ನವೆಂಬರ್ 7 ರಂದು ಹೊಸ ಸಿಟಿ ಬೈಕ್ ಬಿಡುಗಡೆಗೆ ಸಜ್ಜು: ಗೇಮ್-ಚೇಂಜರ್ ಆಗಲಿದೆ?
ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಿಕ್ ವಾಹನ ತಯಾರಕರಲ್ಲಿ ಒಂದಾದ ಒಬೆನ್ ಎಲೆಕ್ಟ್ರಿಕ್' ತನ್ನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ Rorr EZ ನ ಅತ್ಯಾಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು 2024 ರ ನವೆಂಬರ್ 7 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದ್ದು, ನಿತ್ಯ ಓಡಾಟಕ್ಕಾಗಿ (ಡೈಲಿ ಕಮ್ಯುಟರ್) ಮೋಟಾರ್‌ಸೈಕಲ್ ಅನ್ನು ನಿರ್ಮಿಸಲಾಗಿದೆ. ಹೆಚ್ಚಿನ ವಿವರಗಳು ಮುಚ್ಚಿಡಲಾಗಿದ್ದು, Rorr EZ ಮೋಟಾರ್‌ಸೈಕಲ್ ಅನುಕೂಲತೆ, ವಿನ್ಯಾಸ, ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ನೀಡುವ ನಿರೀಕ್ಷೆಯಿದೆ.
Rorr EZ ನೊಂದಿಗೆ, ಒಬೆನ್ ಎಲೆಕ್ಟ್ರಿಕ್ ದೈನಂದಿನ ಪ್ರಯಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. EZ ಅತ್ಯಾಧುನಿಕ ಪೇಟೆಂಟ್ ಪಡೆದ ಉನ್ನತ-ಕಾರ್ಯಕ್ಷಮತೆಯ LFP ಬ್ಯಾಟರಿ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದು ಭಾರತದ ವೈವಿಧ್ಯಮಯ ಹವಾಮಾನದಲ್ಲಿ ಅದರ ಅಸಾಧಾರಣ ಶಾಖ ಪ್ರತಿರೋಧ (Heat resistance), ದೀರ್ಘ ಬಾಳಿಕೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಒಬೆನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಎಲ್‌ಎಫ್‌ಪಿ ಕೆಮಿಸ್ಟ್ರಿ ಬ್ಯಾಟರಿಗಳನ್ನು ಪ್ರವರ್ತಕಗೊಳಿಸುವಲ್ಲಿ ಕಂಪನಿಯು ತನ್ನ ಹೆಜ್ಜೆಯನ್ನು ಮುನ್ನಡೆಸಿದೆ, ಬೈಕ್‌ಗಳು ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಉಳಿಸಿಕೊಂಡು ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತವೆ ಎಂದು ಖಚಿತಪಡಿಸಿದೆ. ಮುಂಬರುವ ಎಲ್ಲಾ ಮೋಟಾರ್‌ಸೈಕಲ್‌ಗಳು ಸಹ ಇದೇ ರೀತಿಯ ವಿಶ್ವಾಸಾರ್ಹತರಯನ್ನು ಹೊಂದಿರುತ್ತವೆ ಎಂದು ಕಂಪನಿ ಹೇಳಿದೆ.
R&D ನಿಂದ ಬ್ಯಾಟರಿಗಳು, ಮೋಟಾರ್‌ಗಳು, ವಾಹನ ನಿಯಂತ್ರಣ ಘಟಕಗಳು ಮತ್ತು ವೇಗದ ಚಾರ್ಜರ್‌ಗಳಂತಹ ನಿರ್ಣಾಯಕ ಘಟಕಗಳನ್ನು ತಯಾರಿಸುವುದರಿಂದ ಬ್ರ್ಯಾಂಡ್‌ನ ಸಂಪೂರ್ಣ ಆಂತರಿಕ ವಿಧಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಿಖರತೆ, ಗುಣಮಟ್ಟ ಮತ್ತು ಮಾರುಕಟ್ಟೆ ಬದಲಾವಣೆಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ಖಚಿತಪಡಿಸುತ್ತದೆ. ಜೊತೆಗೆ, ಒಬೆನ್ ಕೇರ್ ಮಾರಾಟದ ನಂತರದ ಸಮಗ್ರ ಬೆಂಬಲವನ್ನು ಒದಗಿಸುವುದರಿಂದ, ಗ್ರಾಹಕರ ಮಾಲೀಕತ್ವದ ಅನುಭವ ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.

ಕಂಪನಿಯ ಬಗ್ಗೆ: ಓಬೆನ್ ಎಲೆಕ್ಟ್ರಿಕ್ ಸ್ವದೇಶಿ ಕಂಪನಿಯನ್ನು ಆಗಸ್ಟ್ 2020 ರಲ್ಲಿ ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮತ್ತು ಅದರ ನಿರ್ಣಾಯಕ EV ಘಟಕಗಳನ್ನು ವಿನ್ಯಾಸಗೊಳಿಸುವುದು, ಅಭಿವೃದ್ಧಿಪಡಿಸುವುದು ಮತ್ತು ತಯಾರಿಸುವಲ್ಲಿ ಪರಿಣತಿ ಹೊಂದಿದೆ. 25 ವರ್ಷಗಳ ಸಾಮೂಹಿಕ ಅನುಭವವನ್ನು ಹೊಂದಿರುವ ತಂತ್ರಜ್ಞರ ತಂಡದೊಂದಿಗೆ, ಒಬೆನ್ ಎಲೆಕ್ಟ್ರಿಕ್ "ವಿಶ್ವಕ್ಕಾಗಿ ಭಾರತದಲ್ಲಿ ವಿನ್ಯಾಸ"ದ ಮೇಲೆ ಕೇಂದ್ರೀಕರಿಸಿರುವುದಾಗಿ ಹೇಳಿಕೊಂಡಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಲಯವನ್ನು ಪರಿವರ್ತಿಸುವಲ್ಲಿ ಕಂಪನಿಯು ಶ್ರಮಿಸುತ್ತಿದೆ. ಓಬೆನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಎಲ್‌ಎಫ್‌ಪಿಯಂತಹ ಸುಧಾರಿತ ಬ್ಯಾಟರಿ ರಸಾಯನಶಾಸ್ತ್ರದ ಬಳಕೆಯೊಂದಿಗೆ, ವ್ಯಾಪಕವಾಗಿ ಬಳಸಲಾಗುವ ಇತರ ಬ್ಯಾಟರಿ ರಸಾಯನಶಾಸ್ತ್ರಗಳಿಗೆ ಹೋಲಿಸಿದರೆ ವರ್ಧಿತ ಸುರಕ್ಷತೆ, ದೀರ್ಘ ಶ್ರೇಣಿ ಮತ್ತು ಕ್ಲೀನರ್ ಕಾರ್ಯಾಚರಣೆಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ತಂತ್ರಜ್ಞಾನ ಮತ್ತು EV ಘಟಕಗಳಿಗಾಗಿ 25 ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಕಂಪನಿ ಹೊಂದಿದೆ.
ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಓಬೆನ್ ಎಲೆಕ್ಟ್ರಿಕ್ ಭಾರತದಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಪ್ರಮುಖರಾಗಿ ಗುರ್ತಿಸಿಕೊಂಡಿದೆ. ಪ್ರಸ್ತುತ ಸೀಮಿತ ಸ್ಪರ್ಧೆಯೊಂದಿಗೆ, ಕಂಪನಿಯು ಜಾಗತಿಕವಾಗಿ ಅತಿದೊಡ್ಡ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ OEM ಆಗುವ ಗುರಿಯನ್ನು ಹೊಂದಿದೆ. ರೈಡರ್‌ಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಜೊತೆಗೆ ಅತ್ಯಾಧುನಿಕ ಎಲೆಕ್ಟ್ರಿಕ್ ಪರಿಹಾರಗಳನ್ನು ಒದಗಿಸುವ ಮೂಲಕ ಉದ್ಯಮವನ್ನು ಕ್ರಾಂತಿಗೊಳಿಸುವುದು ನಮ್ಮ ದೃಷ್ಟಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








