ವರ್ಷಾಂತ್ಯಕ್ಕೆ ಭರ್ಜರಿ ಆಫರ್ ಘೋಷಣೆ: 15,000 ಮೊಬೈಲ್ ಫ್ರೀ, 20,000 ಕ್ಯಾಶ್‌ಬ್ಯಾಕ್!

ಭಾರತದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕಾ ಕಂಪನಿಯಾದ ಕ್ವಾಂಟಮ್ ಎನರ್ಜಿ, ಹಬ್ಬದ ಸೀಸನ್‌ಗೆ ಹೊಸ ಆಫರ್‌ಗಳನ್ನು ಅನಾವರಣಗೊಳಿಸಿದೆ. ಕ್ರಿಸ್‌ಮಸ್, ಹೊಸ ವರ್ಷ ಮತ್ತು ಪೊಂಗಲ್‌ ಹಬ್ಬದ ಅವಧಿ ಸಮೀಪಿಸುತ್ತಿರುವಂತೆ, ಕಂಪನಿಯು ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್ ಲೈನ್‌ಅಪ್‌ನಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನು ನೀಡುವ ಮೂಲಕ ಈ ಸೀಸನ್‌ಗೆ ಹೆಚ್ಚುವರಿ ವಿಶೇಷತೆ ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಕ್ವಾಂಟಮ್ ಎನರ್ಜಿಯ ಹಬ್ಬದ ಕೊಡುಗೆಯು, ಸುಧಾರಿತ ತಂತ್ರಜ್ಞಾನ, ಹೆಚ್ಚಿನ ಕಾರ್ಯಕ್ಷಮತೆ, ದಕ್ಷತೆ ಮತ್ತು ವಿಶ್ವಾಸಾರ್ಹತೆ ಹೊಂದಿರುವ ಕಂಪನಿಯ ಜನಪ್ರಿಯ ಮಾಡಲ್‌ಗಳನ್ನು ಒಳಗೊಂಡಿದೆ.

ಈ ಸೀಮಿತ ಅವಧಿಯ ಆಫರ್‌ನಲ್ಲಿ, ಫ್ಲ್ಯಾಗ್‌ಶಿಪ್ ಮಾಡಲ್ ಪ್ಲಾಸ್ಮಾ, ಮಿಲನ್ ಮತ್ತು ಬಿಝಿನೆಸ್ ಸೀರೀಸ್ ಸೇರಿದಂತೆ ಆಯ್ದ ಕ್ವಾಂಟಮ್ EV ಮಾಡೆಲ್‌ಗಳ ಖರೀದಿಯೊಂದಿಗೆ ಗ್ರಾಹಕರು ರೂ. 15,000 ಮೌಲ್ಯದ ಕಾಂಪ್ಲಿಮೆಂಟರಿ ಮೊಬೈಲ್ ಫೋನ್ ಜೊತೆಗೆ ರೂ.20,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ವಿಶೇಷ ಕೊಡುಗೆಯು ಗ್ರಾಹಕರಿಗೆ 18ನೇ ಡಿಸೆಂಬರ್‌ನಿಂದ 18ನೇ ಜನವರಿ 2025 ರವರೆಗೆ ನಡೆಯುತ್ತದೆ.

quantum-energy-festive-offer-free-smartphones-and-cashback-offers

ಈ ಆಫರ್‌ಗಳು ಭಾರತದಲ್ಲಿ ಹೊಸದಾಗಿ ತೆರೆಯಲಾದ ಔಟ್‌ಲೆಟ್‌ಗಳು ಸೇರಿದಂತೆ ಎಲ್ಲಾ ಕ್ವಾಂಟಮ್ ಎನರ್ಜಿ ಶೋರೂಮ್‌ಗಳಲ್ಲಿ ಲಭ್ಯವಿದೆ. ಕೇವಲ ಆಫರ್‌ಗಳು ಮಾತ್ರವಲ್ಲ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೂಡ ಉತ್ತಮ ಡಿಸೈನ್ ಹಾಗೂ ಅತ್ಯುತ್ತಮ ರೇಂಜ್‌ ನೀಡುತ್ತವೆ. ಪ್ಲಾಸ್ಮಾ X, ಪ್ಲಾಸ್ಮಾ XR, ಮಿಲನ್, ಬಿಝಿನೆಸ್ X, ಬಿಝಿನೆಸ್ XP ಪ್ರಮುಖ ಮಾಡಲ್‌ಗಳಾಗಿವೆ.

ಇವುಗಳಲ್ಲಿ ಪ್ಲಾಸ್ಮಾ X ಇವಿ ಸ್ಕೂಟರ್ ದೃಢವಾದ 1500W ಮೋಟಾರ್ ಹೊಂದಿದ್ದು, 65 ಕಿ.ಮೀ/ಗಂಟೆಯ ಗರಿಷ್ಠ ವೇಗ ಹಾಗೂ ಒಂದೇ ಚಾರ್ಜ್‌ನಲ್ಲಿ 120 ಕಿ.ಮೀ ರೇಂಜ್ ನೀಡುತ್ತದೆ. ಹಾಗೆಯೇ ಪ್ಲಾಸ್ಮಾ XR ಇವಿ ಸ್ಕೂಟರ್ 1500W ಮೋಟಾರ್‌ನಿಂದ ಚಾಲಿತವಾಗಿದ್ದು, 60 km/h ಗರಿಷ್ಠ ವೇಗ ಮತ್ತು ಸಿಂಗಲ್‌ ಚಾರ್ಜ್‌ನಲ್ಲಿ 100 km ವರೆಗೆ ರೇಂಜ್ ನೀಡುತ್ತದೆ.

quantum-energy-festive-offer-free-smartphones-and-cashback-offers

ಮಿಲನ್ ಇವಿ ಸ್ಕುಟರ್ 1000W ಮೋಟಾರ್ ಹೊಂದಿದ್ದು, 60 ಕಿಮೀ/ಗಂಟೆಯ ಗರಿಷ್ಠ ವೇಗ ಹಾಗೂ ಪ್ರತಿ ಚಾರ್ಜ್‌ಗೆ 100 ಕಿಮೀ ರೇಂಜ್ ನೀಡುತ್ತದೆ. ಇನ್ನು ಬಿಝಿನೆಸ್ X ಇವಿ ಸ್ಕೂಟರ್ 1200W ಮೋಟಾರ್ ಹೊಂದಿದ್ದು, 60 km/h ಗರಿಷ್ಠ ವೇಗ ಮತ್ತು 110 km ರೇಂಜ್ ನೀಡುತ್ತದೆ. ಕೊನೆಯದಾಗಿ ಬಿಝಿನೆಸ್ XP ಮಾಡೆಲ್ 1200W ಮೋಟಾರ್ ಹೊಂದಿದ್ದು, 45 km/h ಗರಿಷ್ಠ ವೇಗ ಮತ್ತು 135 km ರೇಂಜ್ ನೀಡುತ್ತದೆ.

ಕ್ವಾಂಟಮ್ ಎನರ್ಜಿ ಲಿಮಿಟೆಡ್‌ನ ನಿರ್ದೇಶಕಿ ಚೇತನಾ ಚುಕ್ಕಪಲ್ಲಿ ಮಾತನಾಡಿ, "ಕ್ವಾಂಟಮ್ ಎನರ್ಜಿಯಲ್ಲಿ, ನಮ್ಮ ಗ್ರಾಹಕರಿಗೆ ಹಬ್ಬದ ಋತುವಿನ ಸಂತೋಷವನ್ನು ಪ್ರತಿಬಿಂಬಿಸುವ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲು ನಾವು ರೋಮಾಂಚನಗೊಂಡಿದ್ದೇವೆ. ಕಾರ್ಯಕ್ಷಮತೆ ಮತ್ತು ಸುಸ್ಥಿರತೆ ಎರಡನ್ನೂ ತಲುಪಿಸುವ ಅತ್ಯಾಧುನಿಕ ಪರಿಸರ ಸ್ನೇಹಿ ವಾಹನಗಳನ್ನು ಒದಗಿಸಲು ನಾವು ಸಮರ್ಪಿತರಾಗಿದ್ದೇವೆ.

quantum-energy-festive-offer-free-smartphones-and-cashback-offers

ಈ ವಿಶೇಷ ಕೊಡುಗೆಯೊಂದಿಗೆ, ನಾವು ಗ್ರಾಹಕರಿಗೆ ಕ್ಲೀನರ್ ಮೋಡ್‌ಗೆ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತಿರುವು ಜೊತೆಗೆ, ನಂಬಲಾಗದ ಆಫರ್‌ಗಳನ್ನು ಪಡೆಯಲು ಅವಕಾಶ ನೀಡುತ್ತಿದ್ದೇವೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಸುಧಾರಿತ ಎಲೆಕ್ಟ್ರಿಕ್ ಮೊಬಿಲಿಟಿ ಪರಿಹಾರಗಳೊಂದಿಗೆ ಭಾರತೀಯ ಪ್ರಯಾಣಿಕರನ್ನು ಸಬಲೀಕರಣಗೊಳಿಸುವ ಮೂಲಕ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡಲು ಕ್ವಾಂಟಮ್ ಎನರ್ಜಿ ಬದ್ಧವಾಗಿದೆ ಎಂದರು.

ಈ ಮಾಡಲ್‌ಗಳನ್ನು ಭಾರತೀಯ ಪ್ರಯಾಣಿಕರು ಮತ್ತು ವ್ಯವಹಾರಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಪ್ರಭಾವಶಾಲಿ ಶಕ್ತಿಯ ದಕ್ಷತೆಯೊಂದಿಗೆ ಉನ್ನತ-ಕಾರ್ಯಕ್ಷಮತೆಯ ಮೋಟಾರ್‌ಗಳನ್ನು ನೀಡಲಾಗಿದೆ. ಈ ಸ್ಕೂಟರ್‌ಗಳು ದೈನಂದಿನ ಬಳಕೆಗೆ ಸೂಕ್ತವಾಗಿವೆ. ಜೊತೆಗೆ ಪೆಟ್ರೋಲ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕ್ವಾಂಟಮ್ ಎನರ್ಜಿಯ ಶೋರೂಮ್‌ಗಳು ಸಮಗ್ರವಾದ 3S (ಮಾರಾಟ, ಸೇವೆ ಮತ್ತು ಬಿಡಿಭಾಗಗಳು) ಸೌಲಭ್ಯಗಳನ್ನು ಹೊಂದಿದ್ದು, ಗ್ರಾಹಕರು ಮಾರಾಟದ ನಂತರದ ಉನ್ನತ ದರ್ಜೆಯ ಬೆಂಬಲವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಆಸಕ್ತ ಖರೀದಿದಾರರು ಕ್ವಾಂಟಮ್ ಎನರ್ಜಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟೆಸ್ಟ್ ರೈಡ್ ಅನ್ನು ನಿಗದಿಪಡಿಸಬಹುದು ಅಥವಾ ಭಾರತದಾದ್ಯಂತ ಯಾವುದೇ ಬ್ರ್ಯಾಂಡ್‌ನ ಶೋರೂಮ್‌ಗಳಿಗೆ ಭೇಟಿ ನೀಡಬಹುದು.

More from DriveSpark

Article Published On: Sunday, December 22, 2024, 13:36 [IST]
English summary
Quantum energy festive offer free smartphones and cashback offers
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+