರ್ಲೆ-ಡೇವಿಡ್ಸನ್ X440 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇದು ಬ್ರ್ಯಾಂಡ್‌ನ ಹೊಸ ಮತ್ತು ಪ್ರೀಮಿಯಂ 'ಹೀರೋ ಪ್ರೀಮಿಯಾ' ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಪ್ರತ್ಯೇಕವಾಗಿ ಮಾರಾಟವಾಗಲಿದೆ.
'ಹೀರೋ ಪ್ರೀಮಿಯಾ' ಡೀಲರ್‌ಶಿಪ್ ನೆಟ್‌ವರ್ಕ್ ನಲ್ಲಿ ಹಾರ್ಲೆ ಎಕ್ಸ್ 440, ಹೀರೋ ಕರಿಜ್ಮಾ ಎಕ್ಸ್‌ಎಂಆರ್, ವಿಡಾ ವಿ 1 ಮತ್ತು ಮುಂತಾದವುಗಳನ್ನು ಸಹ ಮಾರಾಟ ಮಾಡುತ್ತಿವೆ. ಈ ಹೊಸ ಹೀರೋ ಮಾವ್ರಿಕ್ 440 ಬೈಕಿನ ಬೆಲೆಯು ರೂ.2 ಲಕ್ಷವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಶಿಘ್ರದಲ್ಲೇ ಈ ಬಹುನಿರೀಕ್ಷಿತ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








