TVS: ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ ಬೈಕ್ ತೆಗೆದುಕೊಳ್ಳಬೇಕೇ.. ವಿಶೇಷತೆಗಳೇನು?
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಟಿವಿಎಸ್ ಮೋಟಾರ್ (TVS Motor) ಮನೆ ಮಾತಾಗಿದೆ. ಕಂಪನಿಯು ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ಬೆಲೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಬುಧವಾರವಷ್ಟೇ ಹೊಚ್ಚ ಹೊಸ 'ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್' ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದ್ದು, ಈ ಬೈಕ್ ಯುವ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲಿದೆ. ಇಲ್ಲಿ ರೇಸಿಂಗ್ ಎಡಿಷನ್ ವಿಶೇಷತೆಗಳ ಕುರಿತಂತೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಲೆ & ವಿನ್ಯಾಸ: ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ (TVS Apache RTR 160 Racing Edition) ಬೈಕ್ ಸ್ಪರ್ಧಾತ್ಮಕ ದರದಲ್ಲಿ ಖರೀದಿಗೆ ದೊರೆಯಲಿದ್ದು, ರೂ.1,28,720 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಂಪೂರ್ಣವಾಗಿ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಒಳಗೊಂಡಿದ್ದು, ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಟೈಲ್ ಸೆಕ್ಷನ್‌ನಲ್ಲಿ ರೆಡ್ & ಗ್ರೇ ಬಣ್ಣದ ಗೆರೆಗಳ ರಚನೆಯನ್ನು ಹೊಂದಿದೆ. ಅತ್ಯಾಕರ್ಷಕ 'ರೇಸಿಂಗ್ ಎಡಿಷನ್' ಲೋಗೋವನ್ನು ಪಡೆದಿದೆ.

ಕಾರ್ಯಕ್ಷಮತೆ: ಈ ಮೋಟಾರ್‌ಸೈಕಲ್ ಶಕ್ತಿಯುತ ಪವರ್‌ಟ್ರೇನ್ ಒಳಗೊಂಡಿದ್ದು, 159.7 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 15.82 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 13.85 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಕೂಡ ಇದೆ.
ವೈಶಿಷ್ಟ್ಯಗಳು: ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ ಬೈಕ್, ಯುವಕರನ್ನು ಸೆಳೆಯುವಂತಹ ಹಲವು ಅತ್ಯಾಧುನಿಕ ವೈಶಿಷ್ಟ್ಯ (ಫೀಚರ್)ಗಳನ್ನು ಹೊಂದಿದೆ. ಎಲ್‌ಸಿಡಿ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗ್ಲೈಡ್ ಥ್ರೂ ಟೆಕ್ನಾಲಜಿ, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್‌ನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್: ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸಲು ಈ ಮೋಟಾರ್‌ಸೈಕಲ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಡಿಸ್ಕ್ ಬ್ರೇಕ್‌ನ್ನು ಹೊಂದಿದೆ.
ರೈಡಿಂಗ್ ಮೋಡ್‌ಗಳು & ಟೈರ್‌ಗಳು: ಟಿವಿಎಸ್ ಅಪಾಚೆ ಆರ್‌ಟಿಆರ್ 160 ರೇಸಿಂಗ್ ಎಡಿಷನ್ ಬೈಕ್ ಸ್ಪೋರ್ಟ್, ಅರ್ಬನ್ ಹಾಗೂ ರೈನ್ ಎಂಬ ರೈಡಿಂಗ್ ಮೋಡ್‌ನ್ನು ಹೊಂದಿದೆ. ರಸ್ತೆಯಲ್ಲಿ ಚಾಲಕರಿಗೆ ಬಿಗಿಯಾದ ಹಿಡಿತ ಬರಲು ಟ್ಯೂಬ್‌ಲೆಸ್ ಟೈರ್‌ಗಳು ಹಾಗೂ ಕೆಂಪು (ರೆಡ್) ಬಣ್ಣದಲ್ಲಿರುವ 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಪ್ರತಿಸ್ಪರ್ಧಿ ಬೈಕ್‌ಗಳು: ಈ ಮೋಟಾರ್‌ಸೈಕಲ್‌ಗೆ ಬಜಾಜ್ ಪಲ್ಸರ್ ಎನ್150 ಮತ್ತು ಹೋಂಡಾ ಎಸ್‌ಪಿ160 ದೊಡ್ಡ ಎದುರಾಳಿಯಾಗಿದೆ. ನೂತನ ಪಲ್ಸರ್ ಎನ್150 ಬೈಕ್ ರೂ.1.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 48 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಹೋಂಡಾ ಎಸ್‌ಪಿ160 ಮೋಟಾರ್‌ಸೈಕಲ್ ರೂ.1.18 ಲಕ್ಷದಿಂದ ರೂ.1.22 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








