ಜುಲೈ 17ರಂದು ಧೂಳೆಬ್ಬಿಸಲು ಬರುತ್ತಿದೆ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್: ವಿಶೇಷತೆಗಳೇನು?

ರಾಯಲ್ ಎನ್‌ಫೀಲ್ಡ್‌ ಹೊಸ ಅಪ್‌ಡೇಟ್‌ಗಳೊಂದಿಗೆ ತನ್ನ ಅಭಿಮಾನಿಗಳಿಗೆ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಇತ್ತೀಚೆಗೆ ತನ್ನ 450 cc ಮೋಟಾರ್‌ಸೈಕಲ್ ವಿಭಾಗಕ್ಕೆ ಹೊಸ ಬೈಕ್ ಪರಿಚಯಿಸುವ ಕುರಿತು ಆಟೋ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಇದಕ್ಕೆ ರಾಯಲ್ ಎನ್ ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಎಂಬ ಹೆಸರನ್ನು ನಾಮಕರಣ ಮಾಡಲಾಗಿದ್ದು, ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿತ್ತು. ಈ ಹೊಸ ಗೆರಿಲ್ಲಾ 450 ಬೈಕ್ ಬಿಡುಗಡೆ ದಿನಾಂಕವನ್ನು ಕಂಪನಿ ಘೋಷಿಸಿದೆ. ಜುಲೈ 17ರಂದು ಬಾರ್ಸಿಲೋನಾದಲ್ಲಿ ಗೆರಿಲ್ಲಾ 450 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

ಒಟ್ಟಾರೆ ಹಲವು ದಿನಗಳಿಂದ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಮೋಟಾರ್‌ಸೈಕಲ್ ಬಿಡುಗಡೆಯನ್ನು ಕೊನೆಗೂ ಘೋಷಿಸಿದ್ದಾರೆ. ಈ ಬಿಡುಗಡೆ ದಿನಾಂಕದ ಮಾಹಿತಿಯನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಲಾಲ್ ಮತ್ತು ಸಿಇಒ ಗೋವಿಂದರಾಜನ್ ಬಾಲಕೃಷ್ಣನ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

new-royal-enfield-guerrilla-450-will-be-launching-on-july-17

ಬೆಲೆಗಳ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿದ್ದರೂ, ರಾಯಲ್‌ಎನ್‌ಫೀಲ್ಡ್‌ನ ಹೊಸ ಹಿಮಾಲಯನ್ ಮೋಟಾರ್‌ಸೈಕಲ್ ಆಸುಪಾಸಿನಲ್ಲಿ ಬೆಲೆಗಳನ್ನು ನಿಗದಿಪಡಿಸಬಹುದು ಎನ್ನಲಾಗಿದೆ. ಈ ಹಿಂದೆ ಟೆಸ್ಟಿಂಗ್ ಮಾಡುವಾಗ ಹೊರಬಂದಿದ್ದ ಗೆರಿಲ್ಲಾ ಬೈಕ್‌ನ ಸ್ಪೈ ಶಾಟ್‌ಗಳು ಮೋಟಾರ್‌ಸೈಕಲ್‌ನ ಹಾರ್ಡ್ ವೇರ್ ಕುರಿತು ಸುಳಿವು ನೀಡಿವೆ. ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ರೌಂಡ್ LED ಹೆಡ್‌ಲೈಟ್, ಸಿಂಗಲ್‌-ಪೀಸ್ ಸೀಟ್‌ ಇರುವುದು ಲೀಕ್ ಆದ ಫೋಟೋಗಳು ಬಹಿರಂಗಪಡಿಸಿವೆ.

ಆದರೆ ಸಿಂಗಲ್-ಪಾಡ್ ಕನ್ಸೋಲ್ ಹಿಮಾಲಯನ್‌ನಲ್ಲಿ ಲಭ್ಯವಿರುವ ಅದೇ TFT ಡಿಸ್‌ಪ್ಲೇಗೆ ಹೋಲುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗೆಯೇ ಫ್ಯೂಯಲ್ ಟ್ಯಾಂಕ್ ಮತ್ತು ಹಿಂಭಾಗವು ಹಿಮಾಲಯನ್ 450 ಅನ್ನು ಹೋಲುತ್ತವೆ. ಆದರೆ ವೀಲ್‌ಗಳ ವಿಷಯದಲ್ಲಿ ಹಿಮಾಲಯನ್‌ನಂತಲ್ಲದೇ ಹೊಸ ಅಲಾಯ್ ಚಕ್ರಗಳು ಮತ್ತು ಟ್ಯೂಬ್ ಲೆಸ್ ಟೈರ್‌ಗಳನ್ನು ಹೊಂದಿದೆ.

new-royal-enfield-guerrilla-450-will-be-launching-on-july-17

ಹೆಚ್ಚುವರಿಯಾಗಿ, ಹಿಮಾಲಯನ್‌ಗೆ ಪವರ್‌ ನೀಡುವ ಅದೇ ಶೆರ್ಪಾ 450 ಎಂಜಿನ್ ಅನ್ನು ಬಳಸಲಾಗಿದೆ. ಮೂಲಗಳ ಪ್ರಕಾರ 452 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 40 ಬಿಹೆಚ್‌ಪಿ ಪವರ್ ಮತ್ತು 40 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎನ್ನಲಾಗಿದ್ದರೂ, ಗೆರಿಲ್ಲಾ 450 ನಲ್ಲಿನ ಎಂಜಿನ್‌ನ ಟ್ಯೂನಿಂಗ್ ಬಗ್ಗೆ ಇನ್ನೂ ದೃಢಪಡಿಸಬೇಕಾಗಿದೆ.

ನಿರೀಕ್ಷೆಗಳು: ಗೆರಿಲ್ಲಾ 450 ನಲ್ಲಿನ ಸಸ್ಪೆನ್ಶನ್ ಸೆಟಪ್ ಭಿನ್ನವಾಗಿರಬಹುದು, ಏಕೆಂದರೆ ಈ ಮಾದರಿಯು ಆಫ್-ರೋಡ್ ಆಗಿರದೇ ಹೆಚ್ಚು ರೋಡ್ ಆಧಾರಿತ ಬೈಕ್ ಆಗಿರುತ್ತದೆ. ಈ ಮಾದರಿಯು ಸಣ್ಣ 17-ಇಂಚಿನ ಟೈರ್‌ಗಳನ್ನು ಒಳಗೊಂಡಿರುತ್ತದೆ. ಈ ಬದಲಾವಣೆಗಳ ಜೊತೆ ಮುಂಬರುವ ಗೆರಿಲ್ಲಾ 450 ಬೈಕಿನ ಗ್ರೌಂಡ್ ಕ್ಲಿಯರೆನ್ಸ್ ಹಿಮಾಲಯನ್‌ಕ್ಕಿಂತ ಕಡಿಮೆಯಿರಬಹದು.

ಮುಂಬರುವ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕ್, ತನ್ನ ಅಣ್ಣನಾದ ಹಿಮಾಲಯನ್ ಬೈಕ್‌ನಂತೆಯೇ ಅದೇ ಚಾಸಿಸ್ ಅನ್ನು ಬಳಸುವ ಸಾಧ್ಯತೆಯಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನ ಅದೇ ಎಲೆಕ್ಟ್ರಾನಿಕ್ಸ್ ಸೂಟ್‌ನೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ನಲ್ಲಿ ಸಿಗುವ ಇಕೋ ಮತ್ತು ಪರ್ಫಾಮೆನ್ಸ್ ರೈಡಿಂಗ್ ಮೋಡ್‌ಗಳನ್ನು ಇದರಲ್ಲೂ ನೀಡುವ ಸಾಧ್ಯತೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 29, 2024, 11:43 [IST]
English summary
New royal enfield guerrilla 450 will be launching on july 17
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+