ರಾಯಲ್ ಎನ್‌ಫೀಲ್ಡ್ ಬೈಕ್‌ಗಾಗಿ ಮುಗಿಬಿದ್ದ ಜನ: ಮನೆಗೆ ತರಲು EMI, ಆನ್ ರೋಡ್ ಬೆಲೆ ಎಷ್ಟು?
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇರುವ ಬೇಡಿಕೆ ವಿಭಿನ್ನವಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕೆಲವು ತಿಂಗಳುಗಳ ಹಿಂದೆ ಹೊಸ ಬೇರ್ 650 (Bear 650) ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಇಂಟರ್‌ಸೆಪ್ಟರ್ 650 , ಕಾಂಟಿನೆಂಟಲ್ GT 650 , ಸೂಪರ್ Meteor 60 ನಂತರ 650 ಟ್ವಿನ್ ಪ್ಲಾಟ್‌ಫಾರ್ಮ್ ಆಧಾರಿಸಿರುವ ಹೊಸ ಬೇರ್ ಮಾದರಿಯು ಐದನೇ 650 cc ಬೈಕ್ ಆಗಿದೆ.
ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಬೆಲೆಯು ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ರೂ.3,39,000 ಆದರೆ ಆನ್ ರೋಡ್ ಬೆಲೆಯು ರೂ.3,89,278 ಆಗಿದೆ. ಈ ಬೈಕಿಗೆ 6 % ಬಡ್ಡಿ ದರದಲ್ಲಿ 36 ತಿಂಗಳುಗಳ ಲೋನ್ ಆಯ್ಕೆ ಮಾಡಿದರೆ ಪ್ರತಿ ತಿಂಗಳು ನೀವು ರೂ.10,656 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕಿನ ಡೌನ್ ಪೇಮೆಂಟ್ ರೂ.39000 ಆಗಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕ್ ಮುಂಭಾಗದ ಯುಎಸ್‌ಡಿ ಫೋರ್ಕ್ ಸೆಟಪ್ ಅನ್ನು ಹೊಂದಿದ್ದರೆ, ಹಿಂಭಾಗದಲ್ಲಿ ಟ್ವಿನ್ ಶಾಕ್ ಗಳನ್ನು ಹೊಂದಿದೆ. ಇನ್ನು ಈ ಬೈಕ್ MRF ಅಭಿವೃದ್ಧಿಪಡಿಸಿದ ಡ್ಯುಯಲ್-ಪರ್ಪಸ್ ಟೈರ್‌ಗಳು ಹೆಚ್ಚು ಒರಟಾದ ನೋಟವನ್ನು ನೀಡುತ್ತದೆ.
ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕ್ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರ ಜೊತೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ. ಬೇರ್ 650 ಇಂಟರ್ಸೆಪ್ಟರ್ 650 ಗಿಂತ 2 ಕೆಜಿ ಹಗುರವಾಗಿದೆ ಮತ್ತು 830 ಎಂಎಂ ಎತ್ತರದ ಸೀಟ್ ಎತ್ತರ ಹೊಂದಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಬೇರ್ 650 (Royal Enfield Bear 650) ಬೈಕಿನಲ್ಲಿ 648 cc ಏರ್/ಆಯಿಲ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7240 rpm ನಲ್ಲಿ ಅದೇ 47 bhp ಪವರ್ ಮತ್ತು ಟಾರ್ಕ್ 5,150 rpm ನಲ್ಲಿ 56.5 Nm (4.2 Nm ಹೆಚ್ಚು) ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಬೇರ್ 650 ಬೈಕ್ ಮಾದರಿಯ ಸಿಲೂಯೆಟ್ ಇಂಟರ್‌ಸೆಪ್ಟರ್ 650 ಅನ್ನು ಹೋಲುತ್ತದೆ ಆದರೆ ಆ ಸ್ಕ್ರಾಂಬ್ಲರ್ ರೂಪದಲ್ಲಿ ಕಾಣಲು ನವೀಕರಿಸಲಾಗಿದೆ. ಅದೇ ಡಬಲ್ ಡೌನ್‌ಟ್ಯೂಬ್ ಚಾಸಿಸ್ ಅನ್ನು ಆಧರಿಸಿ, ಯುಎಸ್‌ಡಿಗಳನ್ನು ಸರಿಹೊಂದಿಸಲು ಬಲಪಡಿಸಲಾಗಿದೆ. ಇನ್ನು ಆದರೆ ಸಬ್‌ಫ್ರೇಮ್ ಅನ್ನು ಹೊಂದಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಫ್ಯೂಯಲ್ ಟ್ಯಾಂಕ್ ಇಂಟರ್ಸೆಪ್ಟರ್ 650 ನಂತೆಯೇ ಇದೆ ಆದರೆ ಆಕರ್ಷಕವಾದ ಮೋಜಿನ ಬಣ್ಣಗಳ ಆಯ್ಕೆಗಳಿವೆ. ಈ ಬೇರ್ 650 ಬೈಕ್ ಎಲ್‌ಇಡಿ ಲೈಟಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ರಾಯಲ್ ಎನ್‌ಫೀಲ್ಡ್ ಬೈಕ್ ಹೆಚ್ಚಿನ ಸಸ್ಪೆಕ್ಷನ್ ಚಲನೆಗಾಗಿ ಸ್ವಿಂಗರ್ಮ್ ಉದ್ದವಾಗಿದೆ. ಇದರ ಪರಿಣಾಮವಾಗಿ ಸುಮಾರು 61 ಎಂಎಂ ಉದ್ದದ ವೀಲ್‌ಬೇಸ್ ಇರುತ್ತದೆ.
ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಗ್ರೌಂಡ್ ಕ್ಲಿಯರೆನ್ಸ್ 184 ಎಂಎಂ, ಇಂಟರ್‌ಸೆಪ್ಟರ್‌ಗಿಂತ 10 ಎಂಎಂ ಹೆಚ್ಚು ಆಗಿದೆ. ಈ ಸ್ಕ್ರ್ಯಾಂಬ್ಲರ್-ಸ್ಟೈಲಿಂಗ್ ಬೈಕಿನ ಹಿಂಭಾಗದಲ್ಲಿ ಸ್ವಲ್ಪ ಸ್ಕೂಪ್-ಅಪ್ ಸೀಟ್, ಎರಡು-ಇನ್-ಒನ್ ಎಕ್ಸಾಸ್ಟ್, ಸೈಡ್ ಪ್ಯಾನೆಲ್‌ನಲ್ಲಿ ನಂಬರ್ ಬೋರ್ಡ್‌ಗಳು, ಅಗಲವಾದ ಒನ್-ಪೀಸ್ ಹ್ಯಾಂಡಲ್‌ಬಾರ್ ಮತ್ತು ಸುತ್ತಿನ ಟೈಲ್ ಲ್ಯಾಂಪ್ ಅನ್ನು ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








