ಮೊದಲೇ ಕಡಿಮೆ ಬೆಲೆ ಮತ್ತೆ ರಿಯಾಯಿತಿ ಘೋಷಣೆ: 31,000 ರೂ.ವರೆಗೆ ಬೆಲೆ ಇಳಿಕೆ!

ಒಕಾಯಾ ಎಲೆಕ್ಟ್ರಿಕ್ ಕಂಪನಿಯು ಆಗಸ್ಟ್ ತಿಂಗಳಲ್ಲಿ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಕಂಪನಿಯು ಸೀಮಿತ ಅವಧಿಗೆ ಕಡಿಮೆ ಬೆಲೆಗಳಲ್ಲಿ ತನ್ನ ಸ್ಕೂಟರ್‌ಗಳನ್ನು ನೀಡುತ್ತಿದ್ದು, ಗ್ರಾಹಕರು ಯಾವುದೇ ಸ್ಕೂಟರ್ ಅನ್ನು ಕೇವಲ ಒಂದು ರೂ. ಪಾವತಿಸಿ ಬುಕ್ ಮಾಡಿಕೊಳ್ಳಬಹುದು. ಹಾಗೆಯೇ ಸ್ಟಾಕ್ ಇರುವವರೆಗೆ ಈ ರಿಯಾಯಿತಿಗಳು ಮಾನ್ಯವಾಗಿರುತ್ತವೆ ಎಂದು ಕಂಪನಿ ಹೇಳಿದೆ. ಅಂದಹಾಗೆ ರಿಯಾಯಿತಿಯು ಬರೋಬ್ಬರಿ 31,000 ರೂ. ಘೋಷಿಸಲಾಗಿದೆ. ಕಂಪನಿ ನೀಡುತ್ತಿರುವ ಎಲ್ಲಾ ಸ್ಕೂಟರ್‌ಗಳು ಹಾಗು ಅವುಗಳಿಗಿರುವ ರಿಯಾಯಿತಿಯನ್ನು ವಿವರವಾಗಿ ತಿಳಿಯೋಣ.

ಒಕಾಯಾ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯು ತನ್ನ ಸರಣಿಯಲ್ಲಿ ಬೇಸ್‌ ಮಾಡಲ್ ಆಗಿ ಫ್ರೀಡಂ ಇ-ಸ್ಕೂಟರ್ ಅನ್ನು ನೀಡುತ್ತಿದೆ. ರಿಯಾಯಿತಿ ಪಡೆದ ನಂತರ ಇದರ ಬೆಲೆಯು 74,899 ರೂ.ನಿಂದ (ಎಕ್ಸ್‌ ಶೂರೂಂ) ಪ್ರಾರಂಭವಾಗುತ್ತದೆ. ಹಾಗೆಯೇ ಕಂಪನಿಯ ಟಾಪ್ ಮಾದರಿಯಾದ ಮೋಟೋಫಾಸ್ಟ್ ಬೆಲೆಯು 1.29 ಲಕ್ಷ ರೂ.(ಎಕ್ಸ್‌ ಶೂರೂಂ) ಇದೆ. ಈ ಬೆಲೆಗಳ ನಡುವಿನಲ್ಲಿ ಕಂಪನಿಯು 7 ಸ್ಕೂಟರ್‌ಗಳನ್ನು ನೀಡುತ್ತಿದ್ದು, ಇಎಂಐ 2,999 ರೂ.ಗಳಿಂದ ಆರಂಭವಾಗುತ್ತದೆ.

okaya-electric-announces-price-drop-on-across-e-scooter-range

ಯಾವ ಸ್ಕೂಟರ್ ಮೇಲೆ ಎಷ್ಟು ರಿಯಾಯಿತಿ?: ಒಕಾಯಾ ಮೊಟೊಫಾಸ್ಟ್ ಈ ಹಿಂದೆ 1.54 ಲಕ್ಷ ರೂ. ಬೆಲೆಯಿತ್ತು. ರಿಯಾಯಿತಿ ಬಳಿಕ 1.29 ಲಕ್ಷ ರೂ.ಗೆ ಬೆಲೆ ಇಳಿಕೆಯಾಗಿದೆ. ಒಕಾಯಾ ಫಾಸ್ಟ್‌ ಎಫ್‌3 ಬೆಲೆಯು 1.34 ಲಕ್ಷ ರೂ.ನಿಂದ 1.09 ಲಕ್ಷ ರೂ., ಒಕಾಯಾ ಫಾಸ್ಟ್‌ ಎಫ್‌4 ಬೆಲೆಯು 1.50 ಲಕ್ಷ ರೂ.ನಿಂದ 1.19 ಲಕ್ಷ ರೂ.ಗೆ ಇಳಿಕೆಯಾಗಿದೆ. ಎಲ್ಲವೂ ಎಕ್ಸ್‌ ಶೋರೂಂ ಬೆಲೆಗಳು.

ಹಾಗೆಯೇ ಒಕಾಯಾ ಫಾಸ್ಟ್‌ ಎಫ್‌2ಬಿ ಬೆಲೆಯು 1.09 ಲಕ್ಷ ರೂ.ನಿಂದ 94,998 ಸಾವಿರ ರೂ., ಒಕಾಯಾ ಫಾಸ್ಟ್‌ ಎಫ್‌2ಟಿ ಬೆಲೆಯು 1.05 ಲಕ್ಷ ರೂ.ನಿಂದ 94,998 ಸಾವಿರ ರೂ., ಒಕಾಯಾ ಫಾಸ್ಟ್‌ ಎಫ್‌2ಎಫ್ ಬೆಲೆಯು 87,802 ಸಾವಿರ ರೂ.ನಿಂದ 83,999 ಸಾವಿರ ರೂ., ಒಕಾಯಾ ಫ್ರೀಡಂ ಬೆಲೆಯು 78,557 ಸಾವಿರ ರೂ.ನಿಂದ 74,899 ರೂ.ಗೆ ಬೆಲೆಗಳು ಇಳಿಕೆಯಾಗಿವೆ.

okaya-electric-announces-price-drop-on-across-e-scooter-range

ಕಂಪನಿಯ ಪ್ರೀಮಿಯಂ ಮಾಡಲ್‌ಗೆ ಯಾವುದೆ ರಿಯಾಯಿತಿ ಇಲ್ಲ: ಕಂಪನಿಯು ಈ ಎಲ್ಲಾ ಸ್ಕೂಟರ್‌ಗಳ ಜೊತೆಗೆ ಮತ್ತೊಂದು ಪ್ರೀಮಿಯಂ ಮಾಡಲ್ ಹೊಂದಿದೆ. ಫೆರಾಟೋ ಡಿಸ್ಟ್ರಪ್ಟರ್ ಎಂಬ ಸ್ಕೂಟರ್ ಟಾಪ್ ವೇರಿಯೆಂಟ್ ಆಗಿದ್ದು, ಹಲವು ಫೀಚರ್‌ಗಳನ್ನು ಹೊಂದಿಗೆ ಇದಕ್ಕೆ ಯಾವುದೆ ರೀಯಾಯಿತಿ ನೀಡಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಈ ಸ್ಕೂಟರ್ ಬೆಲೆಯು 1.6 ಲಕ್ಷ ರೂ. (ಎಕ್ಸ್‌ ಶೂರೂಂ) ಇದೆ. ಈ ಸ್ಕೂಟರ್ ಪಿಎಂಎಸ್ ಮೋಟರ್ ಹೊಂದಿದ್ದು, 6.37Kw (8.54 ಹೆಚ್‌ಪಿ) ಗರಿಷ್ಟ ಪವರ್ ಹೊರಹಾಕುತ್ತದೆ. ಹಾಗೆಯೇ ಈ ಪವರ್‌ಫುಲ್‌ ಮೋಟರ್‌ನೊಂದಿಗೆ ಸ್ಕೂಟರ್ 95 ಕಿ.ಮೀ ಟಾಪ್‌ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

okaya-electric-announces-price-drop-on-across-e-scooter-range

ಈ ಸ್ಕೂಟರ್‌ನಲ್ಲಿ ಇಕೊ, ಸಿಟಿ, ಸ್ಪೋರ್ಟ್ ಎಂಬ ರೈಡ್‌ಮೋಡ್‌ಗಳು ಕೂಡ ಇವೆ. ದೊಡ್ಡ 3.97Kw ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಕೂಟರ್ ಒಮ್ಮೆ ಚಾರ್ಜ್‌ ಮಾಡಿದ್ರೆ 129 ಕಿ.ಮೀ ಓಡಬಲ್ಲದು. ಫೀಚರ್‌ಗಳ ವಿಷಯದಲ್ಲೂ ರಾಜಿಯಾಗದೇ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಕಾರಣ ಬೆಲೆಗೆ ತಕ್ಕ ಮೌಲ್ಯವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 19, 2024, 11:43 [IST]
English summary
Okaya electric announces price drop on across e scooter range
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+