iVoomi: ಹೊಸ ಐವೂಮಿ ಜೀಟ್ಎಕ್ಸ್ ಝಡ್ಇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ರೂ.80,000 ಬೆಲೆ, 170 ಕಿ.ಮೀ ಓಡುತ್ತದೆ!
ಭಾರತದಲ್ಲಿ ಕಳೆದ 2 ವರ್ಷದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಈಗಾಗಲೇ ಓಲಾ, ಎಥರ್, ಟಿವಿಎಸ್ ಹಾಗೂ ಬಜಾಜ್ ಕಂಪನಿಯ ಇ-ಸ್ಕೂಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಹೊಸ ವಾಹನ ತಯಾರಕರಿಂದ ಕೂಡ ಆಕರ್ಷಕವಾಗಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ.
ಇದೀಗ ಪುಣೆ ಮೂಲಕ ಕಂಪನಿ ಐವೂಮಿ (iVoomi), ಹೊಚ್ಚ ಹೊಸ ಜೀಟ್ಎಕ್ಸ್ ಝಡ್ಇ (JeetX ZE) ಇ-ಸ್ಕೂಟರ್‌ಗಳನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.80,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 170 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಅತ್ಯಾಧುನಿಕವಾಗಿರುವ ಮೂರು ರೂಪಾಂತರ (ವೇರಿಯೆಂಟ್)ಗಳು ಹಾಗೂ ನಾರ್ಡೊ ಗ್ರೇ, ಅರ್ಬನ್ ಗ್ರೀನ್ ಸೇರಿದಂತೆ 8 ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ನೂತನ ಐವೂಮಿ ಜೀಟ್ಎಕ್ಸ್ ಝಡ್ಇ (iVoomi JeetX ZE) ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 3 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದೆ. ಇದರಲ್ಲಿರುವ ಬಿಎಲ್‌ಡಿಸಿ ಮೋಟಾರ್ 2.1 ಕೆಡಬ್ಲ್ಯೂ ಪೀಕ್ ಪವರ್ (ಶಕ್ತಿ) ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ 57 ಕೆಎಂಪಿಹೆಚ್ ಟಾಪ್ ಸ್ಪೀಡ್ (ಗರಿಷ್ಠ ವೇಗ) ಅನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಪ್ಯಾಕ್ 7ಎ ಹೋಂ ಚಾರ್ಜರ್ ಬಳಕೆಯಲ್ಲಿ ಸಂಪೂರ್ಣ ಚಾರ್ಜ್ ಆಗಲು 5.5 ಗಂಟೆ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 2.5 ಗಂಟೆಯಲ್ಲಿ ಶೇಕಡ 50% ಬ್ಯಾಟರಿಯು ಚಾರ್ಜ್ ಆಗಿಬಿಡುತ್ತದೆ. ವಿಶೇಷವಾಗಿ ನೂತನ ಇ-ಸ್ಕೂಟರ್ ಬ್ಯಾಟರಿಯು 5 ವರ್ಷ ಅಥವಾ 50,000 ಕಿ.ಮೀ ವಾರಂಟಿಯನ್ನು ಒಳಗೊಂಡಿದೆ.
ಹೊಸ ಐವೂಮಿ ಜೀಟ್ಎಕ್ಸ್ ಝಡ್ಇ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) 75 ಎಂಎಂ ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) 60 ಎಂಎಂ ಸ್ಪ್ರಿಂಗ್ ಲೋಡ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಹೇಳುವುದಾದರೆ, ಮುಂದೆ ಡಿಸ್ಕ್ ಮತ್ತು ಹಿಂದೆ ಡ್ರಮ್ ಬ್ರೇಕ್ ಯುನಿಟ್‌ನ್ನು ಹೊಂದಿದೆ.
ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಜಿಯೋ-ಫೆನ್ಸಿಂಗ್, ರಿಜೆನೆರೇಟಿವ್ ಬ್ರೇಕಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಎಸ್ಎಂಎಸ್, ಕಾಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಗಳನ್ನು ತೋರಿಸಲು ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಪಡೆದಿದೆ.
ಐವೂಮಿ ಕಂಪನಿಯು ಮಾರಾಟಗೊಳಿಸುವ ಜೀಟ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ರೂ.89,999 ದಿಂದ ರೂ.99,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 120-170 ಕಿ.ಮೀ ಓಡುತ್ತದೆ. ಐವೂಮಿ ಎಸ್1 ಸ್ಕೂಟರ್ ರೂ.54,999 - 82,999 ದರದಲ್ಲಿ ಲಭ್ಯವಿದ್ದು, 75-110 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಐವೂಮಿ ಇಕೋ ಸ್ಕೂಟರ್ ರೂ.81,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








