ಖರ್ಚಿಲ್ಲದೆ ನಿತ್ಯ 160 ಕಿ.ಮೀ ಓಡಿಸಬಹುದು... ಬೆಲೆ ರೂ. 84,990... ರಿವರ್ಸ್ ಗೇರ್ ಕೂಡ ಇದೆ!
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಿವೋಲ್ಟ್ ಮೋಟಾರ್ಸ್, ಆರ್‌ವಿ 1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ RV1 ಮತ್ತು RV1+ ಎಂಬ ಎರಡು ವೇರಿಯೆಂಟ್‌ಗಳಿದ್ದು, ನಾಲ್ಕು ಗಮನಾರ್ಹ ಬಣ್ಣಗಳಲ್ಲಿ ನೀಡಲಾಗುತ್ತಿದೆ. RV1 ಬೆಲೆಯು ರೂ. 84,990 ಮತ್ತು RV1+ ಬೆಲೆಯು ರೂ. 99,990 (ಎಕ್ಸ್ ಶೋರೂಂ ಬೆಲೆಗಳು) ಇದೆ. ಇದೇ ವರ್ಗದಲ್ಲಿರುವ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಮೂರು ಪಟ್ಟು ಕಡಿಮೆ ನಿರ್ವಹಣಾ ವೆಚ್ಚವನ್ನು ನೀಡುತ್ತವೆ ಎಂದು ಕಂಪನಿ ಹೇಳಿದೆ. ಈ ಮೋಟಾರ್‌ಸೈಕಲ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
RV1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 2.2 kWh ಬ್ಯಾಟರಿಯೊಂದಿಗೆ 100 ಕಿ.ಮೀ ರೇಂಜ್ ನೀಡಿದರೆ, ಎರಡನೆಯದು 3.24 kWh ಬ್ಯಾಟರಿಯೊಂದಿಗೆ 160 ಕಿ.ಮೀ ರೇಂಜ್ ನೀಡುತ್ತದೆ. ಎರಡೂ ಬ್ಯಾಟರಿಗಳು ನೀರಿನ ಪ್ರತಿರೋಧಕ್ಕಾಗಿ IP67-ರೇಟೆಡ್ ಆಗಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ವಿಶ್ವಾಸಾರ್ಹ ಕಾರ್ಯಕ್ಷಮತೆ ಒದಗಿಸುತ್ತವೆ.

RV1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ದೃಢವಾದ 250 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇತರ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಲ್ಲಿ ಕಂಡುಬರುವ 150 ಕೆ.ಜಿ ಸರಾಸರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸುಧಾರಿತ ಹಿಡಿತ ಮತ್ತು ಸ್ಥಿರತೆಗಾಗಿ ವಿಶಾಲವಾದ ಟೈರ್‌ಗಳನ್ನು ಹೊಂದಿದೆ. ಮಿಡ್-ಮೋಟರ್ ಮತ್ತು ಪ್ರೀಮಿಯಂ ಚೈನ್ ಡ್ರೈವ್ ಸಿಸ್ಟಮ್ ಹೊಂದಿದೆ.
RV1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದ್ದು, ಇತರ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಿಗಿಂತ ಉನ್ನತ ನಿಲುಗಡೆ ಪವರ್ ಹೊಂದಿವೆ. ಈ ಎಲೆಕ್ಟ್ರಿಕ್ ಬೈಕ್ ಬಹುಮುಖ ಸವಾರಿಗಾಗಿ ಬಹು ವೇಗದ ಮೋಡ್‌ಗಳ ಜೊತೆಗೆ ರಿವರ್ಸ್ ಮೋಡ್ ಅನ್ನು ಹೊಂದಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ರಿವರ್ಸ್ ಗೇರ್ ಬಹು ಉಪಯುಕ್ತವಾಗಿರುತ್ತದೆ.

ವೈಶಿಷ್ಟ್ಯಗಳು: ಮೋಟಾರ್‌ಸೈಕಲ್ 6-ಇಂಚಿನ ಡಿಜಿಟಲ್ LCD ಡಿಸ್ಪ್ಲೇಯನ್ನು ಹೊಂದಿದ್ದು, ರಿಯಲ್ ಟೈಮ್ ರೈಡ್ ಡೇಟಾ ಸೇರಿದಂತೆ ವಾಹನದಲ್ಲಿ ಯಾವುದಾದರು ದೋಷವಿದಲ್ಲಿ ಅವುಳ ಮಾಹಿತಿಯನ್ನು ಒದಗಿಸುತ್ತದೆ. ಹಾಗೆಯೇ ಸಂಪೂರ್ಣ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ನೀಡಲಾಗಿದೆ. ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, RV1+ ಅನ್ನು ಕೇವಲ 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
ಉದ್ದವಾದ ಆಸನ ಮತ್ತು ಬಹು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ಚೌಕಟ್ಟಿನೊಂದಿಗೆ, ಇದು ಕುಟುಂಬಗಳಿಗೆ ಮತ್ತು ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿರುತ್ತದೆ. ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಒರಟಾದ ಭೂಪ್ರದೇಶಗಳಲ್ಲಿಯೂ ಸಹ ಸುಗಮ ಮತ್ತು ಆರಾಮದಾಯಕ ಸವಾರಿಯನ್ನು ಒದಗಿಸುತ್ತದೆ, ಆಧುನಿಕ ರೈಡರ್‌ಗಳಿಗೆ ಉತ್ತಮ ಆಯ್ಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಬಜೆಟ್ ಸ್ನೇಹಿಯಾಗಿರುವ ಮೋಟಾರ್‌ಸೈಕಲ್ ಅನ್ನು ವಿನ್ಯಾಸಗೊಳಿಸುವ ನಮ್ಮ ಅನ್ವೇಷಣೆಯು ಗುಣಮಟ್ಟ, ವೈಶಿಷ್ಟ್ಯಗಳು ಅಥವಾ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆಧುನಿಕ, ನವೀಕರಿಸಿದ ನೋಟ ಮತ್ತು ವಿಭಾಗದಲ್ಲಿ ಅತ್ಯುತ್ತಮವಾದ ವೈಶಿಷ್ಟ್ಯಗಳೊಂದಿಗೆ, RV1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗಕ್ಕೆ ಹೊಸ ಮಟ್ಟದ ಪ್ರಾಯೋಗಿಕತೆಯನ್ನು ತರುತ್ತದೆ ಎಂದು ಕಂಪನಿ ಭರವಸೆ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








