ಯುವಕರ ಹೃದಯ ಕದಿಯಲು ಆಕರ್ಷಕ ವಿನ್ಯಾಸದಲ್ಲಿ ಯಮಹಾ R15M ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ ಯಮಹಾ R15M ಬೈಕ್ ಕಾರ್ಬನ್ ಫೈಬರ್ (Yamaha R15M Carbon Fibre) ಪ್ಯಾಟರ್ನ್ ಗ್ರಾಫಿಕ್‌ನೊಂದಿಗೆ ಬಿಡುಗಡೆಯಾಗಿದೆ. ಯಮಹಾ R15M ಕಾರ್ಬನ್ ಫೈಬರ್ ಪ್ಯಾಟರ್ನ್ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.2.08 ಲಕ್ಷವಾಗಿದೆ. ಈ ಬಣ್ಣವು ಫುಲ್ ಕಾರ್ಬನ್ ಫೈಬರ್ R1M ನಿಂದ ಸ್ಫೂರ್ತಿ ಪಡೆದಿದೆ. ಕಾರ್ಬನ್ ಫೈಬರ್ ಮಾದರಿಯಲ್ಲಿ R15M ಮತ್ತು R1M ಎರಡನ್ನೂ ಈ ವರ್ಷದ ಆರಂಭದಲ್ಲಿ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು.

ಹೊಸ ಯಮಹಾ R15M ಕಾರ್ಬನ್ ಫೈಬರ್ ಪ್ಯಾಟರ್ನ್ ಮಾದರಿಯಲ್ಲಿ ಹೊಸ ಗ್ರಾಫಿಕ್ಸ್ ಪೌರಾಣಿಕ R1M ನ ಕಾರ್ಬನ್ ಬಾಡಿವರ್ಕ್‌ನಿಂದ ಪ್ರಭಾವವನ್ನು ಪಡೆಯುತ್ತದೆ. ಈ ಮಾದರಿಯ ಅಸ್ಸೆಂಟ್ ಗಳನ್ನು ಮುಂಭಾಗದ ಕೌಲ್, ಸೈಡ್ ಫೇರಿಂಗ್ ಮತ್ತು ಹಿಂಭಾಗದ ಸೈಡ್ ಪ್ಯಾನೆಲ್‌ಗಳಲ್ಲಿ ಕಾಣಬಹುದು. ಈ ಹೊಸ ಹೊಸ ಯಮಹಾ R15M ಬೈಕ್ ತನ್ನ ಸ್ಪೋರ್ಟಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ಬ್ಲ್ಯಾಕ್ ಫಿನಿಶ್ ಫೆಂಡರ್ ಅನ್ನು ಹೊಂದಿದೆ.

Yamaha R15M Carbon Fibre

ಇದರೊಂದಿಗೆ ಫ್ಯೂಯಲ್ ಟ್ಯಾಂಕ್‌ನಲ್ಲಿ ಹೊಸ ಡಿಕಾಲ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಕಾಂಟ್ರಾಸ್ಟ್ ಬ್ಲೂ ಬಣ್ಣದ ವ್ಹೀಲ್ ಗಳೊಂದಿಗೆ ಸೈಡ್ ಫೇರಿಂಗ್ ಅನ್ನು ಪಡೆಯುತ್ತದೆ. ಇನ್ನು ಈ ಹೊಸ ಯಮಹಾ R15M ಕಾರ್ಬನ್ ಫೈಬರ್ ಪ್ಯಾಟರ್ನ್ ಅನ್ನು ವಾಟರ್ ಡಿಪ್ಪಿಂಗ್ ತಂತ್ರಗಳನ್ನು ಬಳಸಿ ಮಾಡಲಾಗಿದೆ

2024ರ ಯಮಹಾ R15M ಕಾರ್ಬನ್ ಫೈಬರ್ ಪ್ಯಾಟರ್ನ್ ಮಾದರಿಯಲ್ಲಿ ಮ್ಯೂಸಿಕ್ ಮತ್ತು ವಾಲ್ಯೂಮ್ ಕಂಟ್ರೋಲ್ ಕಾರ್ಯಗಳ ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಅನ್ನು ಸಹ ಪಡೆಯುತ್ತದೆ. ಇದನ್ನು Android ಮತ್ತು iOS ಗಾಗಿ ಲಭ್ಯವಿರುವ ವೈ-ಕನೆಕ್ಟ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಈ ಬೈಕ್ ನೊಂದಿಗೆ ಕನೆಕ್ಟ್ ಮಾಡಲು ಸಿಂಕ್ ಮಾಡಲು ರೈಡರ್ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

Yamaha R15M Carbon Fibre

2024ರ ಯಮಹಾ R15M ಬೈಕಿನಲ್ಲಿ 155 cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 10,000 rpm ನಲ್ಲಿ 18.1 hp ಪವರ್ ಮತ್ತು 7,500 rpm ನಲ್ಲಿ 14.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ VVA ತಂತ್ರಜ್ಞಾನವನ್ನು ಒಳಗೊಂಡಿರುವ ಎಂಜಿನ್ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ ಮತ್ತು ಸ್ಲಿಪ್ಪರ್/ಅಸಿಸ್ಟ್ ಕ್ಲಚ್ ಸಹ ಲಭ್ಯವಿದೆ.

ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಐಶಿನ್ ಚಿಹಾನಾ ಅವರು ಮಾತನಾಡಿ, ಯಮಹಾ ಮೋಟಾರ್‌ಸೈಕಲ್‌ಗಳು ತಮ್ಮ ಅದ್ಭುರ ಕಾರ್ಯಕ್ಷಮತೆ, ಅತ್ಯಾಕರ್ಷಕ ಚುರುಕುತನ ಮತ್ತು ಗಮನ ಸೆಳೆಯುವ ಸ್ಪೋರ್ಟಿ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. 2008 ರಲ್ಲಿ ಬಿಡುಗಡೆಯಾದಗಿನಿಂದ R15 ಕ್ಲಾಸ್ ಪರ್ಫಾಮೆನ್ಸ್ ನೊಂದಿಗೆ ಥ್ರೋಬ್ರೆಡ್ ಯಮಹಾ ರೇಸಿಂಗ್ ಡಿಎನ್‌ಎಯೊಂದಿಗೆ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಸವಾರಿ ಮಾಡುವ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.

ಹೊಸ ಯಮಹಾ R15M ಬೈಕ್ ಬ್ಲೂಟೂತ್ ಕನೆಕ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ಕ್ವಿಕ್‌ಶಿಫ್ಟರ್‌ನೊಂದಿಗೆ ಎಲ್ಲಾ-ಡಿಜಿಟಲ್ ಬಣ್ಣದ TFT ಡಿಸ್ ಪ್ಲೇಯೊಂದಿಗೆ ಸಹ ಒಳಗೊಂಡಿದೆ. ನವೀಕರಿಸಿದ ಯಮಹಾ R15M ಕಾರ್ಬನ್ ಫೈಬರ್ ಮಾದರಿಯು ರೂ. 2,08,300 ಬೆಲೆಗೆ ಯಮಹಾದ ಬ್ಲೂ ಸ್ಕ್ವೇರ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 13, 2024, 16:31 [IST]
English summary
New yamaha r15m carbon fibre launched upgrades details
Read more on yamaha india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+