323KM ರೇಂಜ್: ರಾಕೆಟ್ ವೇಗದಲ್ಲಿ ಮಿಂಚಲಿರುವ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕಿನ ವಿಶೇಷತೆಗಳೇನು?
ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಅಲ್ಟ್ರಾವೈಲೆಟ್ ಆಟೋಮೋಟಿವ್ ತನ್ನ ಹೊಸ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕ್ ಅನ್ನು ಭರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯ ಎಕ್ಸ್ ಶೋರೂಂ ಪ್ರಕಾರ ರೂ.2,99,999 ಆಗಿದೆ.
ಮೊದಲ 1,000 ಗ್ರಾಹಕರು ಪರಿಚಯಾತ್ಮಕ ಬೆಲೆಗೆ ಬುಕ್ ಮಾಡಲು ಸಾಧ್ಯವಾಗುತ್ತದೆ. ಅಲ್ಟ್ರಾವೈಲೆಟ್ F77 ಮ್ಯಾಕ್ 2 ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕ್ ಸ್ಟ್ಯಾಂಡರ್ಡ್ ಮತ್ತು ರೆಕಾನ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಬಣ್ಣಗಳ ಆಯ್ಕೆ: ಹೊಸ ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ ಬೈಕ್ ಗಮನಾರ್ಹ ಕಾರ್ಯಕ್ಷಮತೆ, ಆಕರ್ಷಕ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಬೈಕ್ ಲೈಟಿಂಗ್ ಬ್ಲೂ, ಅಸ್ಟೈಡ್ ಗ್ರೇ, ಟರ್ಬೊ ರೆಡ್, ಆಫ್ಟರ್‌ಬರ್ನರ್ ಯೆಲ್ಲೋ, ಸ್ಟೆಲ್ತ್ ಗ್ರೇ, ಕಾಸ್ಮಿಕ್ ಬ್ಲ್ಯಾಕ್, ಪ್ಲಾಸ್ಮಾ ರೆಡ್, ಸೂಪರ್‌ಸಾನಿಕ್ ಸಿಲ್ವರ್ ಮತ್ತು ಸ್ಟೆಲ್ಲರ್ ವೈಟ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಅಲ್ಟ್ರಾವೈಲೆಟ್ F77 ಮಾದರಿಗೆ ಹೋಲಿಸಿದರೆ ಹೊಸ ಮ್ಯಾಕ್ 2 ಬೈಕಿನಲ್ಲಿ ಚಾರ್ಜಿಂಗ್ ಪೋರ್ಟ್ ಲಿಡ್ ಈಗ ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ, ಹಿಂದಿನ ಪ್ಲಾಸ್ಟಿಕ್ ಯುನಿಟ್ ಗಿಂತ ಭಿನ್ನವಾಗಿದೆ. ಇನ್ನು ಈ ಬೈಕಿನ ಮುಂಭಾಗದ ಫೋರ್ಕ್‌ಗಳಲ್ಲಿ F77 ಗ್ರಾಫಿಕ್ಸ್ ಅನ್ನು ಹೊಸ ಬಣ್ಣದೊಂದಿಗೆ ಸೇರಿಸಲಾಗಿದೆ. ಈ ಬೈಕಿನಲ್ಲಿ 110/70 ಮುಂಭಾಗ ಮತ್ತು 150/60 ಹಿಂಭಾಗದ ಟೈರ್‌ನೊಂದಿಗೆ 17-ಇಂಚಿನ ವ್ಹೀಲ್ ಹೊಂದಿದೆ.

ಫೀಚರ್ಸ್: ಈ ಎಲೆಕ್ಟ್ರಿಕ್ ಬೈಕಿನ ಫಿಚರ್ಸ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಎರಡೂ ರೂಪಾಂತರಗಳಲ್ಲಿ ಮೂರು ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಐದು ಇಂಚಿನ TFT, ಆಟೋ ಡಿಮ್ಮಿಂಗ್ ಲ್ಯಾಂಪ್ ಗಳು, ಹಿಲ್ ಹೋಲ್ಡ್, ABS ಮತ್ತು ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್. ಆದರೆ ರೆಕಾನ್ ರೂಪಾಂತರವು ನಾಲ್ಕು ಹಂತದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ.
ಮೋಟಾರ್: ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ 27kW ಮೋಟಾರ್ ಹೊಂದಿದ್ದರೆ, ರೆಕಾನ್ ರೂಪಾಂತರದಲ್ಲಿ 30kW ಮೋಟಾರ್ ಅನ್ನು ನೀಡಿದೆ. ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು 7.1kWh ಬ್ಯಾಟರಿ ಪ್ಯಾಕ್ ನೊಂದಿಗೆ 211 ಕಿ.ಮೀ ರೇಂಜ್ ಅನ್ನು ನೀಡಿದರೆ, ರೆಕಾನ್ ರೂಪಾಂತರದಲ್ಲಿ 10.3kWh ಬ್ಯಾಟರಿ ಪ್ಯಾಕ್ ಅನ್ನು ನೊಂದಿಗೆ 323 ಕಿ.ಮೀ ರೆಂಜ್ ಅನ್ನು ನೀಡುತ್ತದೆ.

ಸಸ್ಪೆಕ್ಷನ್ ಮತ್ತು ಬ್ರೇಕಿಂಗ್: ಅಲ್ಟ್ರಾವೈಲೆಟ್ F77 ಮ್ಯಾಕ್ 2 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 41mm USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಬೈಕಿನಲ್ಲಿ 320mm ಮುಂಭಾಗ ಮತ್ತು 230mm ಹಿಂಭಾಗದ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








