ಮಿಂಚಿನ ವೇಗದ ಎಲೆಕ್ಟ್ರಿಕ್ ಬೈಕ್ ಬೇಕೆಂದ ಖ್ಯಾತ ನಟ: ಬೆಂಗಳೂರು ಮೂಲದ ಬೈಕ್‌ಗೆ ಸೆಲೆಬ್ರಿಟಿಗಳು ಫಿಧಾ!
ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಅಲ್ಟ್ರಾವೈಲೆಟ್ ಆಟೋಮೋಟಿವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ ಈ ಕಂಪನಿ. ಸಖತ್ ಸ್ಪೀಡ್ ಮತ್ತು ಅಗ್ರೆಸಿವ್ ಲುಕ್ ಹಾಗು ಸಾಕಷ್ಟು ಫೀಚರ್‌ಗಳಿಂದ ಕೂಡಿದ ಈ ಬೈಕ್ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿದೆ.
ಈಗಾಗಲೇ ಈ ಬೈಕ್ ಅನ್ನು ಸಾಕಷ್ಟು ಸೆಲೆಬ್ರಿಟಿಗಳು ಖರೀದಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಆ ಪಟ್ಟಿಯಲ್ಲಿ ಈ ಖ್ಯಾತ ನಟನ ಹೆಸರು ಸಹ ಈ ಹಿಂದೆಯೇ ಸೇರ್ಪಡೆಯಾಗಿತ್ತು. ಚಾರ್ಲಿ ಮತ್ತು ಬೆಂಗಳೂರು ಡೇಸ್ ಖ್ಯಾತಿಯ ದುಲ್ಖರ್ ಸಲ್ಮಾನ್ ಇದೀಗ ಮೊನ್ನೆಯಷ್ಟೇ ಅಲ್ಟ್ರಾಮೈಲೆಟ್ ಕಂಪನಿ ಲಾಂಚ್ ಮಾಡಿದ ಹೊಸ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕ್ ಬೇಕೆಂದು ಪೋಸ್ಟ್ ಮಾಡಿದ್ದಾರೆ.

ನಟ ದುಲ್ಖರ್ ಸಲ್ಮಾನ್ ಈ ಕುರಿತಾದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ F77 ಬೈಕ್ ಖರೀದಿ ಮಾಡಿದ್ದ ಹಳೇಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಕೊಂಡಿರುವ ನಟ, ಈ ಬೈಕ್‌ನ ಇತರ ಚಿತ್ರಗಳನ್ನು ಸಹ ಶೇರ್ ಮಾಡಿದ್ದಾರೆ. ನಟನ ಈ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆಗಳು ಕಾಮೆಂಟ್ ಮತ್ತು ಲೈಕ್ಸ್ ರೂಪದಲ್ಲಿ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ. ಹೊಸ F77 ಬೈಕ್ ಅನ್ನು ನಟ ಕೆಲವು ದಿನಗಳಲ್ಲಿ ಖರೀದಿಸಲೂಬಹುದು.
ಇನ್ನು ಈ ಬೈಕ್ ಬಗ್ಗೆ ನೊಡುವುದಾದರೆ, ಅಲ್ಟ್ರಾವೈಲೆಟ್ ಆಟೋಮೋಟಿವ್ ತನ್ನ ಅಲ್ಟ್ರಾವೈಲೆಟ್ ಹೊಸ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ. ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯ ಎಕ್ಸ್ ಶೋರೂಂ ಪ್ರಕಾರ ರೂ.2,99,999 ಆಗಿದೆ.

ಮೊದಲ 1,000 ಗ್ರಾಹಕರು ಪರಿಚಯಾತ್ಮಕ ಬೆಲೆಗೆ ಬುಕ್ ಮಾಡಬಹುದಾಗಿದ್ದು, ಅಲ್ಟ್ರಾವೈಲೆಟ್ F77 ಮ್ಯಾಕ್ 2 ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕ್ ಸ್ಟ್ಯಾಂಡರ್ಡ್ ಮತ್ತು ರೆಕಾನ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.
ಈ ಎಲೆಕ್ಟ್ರಿಕ್ ಬೈಕಿನ ಫಿಚರ್ಸ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಎರಡೂ ರೂಪಾಂತರಗಳಲ್ಲಿ ಮೂರು ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಐದು ಇಂಚಿನ TFT, ಆಟೋ ಡಿಮ್ಮಿಂಗ್ ಲ್ಯಾಂಪ್ ಗಳು, ಹಿಲ್ ಹೋಲ್ಡ್, ABS ಮತ್ತು ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್. ಆದರೆ ರೆಕಾನ್ ರೂಪಾಂತರವು ನಾಲ್ಕು ಹಂತದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ.

ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ 27kW ಮೋಟಾರ್ ಹೊಂದಿದ್ದರೆ, ರೆಕಾನ್ ರೂಪಾಂತರದಲ್ಲಿ 30kW ಮೋಟಾರ್ ಅನ್ನು ನೀಡಿದೆ. ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು 7.1kWh ಬ್ಯಾಟರಿ ಪ್ಯಾಕ್ ನೊಂದಿಗೆ 211 ಕಿ.ಮೀ ರೇಂಜ್ ಅನ್ನು ನೀಡಿದರೆ, ರೆಕಾನ್ ರೂಪಾಂತರದಲ್ಲಿ 10.3kWh ಬ್ಯಾಟರಿ ಪ್ಯಾಕ್ ಅನ್ನು ನೊಂದಿಗೆ 323 ಕಿ.ಮೀ ರೆಂಜ್ ಅನ್ನು ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








