Dussehra offer: ಮೊದಲೇ ಅಗ್ಗದ ಬೆಲೆ... ಮತ್ತೇ 30 ಸಾವಿರ ಇಳಿಕೆ: 5-ವರ್ಷ ವಾರಂಟಿ, ಗೆದ್ದರೆ ಐಫೋನ್-15

Dussehra offer: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಓಬೆನ್ ಎಲೆಕ್ಟ್ರಿಕ್, ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12 ರವರೆಗೆ ತಮ್ಮ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿರುವ ಓಬೆನ್ ರೋರ್ ಅನ್ನು ಕೇವಲ ರೂ. 1,19,999 ಲಕ್ಷಕ್ಕೆ (ಎಕ್ಸ್ ಶೋರೂಂ) ಖರೀದಿಸುವ ಸುವರ್ಣವಕಾಶವನ್ನು ಒದಗಿಸಿದೆ. ಹೆಚ್ಚುವರಿಯಾಗಿ, ಪ್ರತಿ ಮೋಟಾರ್‌ಸೈಕಲ್ ಖರೀದಿಯ ಮೇಲೆ 5-ವರ್ಷದ ವಾರಂಟಿ ಮತ್ತು ಐಫೋನ್ 15, ಐಪಾಡ್ ಮಿನಿ ಮತ್ತು ಸೋನಿ ಹೆಡ್‌ಫೋನ್‌ಗಳನ್ನು ಗೆಲ್ಲುವ ಅವಕಾಶವನ್ನು ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿದೆ.

ಓಬೆನ್ ರೋರ್ ಮೂಲ ಬೆಲೆ 1,49,999 ರೂ.(ಎಕ್ಸ್ ಶೋರೂಂ) ಇದ್ದು, ಹೊಸ ಬೆಲೆ ಕಡಿತದಿಂದಾಗಿ 30,000 ಉಳಿತಾಯ ಮಾಡಬಹುದಾಗಿದೆ. ಇದರ ಜೊತೆಗೆ ದಸರಾ ಹಬ್ಬದ ಸಂಭ್ರಮವನ್ನು ಆಚರಿಸುವ ಸಲುವಾಗಿ, ಒಬೆನ್ ಎಲೆಕ್ಟ್ರಿಕ್ ತನ್ನ ಬೆಂಗಳೂರು, ದೆಹಲಿ ಮತ್ತು ಪುಣೆಯ ಶೋರೂಮ್‌ಗಳಲ್ಲಿ ವಿಶೇಷ ದಸರಾ ಧಮಾಲ್ ದಿನವನ್ನು ಆಯೋಜಿಸುತ್ತಿರುವುದಾಗಿ ಹೇಳಿದೆ.

oben-electric-dussehra-festive-campaign-up-to-60k-savings

ಈ ವಿಶೇಷ ಏಕದಿನ ಈವೆಂಟ್‌ಗಳಲ್ಲಿ ಗ್ರಾಹಕರಿಗೆ ಒಬೆನ್ ರೋರ್‌ನಲ್ಲಿ ರೂ. 60,000 ವರೆಗೆ ಉಳಿತಾಯ ಹಾಗೂ ರೂ. 89,999ಕ್ಕೆ ಇಳಿಸುವ ಅವಕಾಶ ನೀಡಲಿದೆ. ಈವೆಂಟ್‌ಗಳು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಶೋರೂಂನಲ್ಲಿ ಸೆಪ್ಟೆಂಬರ್ 29 ರಂದು, ದೆಹಲಿಯ ದ್ವಾರಕಾ ಶೋರೂಂನಲ್ಲಿ ಅಕ್ಟೋಬರ್ 2 ರಂದು ಮತ್ತು ಪುಣೆಯ ವಕಾಡ್ ಶೋರೂಂನಲ್ಲಿ ಅಕ್ಟೋಬರ್ 6 ರಂದು ನಡೆಯಲಿವೆ ಎಂದು ಕಂಪನಿ ತಿಳಿಸಿದೆ.

ಒಬೆನ್ ಎಲೆಕ್ಟ್ರಿಕ್‌ನ ಸಂಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರವಾಲ್ ಮಾತನಾಡಿ, "ನಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ತರಲು ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಇದಕ್ಕೆ ತಕ್ಕಂತೆ ದಸರಾ ಹಬ್ಬದ ಕೊಡುಗೆಯು ಭಾರತದ ಗ್ರಾಹಕರೊಂದಿಗೆ ಆಚರಿಸುವ ಮಾರ್ಗವಾಗಿದೆ. ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಸುಸ್ಥಿರತೆಯಲ್ಲಿ ನಮ್ಮ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಉತ್ತಮ ಆಯ್ಕೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ.

oben-electric-dussehra-festive-campaign-up-to-60k-savings

ಈ ಹಬ್ಬದ ಸೀಸನ್‌ನಲ್ಲಿ, ಒಬೆನ್ ಎಲೆಕ್ಟ್ರಿಕ್‌ನ ನವೀನ EV ಮೋಟಾರ್‌ಸೈಕಲ್‌ನ ವಿಶ್ವಾಸಾರ್ಹತೆ ಮತ್ತು ಗುಣಮಟ್ಟವನ್ನು ಹೆಚ್ಚಿನ ಗ್ರಾಹಕರು ಅನುಭವಿಸಬೇಕು. ಇದನ್ನು ಖಚಿತಪಡಿಸಿಕೊಳ್ಳಲು ನಾವು ಆಕರ್ಷಕ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಒದಗಿಸಲು ಉತ್ಸುಕರಾಗಿದ್ದೇವೆ ಎಂದು ಒಬೆನ್ ಎಲೆಕ್ಟ್ರಿಕ್‌ನ ಸಂಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರವಾಲ್ ಹೇಳಿದರು.

ಈ ಹಬ್ಬದ ಪ್ರಕಟಣೆಯು ಓಬೆನ್ ಎಲೆಕ್ಟ್ರಿಕ್‌ನ ವಿಸ್ತರಣೆ ಯೋಜನೆಗಳ ಭಾಗವಾಗಿದೆ. ಮುಂಬರುವ ತಿಂಗಳುಗಳಲ್ಲಿ ಪ್ರಮುಖ ಭಾರತೀಯ ನಗರಗಳಲ್ಲಿ 60 ಹೊಸ ಶೋರೂಮ್‌ಗಳನ್ನು ತೆರೆಯಲಿದ್ದೇವೆ. ಬೆಂಗಳೂರು, ಪುಣೆ, ದೆಹಲಿ ಮತ್ತು ಕೇರಳದಲ್ಲಿ ಬಲವಾದ ಉಪಸ್ಥಿತಿಯೊಂದಿಗೆ, ಓಬೆನ್ ಎಲೆಕ್ಟ್ರಿಕ್ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಲೇ ಇದೆ.

oben-electric-dussehra-festive-campaign-up-to-60k-savings

ಎಲೆಕ್ಟ್ರಿಕ್ ಮೊಬಿಲಿಟಿ ಪರಿಹಾರಗಳನ್ನು ಭಾರತದ ಮೂಲೆ ಮೂಲೆಗೆ ವಿಸ್ತರಿಸಬೇಕು. ಬ್ರ್ಯಾಂಡ್‌ನ LFP ಬ್ಯಾಟರಿ ತಂತ್ರಜ್ಞಾನವು ಉತ್ತಮ ಕಾರ್ಯಕ್ಷಮತೆ, ಶೇ50 ರಷ್ಟು ಹೆಚ್ಚಿನ ಶಾಖ ಪ್ರತಿರೋಧ ಮತ್ತು ವಿಸ್ತೃತ ಜೀವಿತಾವಧಿಯನ್ನು ನೀಡುವ ಮೂಲಕ ಇತರ ಇವಿ ಪ್ರತಿಸ್ಪರ್ಧಿಗಳಿಂದ ಪ್ರತ್ಯೇಕಿಸುತ್ತದೆ, ಭಾರತದ ಇವಿ ಕ್ರಾಂತಿಯಲ್ಲಿ ಒಬೆನ್ ವಿಶ್ವಾಸಾರ್ಹ ಸ್ಥಾನವನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 25, 2024, 19:21 [IST]
English summary
Oben electric dussehra festive campaign up to 60k savings
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+