Ola: ಓಲಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ! ಅದ್ಬುತ ಡಿಸೈನ್, ವಿಶೇಷತೆಗಳೇನು?

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್ ವಿಭಾಗದಿಂದ ಈಗ ಮೋಟಾರ್‌ಸೈಕಲ್ ವಿಭಾಗವನ್ನು ಆಳಲು ಓಲಾ ಎಲೆಕ್ಟ್ರಿಕ್ ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ ಓಲಾ ಎಲೆಕ್ಟ್ರಿಕ್ 2026ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಆರಂಭಿಕ ಬಿಡುಗಡೆಯು ದೊಡ್ಡ ಯೋಜನೆಯ ಮೊದಲ ಹೆಜ್ಜೆಯನ್ನು ಸೂಚಿಸುತ್ತಿದೆ, ಏಕೆಂದರೆ ಓಲಾ ಎಲೆಕ್ಟ್ರಿಕ್ ದೀರ್ಘಾವಧಿಯಲ್ಲಿ ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಸದ್ಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಕೆಲವು ಸ್ಟಾರ್ಟ್‌ಅಪ್ ಕಂಪನಿಗಳಿಂದ ಸೀಮಿತ ಆಯ್ಕೆಗಳೊಂದಿಗೆ ಮಾತ್ರ ಇವಿ ಬೈಕ್‌ಗಳು ಸಿಗುತ್ತಿವೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಉತ್ತಮ ಮಾರಾಟದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿರುವ ಓಲಾ ಕಂಪನಿಯು ಮೋಟಾರ್‌ಸೈಕಲ್ ವಿಭಾಗಕ್ಕೆ ಎಂಟ್ರಿ ಕೊಡಲು ಇದು ಸರಿಯಾದ ಸಮಯವಾಗಿದೆ.

ola-electric-motorcycle-launch-date-revealed

ಈ ಹಿಂದೆ ಕಂಪನಿಯು ಓಲಾ ಕ್ರೂಸರ್, ಓಲಾ ಅಡ್ವೆಂಚರ್, ಓಲಾ ರೋಡ್ ಸ್ಟರ್ ಮತ್ತು ಓಲಾ ಡೈಮಂಡ್ ಹೆಡ್ ಎಂಬ ನಾಲ್ಕು ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳನ್ನು ಅನಾವರಣಗೊಳಿಸಿತ್ತು. ಕಳೆದ ವರ್ಷ ಎಂ 1 ಸೈಬರ್ ರೇಸರ್ ಪರಿಕಲ್ಪನೆಯ (ಕಾನ್ಸೆಪ್ಟ್ ಮಾಡಲ್) ಮಾಡೆಲ್‌ ಅನ್ನು ಅನಾವರಣಗೊಳಿಸಿದ ನಂತರ ಓಲಾ ರೋಡ್‌ಸ್ಟರ್‌ಗಾಗಿ ಇತ್ತೀಚೆಗೆ ಪೇಟೆಂಟ್ ಫೈಲಿಂಗ್ ಮಾಡಿ ಮಹತ್ವದ ಹೆಜ್ಜೆಯಿಟ್ಟಿದೆ.

ಈ ಬೈಕಿನಲ್ಲಿ ಅಲಾಯ್ ವ್ಹೀಲ್‌ಗಳಲ್ಲಿ ಅಳವಡಿಸಲಾಗಿರುವ ಚಂಕಿ ಟೈರ್‌ಗಳು, ಯುಎಸ್‌ಡಿ ಫೋರ್ಕ್‌ಗಳು ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ಸೆಟಪ್, ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟ್ಯಾಂಕ್ ಕವರ್‌ಗಳ ಮೇಲೆ ಇಂಟಿಗ್ರೇಟೆಡ್ ಎಲ್ಇಡಿ ವಿಂಕರ್‌ಗಳು ನೀಡಿದ್ದು, ಒಟ್ಟಾರೆ ಹೊಸ ಮೋಟಾರ್‌ಸೈಕಲ್‌ ಸೈ-ಫೈ ಸಿನಿಮಾಗಳಲ್ಲಿ ಕಂಡುಬರವಂತಹ ಡಿಸೈನ್ ಪಡೆದಿದೆ.

ola-electric-motorcycle-launch-date-revealed

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ, ಡಿಜಿಟಲ್ ಇನ್ಸ್‌ಟ್ರೂಮೆಂಟ್ ಪ್ಯಾನಲ್ ಮತ್ತು ಚಾರ್ಜಿಂಗ್ ಪಾಡ್ ಹೊಂದಿರುವ ವಿಶಿಷ್ಟವಾದ ಮೂರು-ಹಂತದ ಸೀಟ್, ಫ್ಲಶ್-ಫಿಟ್ ಟೈಲ್ ಲೈಟ್ ಘಟಕದ ಆಧುನಿಕ ವಿನ್ಯಾಸವು ಹಲವರ ಉತ್ಸಾಹವನ್ನು ಕೆರಳಿಸಿದೆ. ಅಲ್ಲದೇ ಪ್ರತಿ ಮಾದರಿಯು ವೈವಿಧ್ಯಮಯ ರೈಡಿಂಗ್ ಅಗತ್ಯಗಳನ್ನು ಪೂರೈಸಲು ವಿಭಿನ್ನ ಪವರ್ ಮತ್ತು ರೇಂಜ್ ನೀಡುವುದಾಗಿ ಓಲಾ ಹೇಳಿಕೊಂಡಿತ್ತು.

"2023ರ ಡಿಸೆಂಬರ್‌ನಲ್ಲಿ ಓಲಾ ಎಸ್ 1 ಎಕ್ಸ್ + ವಿತರಣೆಯನ್ನು ಪ್ರಾರಂಭಿಸಿದ್ದೇವೆ, 2025ರ ಆರ್ಥಿಕ ವರ್ಷದ ಮೊದಲಾರ್ಧದ ವೇಳೆಗೆ ಓಲಾ S1X (2 ಕಿಲೋವ್ಯಾಟ್) ಮತ್ತು ಓಲಾ S1X (3 ಕಿಲೋವ್ಯಾಟ್) ಬರಲಿವೆ. ನಂತರ ಹೊಸ ಮೋಟಾರ್‌ಸೈಕಲ್ ಮಾದರಿಗಳಾದ ಡೈಮಂಡ್‌ಹೆಡ್, ಅಡ್ವೆಂಚರ್, ರೋಡ್‌ಸ್ಟರ್ ಮತ್ತು ಕ್ರೂಸರ್ ಅನ್ನು 2026ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ವಿತರಿಸಲು ಯೋಜಿಸಿದ್ದೇವೆ" ಎಂದು ಓಲಾ ಎಲೆಕ್ಟ್ರಿಕ್ ಹೇಳಿದೆ.

ola-electric-motorcycle-launch-date-revealed

ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಹಿಂದೆ ಮಾತನಾಡಿ, ಮುಂಬರುವ ಓಲಾ ಎಲೆಕ್ಟ್ರಿಕ್ ಇ-ಬೈಕ್‌ಗಳು ಭಾರತೀಯ ಮೋಟಾರ್ ಸೈಕಲ್ ವಿಭಾಗದಲ್ಲಿಇದುವರೆಗೆ ಕಂಡಿರದ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುತ್ತವೆ, ಜೊತೆಗೆ ಸ್ಕೂಟರ್‌ಗಳಿಗೆ ಹೋಲಿಸಿದರೆ ದೊಡ್ಡ ಬ್ಯಾಟರಿ ಪ್ಯಾಕ್ ಗಳನ್ನು ಹೊಂದಿರುತ್ತವೆ ಎಂದು ಅವರು ಹೇಳಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, July 25, 2024, 16:19 [IST]
English summary
Ola electric motorcycle launch date revealed
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+