ಪಾಕೆಟ್ ರಾಕೆಟ್: ಹೊಸ ಕವಾಸಕಿ ನಿಂಜಾ ZX-4RR ಬೈಕ್ ವಿಶೇಷತೆಗಳೇನು?

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ನಿಂಜಾ ZX 4RR ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಪ್ರೀಮಿಯಂ ಕವಾಸಕಿ ನಿಂಜಾ ZX 4RR ಬೈಕ್ ಹೊಸ ಬಣ್ಣದ ಯೋಜನೆಯೊಂದಿಗೆ ಕೆಲವು ಹೊಸ ಫೀಚರ್ಸ್ ಗಳನ್ನು ಪಡೆಯುತ್ತದೆ. ಹೊಸ ಕವಾಸಕಿ ನಿಂಜಾ ZX 4RR (Kawasaki Ninja ZX-4RR) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9.10 ಲಕ್ಷವಾಗಿದೆ. ಇದು ಭಾರತದಲ್ಲಿ ಮಾರಾಟಕ್ಕೆ ನೀಡಲಾಗುವ ಅತ್ಯಂತ ದುಬಾರಿ 400 cc ಮೋಟಾರ್‌ಸೈಕಲ್ ಆಗಿದೆ.

ಹೊಸ ಕವಾಸಕಿ ನಿಂಜಾ ZX-4RR ನಾಲ್ಕು ಸಿಲಿಂಡರ್ ಮೋಟಾರ್ ಅನ್ನು ಪ್ಯಾಕ್ ಮಾಡುತ್ತದೆ ಮತ್ತು ಇದು ಸರಿಯಾದ ಪಾಕೆಟ್ ರಾಕೆಟ್ ಆಗಿದೆ. ಹೊಸ ನಿಂಜಾ ZX-4RR ಅನ್ನು ನಿಂಜಾ ZX-4R ಮೇಲೆ ಇರಿಸಲಾಗಿದೆ ಮತ್ತು ಸಂಪೂರ್ಣವಾಗಿ ನಿರ್ಮಿಸಲಾದ ಯುನಿಟ್ ಆಗಿ (CBU) ಸೀಮಿತ ಸಂಖ್ಯೆಯಲ್ಲಿ ಭಾರತಕ್ಕೆ ತರಲಾಗುತ್ತಿದೆ. ಈ ಸೂಪರ್ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Kawasaki Ninja ZX-4RR

ಫೀಚರ್ಸ್: ಹೊಸ ಕವಾಸಕಿ ನಿಂಜಾ ZX 4RR ಬೈಕ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 4.3-ಇಂಚಿನ TFT ಡಿಸ್‌ಪ್ಲೇಯನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ, ಇದು ಸ್ಪೋರ್ಟ್, ರೋಡ್, ರೈನ್ ಮತ್ತು ರೈಡರ್ ಎಂಬ ನಾಲ್ಕು ರೈಡ್ ಮೋಡ್‌ಗಳನ್ನು ಪಡೆಯುತ್ತದ, ಜೊತೆಗೆ ಟ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಇದರ ಎಲ್ಲಾ-LED ಲೈಟಿಂಗ್ ಅನ್ನು ಒಳಗೊಂಡಿವೆ. ಈ ಕವಾಸಲಿ ನಿಂಜಾ ZX-4RR ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ.

ಸಸ್ಪೆಕ್ಷನ್: ಕವಾಸಕಿ ನಿಂಜಾ ZX 4RR ಬೈಕ್ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಮೊನೊಶಾಕ್ ಸೆಟಪ್ ಜೊತೆಗೆ ಪ್ರಿ-ಲೋಡ್ ಹೊಂದಾಣಿಕೆ ಮುಂಭಾಗದ ಫೋರ್ಕ್‌ಗಳನ್ನು ಹೊಂದಿದೆ. ಮತ್ತೊಂದೆಡೆ, ZX 4R, ಹೊಂದಾಣಿಕೆ ಮಾಡಲಾಗದ ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದ ಮೊನೊಶಾಕ್‌ನೊಂದಿಗೆ ಬರುತ್ತದೆ. ಇದು ಕೇವಲ ಪ್ರಿ-ಲೋಡ್ ಹೊಂದಾಣಿಕೆಯಾಗಿದೆ.

Kawasaki Ninja ZX-4RR

ಬ್ರೇಕಿಂಗ್ ಸಿಸ್ಟಂ: ಹೊಸ ಕವಾಸಕಿ ನಿಂಜಾ ZX 4RR ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದು ಹಿಂದಿನ ಅದೇ ಬ್ರೇಕಿಂಗ್ ಸಿಸ್ಟಂ ಅನ್ನು ಉಳಿಸಿಕೊಂಡಿದೆ. ಈ ಸೂಪರ್ ಬೈಕ್ ಮುಂಭಾಗದಲ್ಲಿ 290 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಮತ್ತು ಈ ಬೈಕಿನ ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ. ಈ ಬೈಕ್ ಅತ್ಯುತ್ತಮ ಬ್ರೇಕಿಂಗ್ ಸಿಸ್ಟಂ ಹೊಂದಿದೆ ಎಂದು ಹೇಳಬಹುದು.

ಎಂಜಿನ್: ಕವಾಸಕಿ ನಿಂಜಾ ZX 4RR ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 399 cc ಲಿಕ್ವಿಡ್-ಕೂಲ್ಡ್, ಇನ್‌ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 14,500 rpm ನಲ್ಲಿ 76 bhp ಮತ್ತು 13,000 rpm ನಲ್ಲಿ 39 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Kawasaki Ninja ZX-4RR

ಕವಾಸಕಿಯ RAM ಏರ್ ಸಿಸ್ಟಮ್ ಸಕ್ರಿಯಗೊಳಿಸಿದ ನಂತರ ಮೋಟಾರ್‌ಸೈಕಲ್ ಇನ್ನೂ ಹೆಚ್ಚಿನ 79 bhp ವರೆಗೆ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ZX-4R ನಲ್ಲಿ ನೀಡಲಾಗಿಲ್ಲ. ಈ ಬೈಕ್ ರಾಮ್ ಏರ್ ಇನ್‌ಟೇಕ್ ಅನ್ನು ಸಹ ಪ್ಯಾಕ್ ಮಾಡುತ್ತದೆ. ಈ ಕವಾಸಕಿ ನಿಂಜಾ ZX 4RR ಬೈಕ್ ಕರ್ಬ್ ತೂಕ 189 ಕೆಜಿ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, June 2, 2024, 14:00 [IST]
English summary
New kawasaki ninja zx 4rr top things details
Read more on kawasaki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+