ಗುಡ್ಡಗಾಡಿನಲ್ಲೂ ನುಗ್ಗುವ ಕಲ್ಲುಬಂಡೆಯಂತಹ ಹೊಸ ಕವಾಸಕಿ KLX 230 ಬೈಕ್ ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ಕವಾಸಕಿ KLX 230 ಡ್ಯುಯಲ್-ಸ್ಪೋರ್ಟ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಕವಾಸಕಿ KLX 230 (Kawasaki KLX 230) ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.30 ಲಕ್ಷವಾಗಿದೆ. ಈ ಹೊಸ ಡ್ಯುಯಲ್-ಸ್ಪೋರ್ಟ್ ಬೈಕ್ ಭಾರತೀಯ ಮಾರುಕಟ್ಟೆಗೆ ಬ್ರ್ಯಾಂಡ್‌ನಿಂದ ರಸ್ತೆಗೆ ಕಾನೂನು ಬದ್ಧವಾಗಿದೆ. ವಿಶಿಷ್ಟವಾದ ಡ್ಯುಯಲ್-ಸ್ಪೋರ್ಟ್ ಬೈಕ್ ಶೈಲಿಯಲ್ಲಿ ಕವಾಸಕಿ KLX 230 ಸ್ಲಿಮ್ ಮತ್ತು ಒರಟಾದ ನಿರ್ಮಾಣವನ್ನು ಹೊಂದಿದೆ.
ವಿನ್ಯಾಸ: ಹೊಸ ಕವಾಸಕಿ KLX 230 ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿರುವ ಡ್ಯುಯಲ್ ಸ್ಪೋರ್ಟ್ ಬೈಕ್ ಆಗಿದೆ. ಹೊಸ ಕವಾಸಕಿ KLX 230 ಬೈಕ್ ಕಿರಿದಾದ ಸೀಟ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಪಡೆಯುತ್ತದೆ. ಇದು LCD ಅನ್ನು ಬಳಸುತ್ತದೆ. ಇನ್ನು ಈ ಕವಾಸಕಿ KLX 230 ಬೈಕ್ ಹೆಕ್ಸೆಗೊನಲ್ ಹೆಡ್‌ಲೈಟ್ ಅನ್ನು ಅದರ ಸುತ್ತಲೂ ಪ್ಲಾಸ್ಟಿಕ್ ಕೌ ಮತ್ತು ಎತ್ತರದ ಫೆಂಡರ್ ಅನ್ನು ಪಡೆಯುತ್ತದೆ.

ಇದರೊಂದಿಗೆ ಡ್ಯುಯಲ್ ಸ್ಪೋರ್ಟ್ ಎತ್ತರದ ಮಡ್‌ಗಾರ್ಡ್, ಸಣ್ಣ ಇಂಧನ ಟ್ಯಾಂಕ್ ಮತ್ತು ಮೊಂಡು ಟೀಲ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಬದಲಾಯಿಸಬಹುದಾದ ಡ್ಯುಯಲ್-ಚಾನೆಲ್ ABS ಅನ್ನು ಪಡೆಯುತ್ತದೆ. ಇದು ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ದುಬಾರಿ ರಸ್ತೆ ಕಾನೂನು ಬದ್ದವಾದ ಡ್ಯುಯಲ್-ಸ್ಪೋರ್ಟ್ ಬೈಕ್ ಆಗಿದೆ.
ಎಂಜಿನ್: ಹೊಸ ಕವಾಸಕಿ KLX 230 ಬೈಕ್ 233cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 18.1bhp ಮತ್ತು 6,400rpm ನಲ್ಲಿ 18.3Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿರುವುದರಿಂದ ಹೆದ್ದಾರಿಯಲ್ಲಿ ಪ್ರಯಾಣಿಸಲು ಸುಲಭವಾಗುತ್ತದೆ.

ಸಸ್ಪೆಕ್ಷನ್: ಈ ಹೊಸ ಕವಾಸಕಿ KLX 230 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 37mm ಟೆಲಿಸ್ಕೋಪಿಕ್ ಫೋರ್ಕ್‌ನೊಂದಿಗೆ ಸ್ಟೀಲ್ ಫ್ರೆಮ್ ಅನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್‌ನೊಂದಿಗೆ ಲಿಂಕ್-ಟೈಪ್ ಮೊನೊ-ಶಾಕ್ ಅನ್ನು ಹೊಂದಿದೆ. ಇನ್ನು ಕವಾಸಕಿಯು ಮುಂಭಾಗದಲ್ಲಿ ಟ್ರ್ಯಾವೆಲ್ 240 ಎಂಎಂ ಆಗಿದ್ದರೆ ಹಿಂಭಾಗದಲ್ಲಿ ವ್ಹೀಲ್ ಟ್ರ್ಯಾವೆಲ್ 250 ಎಂಎಂ ಆಗಿದೆ.
ಬ್ರೇಕಿಂಗ್ ಸಿಸ್ಟಂ: ಕವಾಸಕಿಯ ಡ್ಯುಯಲ್ ಸ್ಪೋರ್ಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 265 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸ್ವಿಚ್ ಮಾಡಬಹುದಾದ ABS ಅನ್ನು ಕೂಡ ನೀಡಲಾಗುತ್ತದೆ. ಇನ್ನು ಆಫ್-ರೋಡ್ ಸವಾರಿ ಮಾಡುವಾಗ ಹಿಂಭಾಗವನ್ನು ಲಾಕ್ ಮಾಡಲು ಮತ್ತು ಬೈಕ್ ಸ್ಲೈಡ್ ಮಾಡಲು ಇದು ಅನುವು ಮಾಡಿಕೊಡುತ್ತದೆ.

ಹೊಸ ಕವಾಸಕಿ KLX 230 ಬೈಕ್ 21-ಇಂಚಿನ ಮುಂಭಾಗದ ವ್ಹೀಲ್ ಮತ್ತು 18-ಇಂಚಿನ ಹಿಂಭಾಗದ ವ್ಹೀಲ್ MRF ಟೈರ್‌ಗಳೊಂದಿಗೆ ಸವಾರಿ ಮಾಡುತ್ತದೆ. ಈ ಡ್ಯುಯಲ್ ಸ್ಪೋರ್ಟ್ ಬೈಕ್ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 139kg ಹಗುರವಾಗಿದೆ. ಆಫ್-ರೋಡ್ ಸವಾರಿ ಮಾಡುವಾಗ ಬೈಕು ನಿಭಾಯಿಸಲು ಇದು ಸುಲಭವಾಗುತ್ತದೆ. ಇನ್ನು ಈ ಡ್ಯುಯಲ್ ಸ್ಪೋರ್ಟ್ ಬೈಕ್ 880 ಎಂಎಂ ಎತ್ತರವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








