ಬೆಲೆ ರೂ. 69 ಸಾವಿರ: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ನಿಮ್ಮ ಆದ್ಯತೆಗಳನ್ನು ಪೂರೈಸಬಹುದು!
ಮುಂಬೈ ಮೂಲದ ಒಡಿಸ್ಸಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯು ಒಂದು ಹೈಸ್ಪೀಡ್ ಇವಿ ಸ್ಕೂಟರ್ ಜೊತೆಗೆ ಕಡಿಮೆ ವೇಗದ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಆರಂಭಿಕ ಬೆಲೆಯು ರೂ. 69 ಸಾವಿರವಿದ್ದು, ಈ ಎರಡೂ ಸ್ಕೂಟರ್‌ಗಳ ಫೀಚರ್ಸ್ ಹಾಗೂ ರೇಂಜ್ ಕುರಿತ ಮಾಹಿತಿಯನ್ನು ಇಲ್ಲಿ ನೋಡೋಣ.
ಒಡಿಸ್ಸಿ ಕಂಪನಿಯು ಕಳೆದ ವರ್ಷ ವಾಡೆರ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು ಘೋಷಿಸಿದ ನಂತರ ಈಗ ಈ ಎರಡೂ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಹೈಸ್ಪೀಡ್ ಇವಿಯು 'ಒಡಿಸ್ಸಿ ಸ್ನ್ಯಾಪ್' ಆಗಿದ್ದು ಇದರ ಬೆಲೆಯು 79,999 ರೂ., ಮತ್ತೊಂದು 'ಒಡಿಸ್ಸಿ ಇ2' ಇದರ ಬೆಲೆಯು ಇದರ 69,999 ರೂ. ಆಗಿದೆ. ಎಲ್ಲಾ ಬೆಲೆಗಳು ಮುಂಬೈನ ಎಕ್ಸ್ ಶೋರೂಂ ದರಗಳಾಗಿವೆ. ಈ ಸ್ಕೂಟರ್‌ಗಳು ಭಾರತೀಯ ಮಧ್ಯಮ ಹಾಗೂ ಬಡ ಕುಟುಂಬಗಳ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ವಿಶೇಷತೆಗಳು: ಸ್ನಾಪ್ ಇವಿ ವಾಟರ್ ಪ್ರೂಫ್ ಐಪಿ 67 ರೇಟೆಡ್ ಮೋಟಾರ್, ಎಐಎಸ್ 156 ಪ್ರಮಾಣೀಕೃತ ಎಲ್‌ಎಫ್‌ಟಿ ಬ್ಯಾಟರಿ ಮತ್ತು ಕ್ಯಾನ್ ಆನ್ ಡಿಸ್ಪ್ಲೇಯನ್ನು ಹೊಂದಿದೆ. 2000 - ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಹೋಂದಿರುವ ಒಡಿಸ್ಸಿ ಸ್ನಾಪ್ ಇವಿ ಸ್ಕೂಟರ್, ಗಂಟೆಗೆ 60 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದೆ. ಹಾಗೆಯೇ ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಸ್ಕೂಟರ್ ಅನ್ನು ಚಾರ್ಜ್ ಮಾಡಬಹುದಾಗಿದ್ದು, 105 ಕಿ.ಮೀ ರೇಂಜ್ ಹೊಂದಿದೆ.
ಇನ್ನು ಒಡಿಸ್ಸಿ ಇ2 ಕಡಿಮೆ ವೇಗದ ಸ್ಕೂಟರ್ ವಿಚಾರಕ್ಕೆ ಬಂದರೆ, ಇದು 250 ವ್ಯಾಟ್ ಮೋಟಾರ್ ಹೊಂದಿದ್ದು, ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಇದು ಕೂಡ ನಾಲ್ಕು ಗಂಟೆಗಳ ಚಾರ್ಜಿಂಗ್ ಸಮಯವನ್ನು ಹೊಂದಿದ್ದು, ಇದನ್ನು ಓಡಿಸಲು ಡಿಎಲ್ ಬೇಕಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಎರಡೂ ಸ್ಕೂಟರ್ ಬ್ಯಾಟರಿ ವಿವರಗಳನ್ನು ನಾವು ಈ ಡಿಸ್ಪ್ಲೇನಲ್ಲಿ ನೋಡಬಹುದು, ಹಾಗೆಯೇ ಇದು ಕ್ರೂಸ್ ಕಂಟ್ರೋಲ್ ಜೊತೆಗೆ ಬರುತ್ತದೆ. ಎಂಟ್ರಿ ಲೆವಲ್ ಇ-ಸ್ಕೂಟರ್ ವಿಭಾಗದಲ್ಲಿ ಇದು ಓಲಾ ಎಸ್-1 ಎಕ್ಸ್, ಓಕಿನಾವಾ ರಿಡ್ಜ್ ಸೇರಿದಂತೆ ಹಲವು ಇವಿಗಳೊಂದಿಗೆ ಸ್ಪರ್ಧಿಸುತ್ತದೆ. ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಐಕ್ಯೂಬ್ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿವೆ. ಇದೀಗ ಒಡಿಸ್ಸಿ ಕಂಪನಿಯ ಈ ಎರಡೂ ಸ್ಕೂಟರ್‌ಗಳು ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಯಾವ ಮಟ್ಟಿಗೆ ಗ್ರಾಹಕರನ್ನು ಸೆಳಯಲಿವೆ ಕಾದುನೋಡಬೇಕಿದೆ. ಬೆಲೆ ಕಡಿಮೆ ಇವೆಯಾದರೂ ಅದಕ್ಕೆ ತಕ್ಕಂತೆ ಇನ್ನೂ ಕೊಂಚ ವೈಶಿಷ್ಟ್ಯಗಳನ್ನು ನೀಡಬಹುದಾಗಿತ್ತು.
ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ ಕುರಿತು ಸಿಇಒ 'ನೆಮಿನ್ ವೋರಾ' ಮಾತನಾಡಿ, ಒಡಿಸ್ಸಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯು ಗ್ರಾಹಕರನ್ನು ಕಾರ್ಬನ್ ಹೊರಸೂಸುವ ವಾಹನಗಳಿಂದ ಹಸಿರು ವಾತಾವರಣಕ್ಕೆ ಕೊಡುಗೆ ನೀಡುವ ಎಲೆಕ್ಟ್ರಿಕ್ ವಾಹನಗಳೆಡೆ ಪರಿವರ್ತಿಸುವ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಎರಡೂ ಇವಿ ಸ್ಕೂಟರ್‌ಗಳಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಈ ಎರಡೂ ಸ್ಕೂಟರ್‌ಗಳು ಯುವಕರನ್ನು ಹೊರತುಪಡಿಸಿ ಮಹಿಳೆಯರು ಹಾಗೂ ವಯಸ್ಕ ಪುರುಷರಿಗೆ ಹೆಚ್ಚು ಇಷ್ಟವಾಗಬಹುದು. ಸೀಮಿತ ವೇಗ, ವೈಶಿಷ್ಟ್ಯಗಳು, ಅಗ್ಗದ ಬೆಲೆಯು ಸ್ಕೂಟರ್ ಖರೀದಿದಾರರನ್ನು ಸೆಳೆಯುವ ನಿರೀಕ್ಷೆಗಳಿವೆ. ಈ ಎರಡೂ ಸ್ಕೂಟರ್ ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications