1 ರೂಪಾಯಿಗೆ ಬುಕ್ ಮಾಡಿ: 190 ಕಿ.ಮೀ ರೇಂಜ್ ನೀಡುವ ಸ್ವಿಚ್ CSR 762 ಬೈಕ್ ವಿಶೇಷತೆಗಳು

ಅಹಮದಾಬಾದ್ ಮೂಲದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್, ಸ್ವಿಚ್ ಗ್ರೂಪ್ ಹೊಸ ಸ್ವಿಚ್ ಸಿಎಸ್‌ಆರ್ 762 (Svitch CSR 762) ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸ್ವಿಚ್ ಸಿಎಸ್‌ಆರ್ 762 (Svitch CSR 762) ಎಲೆಕ್ಟ್ರಿಕ್ ಬೈಕ್ ಎಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.90 ಲಕ್ಷವಾಗಿದೆ.

ಈ ಬಹುನಿರೀಕ್ಷಿತ ಖರೀದಿದಾರರು ಸ್ವಿಚ್ ಸಿಎಸ್‌ಆರ್ 762 ಎಲೆಕ್ಟ್ರಿಕ್ ಬೈಕ್ ಕೇವಲ ರೂ.1 ಪಾವತಿಸಿ ಬುಕ್ಕಿಂಗ್ ಮಾಡಬಹುದು. ಕಂಪನಿಯ ವೆಬ್‌ಸೈಟ್ ಈಗಾಗಲೇ 12,000 ಆರ್ಡರ್‌ಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಈ ವರ್ಷದ ಆಗಸ್ಟ್‌ನಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ ಎಂದು ಕಂಪನಿಯು ಖಚಿತಪಡಿಸಿದೆ. ಸ್ವಿಚ್ ಕಂಪನಿಯು ಸ್ವಿಚ್ ಸಿಎಸ್‌ಆರ್ 762 ಬೈಕ್ ಅನ್ನು ಅನಾವರಣಗೊಳಿಸಿದ ಒಂದು ವರ್ಷದ ನಂತರ ಬಿಡುಗಡೆಗೊಳಿಸಿದೆ.

Svitch CSR 762

ಬ್ಯಾಟರಿ ಪ್ಯಾಕ್: ಈ ಹೊಸ ಸ್ವಿಚ್ ಸಿಎಸ್‌ಆರ್ 762 ಎಲೆಕ್ಟ್ರಿಕ್ ಬೈಕ್ 3 kW (4 bhp) PMS ಎಲೆಕ್ಟ್ರಿಕ್ ಮೋಟರ್‌ನಿಂದ ಬರುತ್ತದೆ. ಇದು 3,800 rpm ನಲ್ಲಿ 10 kW (13.4 bhp) ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಬೈಕ್ 165 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರೇಂಜ್ ಮತ್ತು ಟಾಪ್ ಸ್ಪೀಡ್: ಸ್ವಿಚ್ CSR 762 ಬೈ ಎರಡು 3.6 kWh ಲಿಥಿಯಂ-ಐಯಾನ್ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 190 ಕಿಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ಪಾದನಾ ಆವೃತ್ತಿಯನ್ನು ಘೋಷಿಸಿದಾಗಿನಿಂದ ರೇಂಜ್ 30 ಕಿಮೀ ಹೆಚ್ಚಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಸಿಂಗಲ್ ಚಾರ್ಜ್‌ನಲ್ಲಿ 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Svitch CSR 762

ವಿನ್ಯಾಸ: ಸ್ವಿಚ್ ಸಿಎಸ್‌ಆರ್ 762 ಬೈಕ್ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಮುಂಭಾಗದಲ್ಲಿ LED DRL ಅನ್ನು ಪಡೆಯುತ್ತದೆ. ಈ ಹೊಸ ಸ್ವಿಚ್ ಸಿಎಸ್‌ಆರ್ 762 ಎಲೆಕ್ಟ್ರಿಕ್ ಬೈಕಿನ ಮುಂಭಾಗದಲ್ಲಿ 40-ಲೀಟರ್ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ. ಸ್ವಿಚ್ ಸಿಎಸ್‌ಆರ್ 762 ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯಲ್ಲಿ ಇದೇ ರೀತಿಯ ಬೆಲೆಯಲ್ಲಿ ಲಭ್ಯವಿರುವ Tork Kratos R ಮತ್ತು Matter Aera ಎಲೆಕ್ಟ್ರಿಕ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಈ ಎಲೆಕ್ಟ್ರಿಕ್ ಬೈಕಿಗೆ ಲಿಕ್ವಿಡ್ ಕೂಲಿಂಗ್ ಅಗತ್ಯವಿಲ್ಲ ಮತ್ತು ಮೋಟಾರ್ ಮತ್ತು ಇತರ ನಿರ್ಣಾಯಕ ಯುನಿಟ್ ಗಳಿಗೆ ಏರ್ ಕೂಲಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಸ್ವಿಚ್ ಹೇಳುತ್ತಾರೆ. CSR 762 ಕುರಿತು ಸ್ವಿಚ್ ಗ್ರೂಪ್ನ ಎಂಡಿ ಮತ್ತು ಸಂಸ್ಥಾಪಕರಾದ ರಾಜ್‌ಕುಮಾರ್ ಪಟೇಲ್ ಅವರು ಮಾತನಾಡಿ, ಇದು ಸವಾರಿಗಿಂತಲೂ ಹೆಚ್ಚಿನ ಎಲೆಕ್ಟ್ರಿಕ್ ಬೈಕ್. ಇದು ವೇಗ ಮತ್ತು ಸೃಜನಶೀಲತೆಯ ಮೇಳವಾಗಿದೆ, ಇದು ಉತ್ಸಾಹ ಮತ್ತು ಬದ್ಧತೆಯಿಂದ ಉತ್ತೇಜಿಸಲ್ಪಟ್ಟಿದೆ.

Svitch CSR 762

CSR762 ಎಲೆಕ್ಟ್ರಿಕ್ ಬೈಕ್‌ನ ಹಿಂದಿರುವ ಸ್ವಿಚ್ ಗ್ರೂಪ್‌ನ ತತ್ವಶಾಸ್ತ್ರವು ನಾವೀನ್ಯತೆ, ಸುಸ್ಥಿರತೆ ಮತ್ತು ಬೈಕಿಂಗ್‌ನ ಉತ್ಸಾಹದಲ್ಲಿ ಬೇರೂರಿದೆ. ಎಲೆಕ್ಟ್ರಿಕ್ ಬೈಕಿಂಗ್ ಅನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು, ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಲು ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸವಾರಿ ಅನುಭವವನ್ನು ಹೆಚ್ಚಿಸಲು ಬ್ರ್ಯಾಂಡ್ ಬದ್ಧವಾಗಿದೆ ಮತ್ತು ಲೆಕ್ಟ್ರಿಕ್ ಬೈಕ್ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಸ್ವಿಚ್ (EOI) ಅಭಿಯಾನವನ್ನು ಪ್ರಾರಂಭಿಸಿದೆ ಮತ್ತು ನಿರೀಕ್ಷಿತ ಗ್ರಾಹಕರಿಗೆ ಪ್ರವೇಶವನ್ನು ಸುಧಾರಿಸಲು ಡೀಲರ್‌ಶಿಪ್‌ಗಳನ್ನು ತೆರೆಯಲು ಹೆಚ್ಚಿನ ಆಸಕ್ತಿಯ ನಗರಗಳನ್ನು ಆಯ್ಕೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಆರಂಭದಲ್ಲಿ ಅಹಮದಾಬಾದ್, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಕಂಪನಿಯು ಈ ಹಿಂದೆ ಘೋಷಿಸಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 20, 2024, 12:00 [IST]
English summary
New svitch csr 762 top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+