Republic Day discounts: ಗಣರಾಜ್ಯೋತ್ಸವದ ಡಿಸ್ಕೌಂಟ್... ಈ ಸ್ಕೂಟರ್ ಮೇಲೆ ರೂ. 20,000 ಇಳಿಕೆ
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವು ಗಮನಾರ್ಹವಾಗಿ ಹೆಚ್ಚುಗುತ್ತಿದೆ. ಓಲಾ, ಎಥರ್, ಟಿವಿಎಸ್ ನಂತಹ ಬ್ರಾಂಡ್‌ಗಳು ಸದ್ಯ ಇವಿ ವಿಭಾಗದಲ್ಲಿ ಮುನ್ನುಗ್ಗುತ್ತಿವೆ. ಉಳಿದಂತೆ iVOOMi ಕೂಡ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಇದೀಗ ಗಣರಾಜ್ಯೋತ್ಸವ ಅಂಗವಾಗಿ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ.
ಕಂಪನಿಯು ಗಣರಾಜ್ಯೋತ್ಸವದ ಭಾಗವಾಗಿ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ವಿಶೇಷ ನಗದು ರಿಯಾಯಿತಿಗಳನ್ನು ಘೋಷಿಸಿದೆ. ಸೋಮವಾರದಿಂದ ಜಾರಿಯಾಗಿರುವ ಈ ಕೊಡುಗೆಯು ಜನವರಿ 31, 2024 ರವರೆಗೆ ಮಾನ್ಯವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ. ತನ್ನ ಪ್ರಮುಖ ಮಾದರಿ JeetX ಮೇಲೆ ರೂ. 20,000 ಮತ್ತು efficient S1 2.0 ಮೇಲೆ ರೂ. 5,000 ವರೆಗೆ ಗ್ರಾಹಕರು ಈಗ ಗಮನಾರ್ಹ ಉಳಿತಾಯವನ್ನು ಪಡೆಯಬಹುದು ಎಂದು ಹೇಳಿದೆ.

ಪ್ರಮುಖ ಮಾದರಿ JeetX ಈಗ ರೂ. 20,000 ನಗದು ರಿಯಾಯಿತಿ ಬಳಿಕ ರೂ. 84,999 ರ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ S1 2.0, ಈಗ ರೂ. 5,000 ನಗದು ರಿಯಾಯಿತಿಯ ನಂತರ ರೂ. 82,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. JeetX 5 ಮ್ಯಾಟ್ ಫಿನಿಶ್ ಬಣ್ಣಗಳಲ್ಲಿ ಲಭ್ಯವಿದ್ದು, ರೈಡ್ ಅನುಭವವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
JeetX ಮಾದರಿಯು 65 ಕಿ.ಮೀ ವೇಗದೊಂದಿಗೆ, ಸವಾರರಿಗೆ ಪವರ್‌ಫುಲ್ ಆಯ್ಕೆಯಾಗಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 200 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು S1 2.0 ಮಾದರಿಯು ಪ್ರತಿ ಚಾರ್ಜ್‌ಗೆ 110+ಕಿಮೀ ರೈಡಿಂಗ್ ರೇಂಜ್ ಮತ್ತು 57 kmph ಗರಿಷ್ಠ ವೇಗವನ್ನು ಹೊಂದಿದೆ.

ಅದರ ಕೈಗೆಟುಕುವಿಕೆ ಮತ್ತು ಅತ್ಯುತ್ತಮ ದಕ್ಷತೆಯೊಂದಿಗೆ, S1 2.0 ತನ್ನನ್ನು ತಾನು ದೇಶದಲ್ಲೇ ಅತ್ಯಂತ ವೆಚ್ಚ-ಪರಿಣಾಮಕಾರಿ ಇ-ಸ್ಕೂಟರ್‌ಗಳಲ್ಲಿ ಒಂದಾಗಿ ಸ್ಥಾಪಿಸಿಕೊಂಡಿದೆ. ಇದು 6 ಸ್ಪೋರ್ಟಿ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ಆಯ್ಕೆಗೆ ಅನುವು ಮಾಡಿಕೊಡುತ್ತದೆ. ಅಲ್ಲದೇ ಇದರ ಸಮರ್ಥ ರೇಂಜ್ ರೈಡರ್‌ಗಳಿಗೆ ಆತಂಕವಿಲ್ಲದ ಪ್ರಯಾಣವನ್ನು ಒದಗಿಸುತ್ತದೆ.
iVOOMi ನ ಸಹ-ಸಂಸ್ಥಾಪಕ ಮತ್ತು CEO ಅಶ್ವಿನ್ ಭಂಡಾರಿ ಮಾತನಾಡಿ, "iVOOMi ನಲ್ಲಿ, ಕೈಗೆಟುಕುವ, ಪರಿಸರ ಸ್ನೇಹಿ ಇ-ಸ್ಕೂಟರ್‌ಗಳನ್ನು ಒದಗಿಸುವ ಮೂಲಕ ಸಾರಿಗೆಯನ್ನು ಮರು ವ್ಯಾಖ್ಯಾನಿಸುವುದು ನಮ್ಮ ಉದ್ದೇಶವಾಗಿದೆ. ಈ ವಿಶೇಷ ರಿಯಾಯಿತಿಗಳೊಂದಿಗೆ, ನಾವು ನಮ್ಮ ಉನ್ನತ ಮಾದರಿಗಳಾದ JeetX ಮತ್ತು S1 2.0 ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಇವು ದೇಶದ ಅತ್ಯಂತ ವೆಚ್ಚ-ಪರಿಣಾಮಕಾರಿ ಇ-ಸ್ಕೂಟರ್‌ಗಳು ಎಂದರು."

ದುಬಾರಿ ಇಂಧನಗಳ ಪರಿಣಾಮ ಸಾಂಪ್ರದಾಯಿಕವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಪ್ರಮುಖ ಇವಿ ಮಾದರಿಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








