ಕಾಸು ಕೂಡಿಡಿ.. ನೂತನ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್ ಬಂದೇ ಬಿಡ್ತು.. ಟಾಪ್ ಹೈಲೈಟ್ಸ್‌!

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ ಆಕ್ಟಿವಾ ಇ (Activa e) ಮತ್ತು ಕ್ಯೂಸಿ1 (QC1) ಎಂಬ ಎರಡು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ. ಅದರಲ್ಲೂ ನೂತನ 'ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ಹೊಸತನಗಳಿಗೂ ಸಾಕ್ಷಿಯಾಗಿದೆ. ಅತಿ ಶೀಘ್ರದಲ್ಲಿ ಮಾರಾಟಕ್ಕೆ ಬರಲಿದ್ದು, ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ನಾವಿಲ್ಲಿ ಹೊಸ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖಾಂಶಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ವಿನ್ಯಾಸ (Design): ನೂತನ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್, ಡಿಆರ್‌ಎಲ್‌ಗಳು ಮತ್ತು ಟೈಲ್‌ಲ್ಯಾಂಪ್‌ನ್ನು ಒಳಗೊಂಡಿದ್ದು, 12-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್ & ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಸೇರಿದಂತೆ 5 ವಿವಿಧ ಬಣ್ಣಗಳೊಂದಿಗೂ ಲಭ್ಯವಾಗಲಿದೆ.

New Honda Activa e Electric Scooter Top Things You Should Must Know

ಕಾರ್ಯಕ್ಷಮತೆ (Performance): ಈ ಎಲೆಕ್ಟ್ರಿಕ್ ಸ್ಕೂಟರ್ 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ (Swappable Battery pack) ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿ.ಮೀ ಕ್ರಮಿಸುತ್ತದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 6 ಕೆಡಬ್ಲ್ಯೂ ಪೀಕ್ ಪವರ್ ಹಾಗೂ 22 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹೊಚ್ಚ ಹೊಸ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್, ಕೇವಲ 7.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಸವಾರರ ಅನುಕೂಲಕ್ಕಾಗಿ ಇಕಾನ್, ಸ್ಟ್ಯಾಂಡರ್ಡ್ ಹಾಗೂ ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ.

New Honda Activa e Electric Scooter Top Things You Should Must Know

ವೈಶಿಷ್ಟ್ಯಗಳು (Features): ನೂತನ 'ಆಕ್ಟಿವಾ ಸ್ಕೂಟರ್ ಹಲವು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಿಶೇಷವಾದ 7.0-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಇದನ್ನು ಹ್ಯಾಂಡಲ್‌ಬಾರ್‌ನಲ್ಲಿರುವ ಟಾಗಲ್ ಸ್ವಿಚ್‌ಗಳ ಸಹಾಯದಿಂದ ಸುಲಭವಾಗಿ ಹತೋಟಿಗೆ ತರಬಹುದು. ಇದರೊಟ್ಟಿಗೆ 'ಹೆಚ್-ಸ್ಮಾರ್ಟ್' ಕೀಯೊಂದಿಗೂ ಈ ಸ್ಕೂಟರ್ ಲಭ್ಯವಾಗಲಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension System & Braking System): ಈ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

New Honda Activa e Electric Scooter Top Things You Should Must Know

ಬೆಲೆ (Price): ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದ್ದು, ರೂ.1 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಜನವರಿ 1, 2025 ರಿಂದ ನೂತನ 'ಆಕ್ಟಿವಾ ಇ' ಬುಕ್ಕಿಂಗ್ ಶುರುವಾಗಲಿದ್ದು, ಫೆಬ್ರವರಿಯಿಂದ ವಿತರಣೆಗಳು ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಒಟ್ಟಾರೆಯಾಗಿ ದೇಶೀಯ ಮಾರುಕಟ್ಟೆಯಲ್ಲಿ ಹೊಸ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ಟ್ರಿಕ್ ಸ್ಕೂಟರ್ ಅನಾವರಣಗೊಂಡಿರುವುದು ಖರೀದಿದಾರರಿಗೆ ಹೆಚ್ಚಿನ ಖುಷಿ ತಂದಿದೆ. ಬುಕ್ಕಿಂಗ್ ಮಾಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈ ಸ್ಕೂಟರ್‌ಗೆ ಎಥರ್ ರಿಜ್ಟಾ, ಟಿವಿಎಸ್ ಐಕ್ಯೂಬ್, ಹೀರೋ ವಿಡಾ, ಓಲಾ ಎಸ್1 ಹಾಗೂ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಬಲವಾದ ಎದುರಾಳಿಯಾಗಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 28, 2024, 10:56 [IST]
English summary
New honda activa e electric scooter top things you should must know
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+