ಎರಡು ಮಾರುತಿ ಕಾರುಗಳ ಬೆಲೆಯ ಹೊಸ ಆಕರ್ಷಕ ಬೈಕ್ ವಿಶೇಷತೆಗಳೇನು?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles) ತನ್ನ ಡೇಟೋನಾ 660 ಬೈಕನ್ನು ಬಿಡುಗಡೆಗೊಳಿಸಲಾಗಿದೆ. ಈ ಹೊಸ ಟ್ರಯಂಫ್ ಡೇಟೋನಾ 660 (Triumph Daytona 660) ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.72 ಲಕ್ಷವಾಗಿದೆ. ಹೊಸ ಟ್ರಯಂಫ್ ಡೇಟೋನ್ 660 ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಬೈಕ್ ಅನ್ನು ಖರೀದಿಸಲು ಈಗ ಪ್ರಾರಂಭಿಕ ಟೋಕನ್ ರೂ. 25,000 ಆಗಿದೆ. ಈ ಬೈಕ್ ಈಗಾಗಲೇ ಅಧಿಕೃತ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಈ ಹೊಸ ಟ್ರಯಂಫ್ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎಂಜಿನ್: ಹೊಸ ಟ್ರಯಂಫ್ ಡೇಟೋನ್ 660 ಬೈಕಿನಲ್ಲಿ ಪರಿಚಿತ 660 cc ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11,250 rpm ನಲ್ಲಿ 95 PS ಪವರ್ ಮತ್ತು 69 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ನಂತೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

Triumph Daytona 660

ಸಸ್ಪೆಕ್ಷನ್: ಟ್ರಯಂಫ್ ಡೇಟೋನ್ 660 ಹೊಸ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಫೇರ್ಡ್ ಸೂಪರ್‌ಸ್ಪೋರ್ಟ್ ಬೈಕ್‌ನಲ್ಲಿ ಮುಂಭಾಗದಲ್ಲಿ ಶೋವಾ ಮೂಲದ 41 ಎಂಎಂ ಅಪ್ ಸೈಡ್ ಡೌನ್ ದೊಡ್ಡ ಪಿಸ್ಟನ್ ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದ ಪ್ರಿ ಲೋಡ್-ಹೊಂದಾಣಿಕೆ ಮೊನೊಶಾಕ್ ಸಸ್ಪೆನ್ಶನ್ ಅನ್ನು ಅಳವಡಿಸಲಾಗಿದೆ.

ಬ್ರೇಕಿಂಗ್ ಸಿಸ್ಟಂ: ಪ್ರಮುಖವಾಗಿಈ ಹೊಸ ಟ್ರಯಂಫ್ ಡೇಟೋನ್ 660 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಮುಂಭಾಗದಲ್ಲಿ ಟ್ವಿನ್ 310 ಎಂಎಂ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್‌ ಅನ್ನು ನೀಡಲಾಗಿದೆ.

Triumph Daytona 660

ವಿನ್ಯಾಸ ಮತ್ತು ಫೀಚರ್ಸ್: ಹೊಸ ಟ್ರಯಂಫ್ ಡೇಟೋನಾ 660 ಮಾದರಿಯ ಹಳೆಯ ಡೇಟೋನಾ 675 ನಿಂದ ಸ್ವಲ್ಪ ವಿನ್ಯಾಸದ ಸೂಚನೆಗಳನ್ನು ಎರವಲು ಪಡೆಯುತ್ತದೆ. ಇದು ಪಾರದರ್ಶಕ ವಿಂಡ್‌ಸ್ಕ್ರೀನ್‌ನೊಂದಿಗೆ ಸ್ಪ್ಲಿಟ್ LED ಹೆಡ್‌ಲೈಟ್ ಅನ್ನು ಪಡೆಯುತ್ತದೆ. ಈ ಡೇಟೋನಾ 660 ಬೈಕ್ ಹೆಚ್ಚು ಸ್ಪೋರ್ಟಿಯಾಗಿದೆ. ಈ ಹೊಸ ಬೈಕಿನಲ್ಲಿ TFT LCD ಡಿಸ್ಪ್ಲೇ ಹೊಂದಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದ್ದು ಅದು ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಮ್ ಹೊಂದಿದೆ.

ಹೆಚ್ಚುವರಿಯಾಗಿ ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ರೈಡ್-ಬೈ-ವೈರ್ ಥ್ರೊಟಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಇತ್ಯಾದಿಗಳನ್ನು ಒಳಗೊಂಡಿದೆ. ಈ ಟ್ರಯಂಫ್ ಡೇಟೋನ್ 660 ಸ್ನೋಡೋನಿಯಾ ವೈಟ್/ಸಫೈರ್ ಬ್ಲ್ಯಾಕ್, ಸ್ಯಾಟಿನ್ ಗ್ರಾನೈಟ್/ಸ್ಯಾಟಿನ್ ಜೆಟ್ ಬ್ಲಾಕ್ ಮತ್ತು ಕಾರ್ನಿವಲ್ ರೆಡ್/ಸಫೈರ್ ಬ್ಲ್ಯಾಕ್ ಎಂಬ ಮೂರು ಪೇಂಟ್ ಸ್ಕೀಮ್‌ಗಳಲ್ಲಿ ಮಾರಾಟವಾಗಲಿದೆ.

Triumph Daytona 660

ಈ ಬೈಕ್ ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯುತ್ತದೆ. ಈ ಹೊಸ ಬೈಕನ್ನು ಟ್ರೈಡೆಂಟ್ 660 ಮೇಲಿನ ಸ್ಥಾನದಲ್ಲಿ ಇರಿಸಲಾಗಿದೆ. ಟ್ರಯಂಫ್ ಡೇಟೋನಾ 660 ಬೈಕ್ ಸ್ಟೀಲ್ ಪರಿಮಿಟರ್ ಚಾಸಿಸ್ ಅನ್ನು ಹೊಂದಿದೆ. ಈ ಹೊಸ ಟ್ರಯಂಫ್ ಡೇಟೋನ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 650 ಮಾದರಿಗೆ ಪೈಪೋಟಿ ನೀಡುತ್ತದೆ.

ಹೊಸ ಟ್ರಯಂಫ್ ಡೇಟೋನ್ 660 ಬೈಕಿನಲ್ಲಿ17-ಇಂಚಿನ Y-ಆಕಾರದ ಕ್ಯಾಸ್ಟ್ ಅಲ್ಯೂಮಿನಿಯಂ ಐದು-ಸ್ಪೋಕ್ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳಲ್ಲಿ ಮುಂಭಾಗ 120/70 ಮತ್ತು ಹಿಂಭಾಗ 180/55 ರಬ್ಬರ್‌ನಲ್ಲಿ ಸುತ್ತುತ್ತದೆ. ಈ ಬೈಕ್ 810 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಟ್ರಯಂಫ್ ಡೇಟೋನಾ 660 ಹಳೆಯ ಡೇಟೋನಾ 675 ನಿಂದ ಸಾಕಷ್ಟು ಸ್ಫೂರ್ತಿ ಪಡೆಯುತ್ತದೆ ಮತ್ತು ಅದರ 660 cc ಕೌಂಟರ್‌ಪಾರ್ಟ್‌ಗಳಿಗಿಂತ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಹೊಂದಿದೆ.

Article Published On: Saturday, August 31, 2024, 8:30 [IST]
English summary
New triumph daytona 660 top things to know
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+