ಪಾಕೆಟ್ ರಾಕೆಟ್: ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಕವಾಸಕಿ ನಿಂಜಾ 650 ಬೈಕ್
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಕೆಲವೇ ದಿನಗಳ ಹಿಂದೆ, 2025ರ ಕವಾಸಕಿ ನಿಂಜಾ 650 ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿತು. ಭಾರತೀಯ ಮಾರುಕಟ್ಟೆಯು ಶೀಘ್ರದಲ್ಲೇ ಈ ಮಾದರಿಯನ್ನು ಪಡೆಯಲಿದೆ ಎಂದು ತೋರುತ್ತಿದೆ. ಕವಾಸಕಿ ಕಂಪನಿಯು ಭಾರತದಲ್ಲಿ ಹಬ್ಬದ ಸೀಸನ್ ನಲ್ಲಿ 2025ರ ಕವಾಸಕಿ ನಿಂಜಾ 650 (Kawasaki Ninja 650) ಬೈಕ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಪ್ರಸ್ತುತ ಮಾದರಿಯ ಒಟ್ಟಾರೆ ಆಸಕ್ತಿಯು ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದೆ ಮತ್ತು ಇದರ ಪರಿಣಾಮವಾಗಿ, ಡೀಲರ್‌ಗಳು ನಿಂಜಾ 650 ಅನ್ನು ನಿರೀಕ್ಷಿಸಿದಂತೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
2025ರ ಕವಾಸಕಿ ನಿಂಜಾ 650 ಬೈಕ್ ಮಾದರಿಯು 650 ವಿಭಾಗದಲ್ಲಿ ಕವಾಸಕಿ ಕಂಪನಿಗೆ ಹೆಚ್ಚಿನ ಮಾರಾಟದ ಕೊಡುಗೆಯನ್ನು ನೀಡಬಹುದು. 2025ರ ವಾಸಕಿ ನಿಂಜಾ 650 ಬೈಕಿಗೆ ಕಂಪನಿಯು ಬೈಕ್‌ಗೆ ಕೇವಲ ಸೌಂದರ್ಯದ ನವೀಕರಣಗಳನ್ನು ನೀಡಿದೆ. ಈ ಬೈಕ್ ಕ್ಯಾಂಡಿ ಸ್ಟೀಲ್ ಫರ್ನೇಸ್ ಆರೆಂಜ್/ಮೆಟಾಲಿಕ್ ಸ್ಪಾರ್ಕ್ ಬ್ಲಾಕ್/ಮೆಟಾಲಿಕ್ ರಾಯಲ್ ಪರ್ಪಲ್ ಮತ್ತು ಮೆಟಾಲಿಕ್ ಮ್ಯಾಟ್ ಓಲ್ಡ್ ಸ್ಕೂಲ್ ಗ್ರೀನ್/ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಎಂಬ ಎರಡು ಹೊಸ ಬಣ್ಣಗಳನ್ನು ಪಡೆಯುತ್ತದೆ.

2025ರ ಕವಾಸಕಿ ನಿಂಜಾ 650 ಬೈಕ್ ಅನ್ನು ಕಂಪನಿಯು KRT ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಈ ರೂಪಾಂತರವು ಕವಾಸಕಿ ರೇಸಿಂಗ್ ತಂಡದ ಲೈವ್ರಿ ಮತ್ತು ಗ್ರಾಫಿಕ್ಸ್ ಅನ್ನು ಪಡೆಯುತ್ತದೆ. ಈ ಕವಾಸಕಿ ನಿಂಜಾ 650 ಬೈಕ್ ಅದೇ 649cc, ಸಮಾನಾಂತರ-ಟ್ವಿನ್ ಎಂಬ ಎಂಜಿನ್ ಚಾಲಿತವಾಗಿ ಮುಂದುವರಿಯುತ್ತದೆ.
ಆ ಎಂಜಿನ್ 8,000rpm ನಲ್ಲಿ 67.3bhp ಮತ್ತು 6,700rpm ನಲ್ಲಿ 65.76Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಲಿಂಕ್ ಮಾಡಲಾಗಿದೆ. 2025ರ ಕವಾಸಕಿ ನಿಂಜಾ 650 ಬೈಕ್ 4.3-ಇಂಚಿನ TFT ಕಲರ್ ಇನ್ಸ್ಟ್ರುಮೆಂಟ್ ಡಿಸ್ ಪ್ಲೇ, LED ಲೈಟಿಂಗ್ ಮತ್ತು ಸ್ಮಾರ್ಟ್‌ಫೋನ್ ಸಂಪರ್ಕದಂತಹ ಕೆಲವು ಯೋಗ್ಯ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.

ಇನ್ನು ಈ ಕವಾಸಕಿ ನಿಂಜಾ 650 ಬೈಕ್ ಸೇಪ್ಟಿ ಫೀಚರ್ಸ್ ಗಳಲ್ಲಿ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಮೂರು ರೈಡಿಂಗ್ ಮೋಡ್‌ಗಳು ಮತ್ತು ಡ್ಯುಯಲ್-ಚಾನೆಲ್ ABS ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿವೆ. ಈ ಹೊಸ ಮಾಡೆಲ್‌ನೊಂದಿಗೆ, ಕವಾಸಕಿಯು ನಿಂಜಾ 650 ಬೆಲೆಯನ್ನು ಹೆಚ್ಚಿಸುವತ್ತ ಗಮನಹರಿಸಲಿದೆ. ಬೈಕಿನ ಪ್ರಸ್ತುತ ಬೆಲೆ 7.16 ಲಕ್ಷ ರೂ (ಎಕ್ಸ್ ಶೋರೂಂ) ಆಗಿದೆ.
ಆದ್ದರಿಂದ 2025ರ ನಿಂಜಾ 650 ಬೈಕ್ ಸುಮಾರು 7.35 ಲಕ್ಷ (ಎಕ್ಸ್ ಶೋ ರೂಂ) ಬೆಲೆಯನ್ನು ನಿರೀಕ್ಷಿಸಬಹುದು. ಇನ್ನು ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ 2024ರ ಕವಾಸಕಿ ನಿಂಜಾ ZX-6R (Kawasaki Ninja ZX-6R) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಗೊಳಿಸಿಸಲಾಗಿದೆ.

2024ರ ಕವಾಸಕಿ ನಿಂಜಾ ZX-6R ಬೈಕನ್ನು 2023ರ EICMA ರಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದ ಕೇವಲ ಒಂದು ತಿಂಗಳ ನಂತರ ಡಿಸೆಂಬರ್‌ನಲ್ಲಿ 2023ರ ಇಂಡಿಯಾ ಬೈಕ್ ವೀಕ್ ನಲ್ಲಿ ಪ್ರದರ್ಶಿಸಿದ್ದರು. 2024ರ ಕವಾಸಕಿ ನಿಂಜಾ ZX-6R ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.09 ಲಕ್ಷಕೆಕ್ ಬಿಡುಗಡೆಗೊಂಡಿತು, ಬೆಲೆ ಏರಿಕೆ ಬಳಿಕ ಇದೀಗ ರೂ.11.20 ಲಕ್ಷವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್


Click it and Unblock the Notifications








