ಪಾಕೆಟ್ ರಾಕೆಟ್: ಬರುತ್ತಿದೆ ಯುವಕರ ಹಾಟ್ ಫೇವರೆಟ್ 2024ರ ಕೆಟಿಎಂ 390 ಅಡ್ವೆಂಚರ್ ಬೈಕ್
ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ ಸರಣಿಯ ಬೈಕುಗಳ ಫ್ಯಾನ್ ಬೇಸ್ ಏನು ಎನ್ನುವುದು ಎಲ್ಲರಿಗೂ ಗೊತ್ತು. ಈ ಡ್ಯೂಕ್‌ನ ಸ್ಟೈಲಿಶ್ ಡಿಸೈನ್ ಮತ್ತು ಇದರ ಅದ್ಭುತ ಪರ್ಫಾಮೆನ್ಸ್‌ಗೆ ಬೆರಗಾಗದವರೇ ಇಲ್ಲ. ಅದರಲ್ಲೂ ಹದಿ ಹರೆಯದ ಯುವಕರ ಮೊದಲ ಗುರಿಯೇ ಕೆಟಿಎಂ ಡ್ಯೂಕ್ ಸರಣಿಯ ಯಾವುದಾದರೂ ಒಂದು ಬೈಕ್ ಕೊಳ್ಳಬೇಕು ಎಂಬುದು ಆಗಿರುತ್ತೆ. ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ತನ್ನ ಹೊಸ 390 ಅಡ್ವೆಂಚರ್ ಬೈಕ್ ಅನ್ನು 2024ರ ಡಿಸೆಂಬರ್ ತಿಂಗಳಿನಲ್ಲಿ ನಡೆಯಲ್ಲಿರುವ ಇಂಡಿಯಾ ಬೈಕ್ ವೀಕ್ ನಲ್ಲಿ ಅನಾವರಣವಾಗಲಿದೆ.
ಆಸ್ಟ್ರಿಯನ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಕೆಟಿಎಂ ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇಂಡಿಯಾ ಬೈಕ್ ವೀಕ್ 2024ರ ಡಿಸೆಂಬರ್ ತಿಂಗಳ 6 ಮತ್ತು 7 ರಂದು ಗೋವಾದ ವಾಗೇಟರ್‌ನಲ್ಲಿ ನಡೆಯಲಿದೆ. ಇಂಡಿಯಾ-ಸ್ಪೆಕ್ ಕೆಟಿಎಂ 390 ಅಡ್ವೆಂಚರ್ ಬೈಕ್ R, S ಮತ್ತು X ಎಂಬ ಮೂರು ರೂಪಾಂತರರಗಳಲ್ಲಿ ಬರಲಿದೆ.

ಕೆಟಿಎಂ 390 ಅಡ್ವೆಂಚರ್ (KTM 390 Adventure) ಬೈಕ್ R 21-ಇಂಚಿನ/18-ಇಂಚಿನ (ಮುಂಭಾಗ/ಹಿಂಭಾಗ) ಸ್ಪೋಕ್ಡ್ ವೀಲ್‌ಗಳನ್ನು ಹೊಂದಿದೆ. ಈ ಕೆಟಿಎಂ ಅಡ್ವೆಂಚರ್ ಬೈಕಿನಲ್ಲಿ 230mm ಸಸ್ಪೆಕ್ಷನ್ ಟ್ರ್ಯಾವೆಲ್ ಅನ್ನು ನೀಡುತ್ತದೆ ಮತ್ತು ಹೊಂದಾಣಿಕೆ ಮಾಡಬಹುದಾದ ಅನ್ನು ಹೊಂದಿದೆ. ಈ ಅಡ್ವೆಂಚರ್ ಬೈಕ್ ಸೀಟ್ ಎತ್ತರವನ್ನು ಹೊಂದಿದೆ. ಈ ಕೆಟಿಎಂ 390 ಅಡ್ವೆಂಚರ್ ಬೈಕ್ ಕೆಟಿಎಂ ಅಡ್ವೆಂಚರ್ ಸರಣಿಯ ಅತ್ಯಂತ ದುಬಾರಿ ಆವೃತ್ತಿಯಾಗಲಿದೆ.
ಈ ಹೊಸ ಕೆಟಿಎಂ ಅಡ್ವೆಂಚರ್ ಬೈಕ್ ಎಸ್ ಮತ್ತು ಎಕ್ಸ್ ರೂಪಾಂತರಗಳು ಸರಿಸುಮಾರು 200mm ಸಸ್ಪೆಕ್ಷನ್ ಟ್ರ್ಯಾವೆಲ್ ಮತ್ತು ಹೋಂದಾಣಿಕ ಮಾಡುವ ಸಸ್ಪೆಕ್ಷನ್ ಸೆಟಪ್ ಅನ್ನು ಹೊಂದಿದೆ. ಎರಡು ಮಾಡೆಲ್‌ಗಳು ಭಿನ್ನವಾಗಿರುವಲ್ಲಿ ಎಸ್ ಜೊತೆಗಿನ ವೀಲ್ ಸೆಟಪ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಅಡ್ವೆಂಚರ್ ಆರ್ ಬೈಕಿನಲ್ಲಿ ಸ್ಪೋಕ್ ವೀಲ್ ಸೆಟಪ್ ಅನ್ನು ನಿರೀಕ್ಷಿಸಲಾಗಿದೆ.

ಈ ಕೆಟಿಎಂ ಅಡ್ವೆಂಚರ್ ಆರ್ ಬೈಕಿನಲ್ಲಿ ಕಂಡುಬರುವ ಅದೇ ಸ್ಪೋಕ್ ವೀಲ್ ಸೆಟಪ್ ಅನ್ನು ನಿರೀಕ್ಷಿಸಲಾಗಿದೆ. ಈ ಅಡ್ವೆಂಚರ್ ಎಕ್ಸ್ ಬೈಕ್ 19-inch/17-inch ವ್ಹೀ ಗಳು ಮತ್ತು ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಕೆಟಿಎಂ 390 ಅಡ್ವೆಂಚರ್ ಬೈಕ್ ಮೂರು ರೂಪಾಂತರಗಳು 399cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ ಅನ್ನು 45bhp ಮತ್ತು 40Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಕೆಟಿಎಂ ಕಂಪನಿಯು , ತನ್ನ ಅಂತರಾಷ್ಟ್ರೀಯ ಶ್ರೇಣಿಯ ಹೈ-ಪರ್ಫಾಮೆನ್ಸ್ ಮೋಟಾರ್ ಸೈಕಲ್‌ಗಳನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ನಾಲ್ಕು ವಿಶಿಷ್ಟ ವಿಭಾಗಗಳಲ್ಲಿ 10 ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಭಾರತದಲ್ಲಿ 1390cc ವರೆಗಿನ KTM ನೇಕೆಡ್, ಆಫ್-ರೋಡ್ ಮೋಟೋಕ್ರಾಸ್, ಟ್ರಾವೆಲ್, ಆಫ್-ರೋಡ್ ಎಂಡ್ಯೂರೋನ ನಾಲ್ಕು ಪ್ರಮುಖ ವಿಭಾಗಗಳನ್ನು ಒಳಗೊಂಡ 10 ಐಕಾನಿಕ್ ಮೋಟಾರ್‌ಸೈಕಲ್‌ಗಳನ್ನು ಅನಾವರಣಗೊಳಿಸಿದೆ. ಈ ಬೈಕ್‌ಗಳು ಈಗ ಭಾರತದ 7 - ಪ್ರಮುಖ ನಗರಗಳಲ್ಲಿನ ಎಲ್ಲಾ ಹೊಸ KTM ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ. ಇದರಲ್ಲಿ ಗ್ರಾಹಕರು KTM PowerParts ಮತ್ತು KTM ಪವರ್‌ವೇರ್‌ಗಳ ಸಮಗ್ರ ಆಯ್ಕೆಯನ್ನು ಅನ್ವೇಷಿಸಬಹುದು, KTM Pro-XP ಅನುಭವಗಳನ್ನು ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








