Ola: ಓಲಾ ರಿವರ್ಸ್ 2024: ನಂಬಲಾಗದ ಡೇಟಾ ಬಹಿರಂಗ: 1,300 ಕೋಟಿ ಉಳಿತಾಯ!
ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಓಲಾ ಎಲೆಕ್ಟ್ರಿಕ್, ಇಂದು 'ಓಲಾ ರಿವರ್ಸ್ 2024' ಅನ್ನು ಅನಾವರಣಗೊಳಿಸಿದೆ. ಇದರ ಮುಖ್ಯ ಉದ್ದೇಶ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತದ ಅಸಾಧಾರಣ ಪ್ರಗತಿಯನ್ನು ತೊರಿಸುವುದಾಗಿದೆ. ಈ ಡೇಟಾದಲ್ಲಿ ಭಾರತದ EV ಕ್ರಾಂತಿಯನ್ನು ಚಾಲನೆ ಮಾಡುವಲ್ಲಿ Ola S1 ಪಾತ್ರವನ್ನು ಎತ್ತಿ ತೋರಿಸಿಲಾಗಿದೆ. ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ Ola S1 ವಾಹನಗಳ ಮೂಲಕ ಇಂಧನ ಉಳಿತಾಯ, CO2 ಹೊರಸೂಸುವಿಕೆ ಕಡಿತ ಮತ್ತು ಮ್ಯಾಪ್ಸ್ ಆಧಾರಿತ ಸೇವೆಯ ನಿರ್ಣಾಯಕ ಒಳನೋಟಗಳನ್ನು ವಿವರಿಸಲಾಗಿದೆ.
Ola S1 ಸಮುದಾಯವು 2024 ರಲ್ಲಿ ಗಮನಾರ್ಹ ಪರಿಣಾಮ ಬೀರಿದ್ದು, ಒಟ್ಟಾರೆಯಾಗಿ ಇಂಧನ ವೆಚ್ಚದಲ್ಲಿ ರೂ.1,300 ಕೋಟಿಯನ್ನು ಉಳಿಸಿದೆ. 8 ಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರೊಂದಿಗೆ, Ola S1 ಸ್ಕೂಟರ್‌ಗಳು ಕೈಗೆಟುಕುವ ಸ್ಕೂಟರ್‌ಗಳಿಗೆ ಉತ್ತಮ ಆಯ್ಕೆಯಾಗಿ ಮಾರ್ಪಟ್ಟಿವೆ. ಒಟ್ಟಾರೆಯಾಗಿ ಈ ಸಮುದಾಯವು ಪ್ರಭಾವಶಾಲಿ 5.5 ಶತಕೋಟಿ ಕಿ.ಮೀ ಕ್ರಮಿಸಿದೆ ಎಂದು ಕಂಪನಿ ಹೇಳಿದೆ.

ನಗರ-ವಾರು ನೋಡಿದ್ರೆ, ಬೆಂಗಳೂರು ಭಾರತದ EV ರಾಜಧಾನಿಯಾಗಿ ಹೊರಹೊಮ್ಮಿದೆ. ದಾಖಲೆಯ 22.6 ಮಿಲಿಯನ್ ರೈಡ್‌ಗಳನ್ನು ಒಳಗೊಂಡಿದೆ. ಓಲಾ ಮ್ಯಾಪ್ಸ್ ಒಳನೋಟಗಳ ಆಧಾರದ ಮೇಲೆ ಖರೀದಿಯ ನಡವಳಿಕೆಗೆ ಬಂದಾಗ, ಮುಂಬೈ ರೆಸ್ಟೋರೆಂಟ್ ಹುಡುಕಾಟಗಳಲ್ಲಿ ಅಗ್ರಸ್ಥಾನದಲ್ಲಿದೆ. ದೆಹಲಿಯು ಭಾರತದ ಶಾಪಿಂಗ್ ಹಬ್ ಆಗಿ ಹೆಚ್ಚಿನ ಸಂಖ್ಯೆಯ ಹುಡುಕಾಟಗಳೊಂದಿಗೆ ತನ್ನ ಖ್ಯಾತಿ ಗಟ್ಟಿಗೊಳಿಸಿದೆ.
ಮಹಾನಗರಗಳು, ಶ್ರೇಣಿ-2 ಮತ್ತು ಶ್ರೇಣಿ-3 ಪಟ್ಟಣಗಳಲ್ಲಿ ಶತಕೋಟಿ ಸವಾರಿಗಳನ್ನು ಲಾಗ್ ಮಾಡಲಾಗಿದ್ದು, ಭಾರತೀಯ ಪ್ರಯಾಣಿಕರಿಗೆ EVಗಳು ಆದ್ಯತೆಯ ಆಯ್ಕೆಯಾಗುತ್ತಿವೆ ಎಂದು ಓಲಾ ತಿಳಿಸಿದೆ. 3,200 ಕ್ಕೂ ಹೆಚ್ಚು ಹೊಸ ಮಳಿಗೆಗಳೊಂದಿಗೆ ಸೇವಾ ಸೌಲಭ್ಯಗಳೊಂದಿಗೆ, Ola Electric ದೊಡ್ಡ ಪ್ರಮಾಣದ EV ಅಳವಡಿಕೆಗೆ ಚಾಲನೆ ನೀಡುವ ಬದ್ಧತೆಯೊಂದಿಗೆ ತನ್ನ ನಾಯಕತ್ವವನ್ನು ಬಲಪಡಿಸಿದೆ ಎಂದು ಓಲಾ ಹೇಳಿಕೊಂಡಿದೆ.

ಕಂಪನಿಯು ಇತ್ತೀಚೆಗೆ ತನ್ನ Gig ಮತ್ತು S1 Z ಸ್ಕೂಟರ್ ಶ್ರೇಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಶ್ರೇಣಿಯಲ್ಲಿ Ola Gig, Ola Gig+, Ola S1 Z, ಮತ್ತು Ola S1 Z+ ಗಳನ್ನು ಒಳಗೊಂಡಿದ್ದು, ರೂ.39,999 (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹೊಸ ಶ್ರೇಣಿಯ ಸ್ಕೂಟರ್‌ಗಳನ್ನು ಗ್ರಾಮೀಣ, ಅರೆ-ನಗರ ಮತ್ತು ನಗರ ಗ್ರಾಹಕರ ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಗಾಗಿ ನಿರ್ಮಿಸಲಾಗಿದೆ.
ಇವು ತೆಗೆದು ಹಾಕಬಹುದಾದ ಬ್ಯಾಟರಿಗಳು ಸೇರಿದಂತೆ ಬಾಳಿಕೆ ಬರುವ, ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಹೊಂದಿಕೊಳ್ಳುವ ಪರಿಹಾರಗಳನ್ನು ನೀಡುತ್ತವೆ. Gig ಮತ್ತು S1 Z ಸರಣಿಯ ಕಾಯ್ದಿರಿಸುವಿಕೆಗಳು ಕೇವಲ ರೂ. 499 ಕ್ಕೆ ತೆರೆದಿವೆ. ವಿತರಣೆಗಳು ಕ್ರಮವಾಗಿ ಏಪ್ರಿಲ್ 2025 ಮತ್ತು ಮೇ 2025 ರಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.

ಇನ್ನು ಓಲಾದ ಪ್ರಮುಖ ಸ್ಕೂಟರ್‌ಗಳಾದ S1 ಪೋರ್ಟ್‌ಫೋಲಿಯೊವನ್ನು ನೋಡುವುದಾದ್ರ, ಪ್ರೀಮಿಯಂಕೊಡುಗೆಗಳಾದ S1 Pro ಮತ್ತು S1 Air ಕ್ರಮವಾಗಿ ರೂ. 1,34,999 ಮತ್ತು ರೂ. 1,07,499 ಬೆಲೆಯಿವೆ. ಸಾಮೂಹಿಕ ಮಾರುಕಟ್ಟೆ ಕೊಡುಗೆಗಳಲ್ಲಿ S1 X ಪೋರ್ಟ್‌ಫೋಲಿಯೊ (2 kWh, 3 kWh, ಮತ್ತು 4 kWh) ಕ್ರಮವಾಗಿ ರೂ. 74,999, ರೂ.87,999 ಮತ್ತು ರೂ.101,999 ಬೆಲೆಯಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








